ಹಿಜಾಬ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಹಾಡು ಹಾಡಿದ್ದಕ್ಕೆ ಇರಾನ್ ಯುವತಿಯನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿರುವ ಘಟನೆ ಇರಾನ್‌ನಲ್ಲಿ ನಡೆದಿದೆ.
ಇರಾನ್ (ಆ.8) ಹಿಜಾಬ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಹಾಡು ಹಾಡಿದ್ದಕ್ಕೆ ಇರಾನ್ ಯುವತಿಯನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿರುವ ಘಟನೆ ಇರಾನ್‌ನಲ್ಲಿ ನಡೆದಿದೆ.
ಇರಾನ್‌ನಲ್ಲಿ ಹಿಜಾಬ್ ಕಡ್ಡಾಯಗೊಳಿಸಲಾಗಿದೆ. ಮೆಟ್ರೋ, ಪಾರ್ಕ್, ಮಾಲ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸಲದೇ ಓಡಾಡುವಂತಿಲ್ಲ. ಅಲ್ಲದೆ ಇರಾನ್ ಮಹಿಳೆಯರು ಸಾರ್ವಜನಿಕವಾಗಿ ಹಾಡುವುದು, ನೃತ್ಯ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ ಹಿಜಾಬ್ ಧರಿಸದೇ ಸಾರ್ವಜನಿಕವಾಗಿ ಹಾಡನ್ನು ಹಾಡುವುದು ಪ್ರದರ್ಶನ ಮಾಡುವುದಕ್ಕೆ ಹೆಸರುವಾಸಿಯಾಗಿರುವ ಸಿಂಗರ್ ಝರಾ ಎಸ್ಮೈಲಿ(Zara Esmaeili). ಇದು ಆಕೆಯ ಇಸ್ಲಾಮಿಕ್ ರಿಪಬ್ಲಿಕ್ ದಬ್ಬಾಳಿಕೆಯ ಕಾನೂನುಗಳ ವಿರುದ್ಧ ಪ್ರತಿಭಟನೆಯ ಒಂದು ರೂಪವಾಗಿದೆ ಎಂದು ಹೇಳಲಾಗುತ್ತಿದೆ.
ರಾತ್ರಿ ಬ್ರಾ ಹಾಕ್ಬೇಕಾ ಬೇಡ್ವಾ? ಕನ್ಫ್ಯೂಸ್‌ನಲ್ಲಿದ್ದಾರೆ ಇಸ್ರೇಲಿ ಮಹಿಳೆಯರು!
ಹಿಜಾಬ್ ಇಲ್ಲದೆ ಸ್ವಾತಂತ್ರ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹಾಡುವ ಝರಾ ಸೋಷಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದಿದ್ದಾಳೆ. ಜೊತೆಗೆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಝರಾ. ಇತ್ತೀಚೆಗೆ ಆಮಿ ವೈನ್‌ಹೌಸ್‌ನ 'ಬ್ಯಾಕ್ ಟು ಬ್ಲ್ಯಾಕ್'(Amy Winehouses song 'Back to Black') ಹಾಡನ್ನು ಹಿಜಾಬ್ ಧರಿಸದೆ ಸಾರ್ವಜನಿಕವಾಗಿ ಹಾಡಿದ್ದು ಸೋಷಿಯಲ್ ಮಿಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ಅನೇಕ ಕಟ್ಟರ್ ಮುಸ್ಲಿಮರು ತೀವ್ರವಾಗಿ ಖಂಡಿಸಿದ್ದರು. ಎಲ್ಲೆಡೆ ಆಕ್ರೋಶ ಕೇಳಿಬಂದ ಹಿನ್ನೆಲೆ ಆಕೆಯನ್ನ ಬಂಧಿಸಿ ಜೈಲಿಗಟ್ಟಿದ ಪೊಲೀಸರು. ಆ ಬಳಿಕ ಆಕೆಯ ಇರುವಿಕೆ ಬಗ್ಗೆ ಸುಳಿವಿಲ್ಲ. ಕುಟುಂಬಸ್ಥರಿಗೆ ಸಹ ಬಂಧನ ಬಳಿಕ ಆಕೆಯನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಎಲ್ಲಿದ್ದಾಳೆ, ಹೇಗಿದ್ದಾಳೆ ಎಂಬ ಬಗ್ಗೆ ಮಾಹಿತಿ ಸಿಗದಿದ್ದಕ್ಕೆ ಕುಟುಂಬಸ್ಥರು ಆತಂಕಕ್ಕೀಡಾಗಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ
ಗಾಯಕಿ ಬಂಧನ ಖಂಡಿಸಿದ ಇರಾನ್ ಗಾಯಕ:
ಸಾರ್ವಜನಿಕವಾಗಿ ಹಿಜಾಬ್ ಇಲ್ಲದೆ ಹಾಡಿದ ಕಾರಣಕ್ಕೆ ಝರಾ ಇಸ್ಮೈಯಿಲಿ ಬಂಧನ ಮಾಡಿರುವುದನ್ನ ಇರಾನಿನ ಗಾಯಕ ಮತ್ತು ಬರ್ಲಿನ್ ಮೂಲದ ರೈಟ್ ಟು ಸಿಂಗ್ ಅಭಿಯಾನದ ಸಂಸ್ಥಾಪಕ ಫರ್ವೇಜ್ ಫರ್ವರ್ಡಿಸ್ ಖಂಡಿಸಿದ್ದಾರೆ.
ಜಾರಾ, ಇರಾನಿನ ಮಹಿಳಾ ಗಾಯಕಿಯಾಗಿದ್ದು, ಸಾರ್ವಜನಿಕವಾಗಿ ಹಿಜಾಬ್ ಇಲ್ಲದೆ ಹಾಡಿದ ಅಪರಾಧಕ್ಕಾಗಿ ಟೆಹ್ರಾನ್ ಸೆಂಟ್ರಲ್ ಡಿಟೆನ್ಶನ್ ಸೆಂಟರ್ (ಫಶಾಫೌಹ್) ನಲ್ಲಿ ಸೆರೆಮನೆಯಲ್ಲಿರಿಸಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆಯೂ ಸೆಪ್ಟಂಬರ್‌ನಲ್ಲಿ 22 ವರ್ಷದ ಕುರ್ದಿಶ್ ಮಹಿಳೆ ಮಹ್ಸಾ ಅಮಿನಿ ಬಂಧಿಸಲಾಗಿತ್ತು. ಬಂಧನದಲ್ಲಿದ್ದಾಗ ಸಾವನ್ನಪ್ಪಿದ್ದ ಮಹಿಳೆ. ಈ ಘಟನೆ ಬಳಿಕ ಇರಾನ್ ವಿರುದ್ಧ ರಾಷ್ಟ್ರವ್ಯಾಪಿ ಸರ್ಕಾರದ ವಿರುದ್ಧ ಪ್ರತಿಭಟನೆಗಳಿಗೆ ಸಾಕ್ಷಿಯಾಗಿತ್ತು. ಇದೀಗ ಮತ್ತೆ ಇರಾನಿನ ಗಾಯಕಿಯನ್ನ ಬಂಧಿಸಿರುವುದು ಆಕ್ರೋಶಕ್ಕೂ ಕಾರಣವಾಗಿದೆ.
