ಇಸ್ರೇಲ್ ಸೇನೆ ಡಮಾಸ್ಕಸ್‌ನಲ್ಲಿ ಡ್ರೋನ್ ದಾಳಿ ನಡೆಸಿದೆ. ಸುದ್ದಿ ನಿರೂಪಕಿ ಸ್ಫೋಟದ ಶಬ್ದಕ್ಕೆ ಭಯಭೀತರಾಗಿ ಓಡಿಹೋಗುವ ದೃಶ್ಯ ಸೆರೆಯಾಗಿದೆ. ಇಸ್ರೇಲ್ ರಕ್ಷಣಾ ಸಚಿವರು ದಾಳಿಯನ್ನು ದೃಢಪಡಿಸಿದ್ದಾರೆ.

ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿ ಇಸ್ರೇಲ್ ಡಿಫೆನ್ಸ್ ಫೋರ್ಸ್ (IDF) ಬುಧವಾರ (ಜುಲೈ 16, 2025) ಸಿರಿಯನ್ ಮಿಲಿಟರಿ ಪ್ರಧಾನ ಕಚೇರಿ ಮತ್ತು ಅಧ್ಯಕ್ಷೀಯ ಭವನದ ಸಮೀಪ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯ ಭೀಕರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಾಳಿಯ ಸಂದರ್ಭದಲ್ಲಿ, ಸಮೀಪದ ಕಟ್ಟಡದಲ್ಲಿ ಸಿರಿಯಾದ ಟಿವಿ ಚಾನೆಲ್‌ನಲ್ಲಿ ನೇರ ಪ್ರಸಾರದಲ್ಲಿ ಸುದ್ದಿ ಓದುತ್ತಿದ್ದ ಮಹಿಳಾ ನಿರೂಪಕಿಯೊಬ್ಬಳು, ದೊಡ್ಡ ಸ್ಫೋಟದ ಶಬ್ದಕ್ಕೆ ಭಯಗೊಂಡು ಓಡಿಹೋಗುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Scroll to load tweet…

ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕ್ಯಾಟ್ಜ್ ಈ ದಾಳಿಯನ್ನು X ಪ್ಲಾಟ್‌ಫಾರ್ಮ್‌ನಲ್ಲಿ ದೃಢಪಡಿಸಿದ್ದು, ಡಮಾಸ್ಕಸ್‌ನ ಸಿರಿಯನ್ ಮಿಲಿಟರಿ ಪ್ರಧಾನ ಕಚೇರಿಯ ಪ್ರವೇಶ ದ್ವಾರವನ್ನು ಗುರಿಯಾಗಿಸಲಾಗಿದೆ ಎಂದು ತಿಳಿಸಿದ್ದಾರೆ. ಸಿರಿಯನ್ ಸೈನ್ಯವನ್ನು ಸುವೈದಾ ಪ್ರಾಂತ್ಯದಿಂದ ಹಿಮ್ಮೆಟ್ಟಿಸಲು ಎಚ್ಚರಿಕೆ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ:

Scroll to load tweet…

ನಾವು ಮೊದಲೇ ಎಚ್ಚರಿಕೆ ನೀಡಿದ್ದೆವು. ಈಗ ವಾರ್ನ್ ಮುಗಿದಿದೆ. ಇದೀಗ ಡಮಾಸ್ಕಸ್ ಮೇಲೆ ನಾವು ದೊಡ್ಡ ಹೊಡೆತ ನೀಡುತ್ತೇವೆ. IDF ಸುವೈದಾದಲ್ಲಿ ತನ್ನ ಕಾರ್ಯಾಚರಣೆಯನ್ನು ಮುಂದುವರಿಸುತ್ತದೆ' ಎಂದು ಕ್ಯಾಟ್ಜ್ ಘೋಷಿಸಿದ್ದಾರೆ. ಈ ದಾಳಿಯಿಂದ ಡಮಾಸ್ಕಸ್‌ನಲ್ಲಿ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಸುವೈದಾದಲ್ಲಿ ಸಿರಿಯನ್ ಸೈನ್ಯ ಮತ್ತು ಡ್ರೂಜ್ ಸಮುದಾಯದ ನಡುವಿನ ಘರ್ಷಣೆಯಿಂದಾಗಿ ಈಗಾಗಲೇ ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿರಿಯಾದ ಸರ್ಕಾರವು ಈ ದಾಳಿಯನ್ನು 'ಸಾರ್ವಭೌಮತ್ವದ ಉಲ್ಲಂಘನೆ' ಎಂದು ಖಂಡಿಸಿದ್ದು, ಅಂತರರಾಷ್ಟ್ರೀಯ ಸಮುದಾಯದಿಂದ ಮಧ್ಯಸ್ಥಿಕೆಗೆ ಮನವಿ ಮಾಡಿದೆ.