ಎಲ್ಲರೂ ವ್ಯಾಟ್ಸಾಪ್ ಖಾತೆ ಡಿಲೀಟ್ ಮಾಡಲು ಜನತೆಗೆ ಇರಾನ್ ಸೂಚನೆ ನೀಡಿದೆ. ಇರಾನ್- ಇಸ್ರೇಲ್ ನಡುವಿನ ಯುದ್ಧದ ಬೆನ್ನಲ್ಲೇ ಜನತೆಗೆ ವ್ಯಾಟ್ಸಾಪ್ ಅನ್‌ಇನ್‌ಸ್ಟಾಲ್ ಮಾಡಲು ನಿರ್ದೇಶನ ಕೊಟ್ಟಿದ್ದೇಕೆ?

ಇರಾನ್(ಜೂ.18) ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇಸ್ರೇಲ್ ಏರ್‌ಸ್ಟ್ರೈಕ್‌ಗೆ ಪ್ರತಿಯಾಗಿ ಇರಾನ್ ಮಿಸೈಲ್ ದಾಳಿ ನಡೆಸಿದೆ. ಇದೀಗ ಇರಾನ್ ಸತತವಾಗಿ ಮಿಸೈಲ್ ದಾಳಿ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡುತ್ತಿದೆ. ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಅಪಾಯದ ಮಟ್ಟ ಮೀರಿದೆ. ಸದ್ಯ ಯಾರೂ ಮಧ್ಯಪ್ರವೇಶಿಸಿದರೂ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈ ಯುದ್ಧದ ನಡುವೆ ಇರಾನ್ ಸರ್ಕಾರ ಜನತೆಗೆ ಹಲವು ವಾರ್ನಿಂಗ್ ನೀಡಿದೆ. ಈ ಪೈಕಿ ಇರಾನ್ ಜನತೆಗೆ ವ್ಯಾಟ್ಸಾಪ್ ಡಿಲೀಟ್ ಮಾಡಲು ವಾರ್ನಿಂಗ್ ನೀಡಿದೆ. ಈ ಕುರಿತು ಇರಾನ್ ರಾಷ್ಟ್ರೀಯ ಟಿವಿ ಮಾಧ್ಯಮ ಸೇರಿದಂತೆ ಇತರ ಮಾಧ್ಯಮಗಳ ಮೂಲಕ ಸರ್ಕಾರ ಜನತೆಗೆ ಸೂಚನೆ ನೀಡಿದೆ.

ವ್ಯಾಟ್ಸಾಪ್‌ನಿಂದ ಲೋಕೇಶನ್ ಟ್ರಾಕ್

ಇರಾನ್ ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಇರಾನ್ ಜನತೆಗೆ ನೀಡಿರುವ ಪ್ರಮಖ ಸೂಚನೆ ಪೈಕಿ ವ್ಯಾಟ್ಸಾಪ್ ಡಿಲೀಟ್‌ಗೆ ಇರಾನ್ ಕಾರಣ ಕೂಡ ಹೇಳಿದೆ. ಇರಾನ್ ಜನತೆಯ ವ್ಯಾಟ್ಸಾಪ್ ಬಳಕೆ ಮಾಡುವುದರಿಂದ ಇರನ್‌ನ ಪ್ರಮುಖ ಲೋಕೇಶನ್‌ಗಳು ಇಸ್ರೇಲ್‌ಗೆ ತಿಳಿಯುತ್ತಿದೆ. ವ್ಯಾಟ್ಸಾಪ್ ಇರಾನ್ ಪ್ರಮುಖ ಸ್ಥಳಗಳ ಲೋಕೇಶನ್ ಟ್ರಾಕ್ ಮಾಡುತ್ತಿದೆ. ಇದು ಇಸ್ರೇಲ್ ಮಿಲಿಟರಿಗೆ ಸಹಾಯವಾಗುತ್ತಿದೆ. ನಮ್ಮ ಪ್ರಮುಖ ಸ್ಥಳಗಳ ಲೋಕೇಶನ್ ಶತ್ರುವಿಗೆ ಸ್ಪಷ್ಟವಾಗಿ ತಿಳಿಯುತ್ತಿರವು ಕಾರಣ ವ್ಯಾಟ್ಸಾಪ್ ಡಿಲೀಟ್ ಮಾಡಲು ಸೂಚಿಸಿದೆ.

ಇರಾನ್‌ನಲ್ಲಿ ಅತೀ ಹೆಚ್ಚಿನ ಮಂದಿ ವ್ಯಾಟ್ಸಾಪ್ ಬಳಕೆ ಮಾಡುತ್ತಿದ್ದಾರೆ. ವ್ಯಾಟ್ಸಾಪ್ ಲೋಕೇಶನ್ ಹಂಚಿಕೊಳ್ಳುತ್ತಿದೆ ಅನ್ನೋದಕ್ಕೆ ಇರಾನ ಸ್ಪಷ್ಟ ದಾಖಲೆ, ಸಾಕ್ಷಿ ನೀಡಿಲ್ಲ. ಆದರೆ ಯುದ್ಧದ ತೀವ್ರತೆಯಲ್ಲ ಈ ಸೂಚನೆಯನ್ನು ನೀಡಿದೆ. ಇದರ ಬೆನ್ನಲ್ಲೇ ಇರಾನ್ ಜತೆಗೆ ವ್ಯಾಟ್ಸಾಪ್ ಡಿಲೀಟ್ ಮಾಡುತ್ತಿದ್ದಾರೆ. ಹಲವರು ವ್ಯಾಟ್ಸಾಪ್ ಅನ್‌ಇನ್‌ಸ್ಟಾಲ್ ಮಾಡಿ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಆರೋಪ ತಳ್ಳಿ ಹಾಕಿದ ಮೆಟಾ ಸಂಸ್ಥೆ

ವ್ಯಾಟ್ಸಾಪ್ ಪೇರೆಂಟ್ ಕಂಪನಿ ಮೆಟಾ ಇರಾನ್ ಮಾಡಿದ ಆರೋಪವನ್ನು ತಳ್ಳಿ ಹಾಕಿದೆ. ವ್ಯಾಟ್ಸಾಪ್ ಬಳಕೆದಾರರ ಯಾವುದೇ ಮಾಹಿತಿ ಸೋರಿಕೆಯಾಗುತ್ತಿಲ್ಲ. ಬಳಕೆದಾರರು ಲೋಕೇಶನ್ ಹಂಚಿಕೊಳ್ಳುವುದಿಲ್ಲ. ಇದು ಅಸಾಧ್ಯ. ವೈಯುಕ್ತಿಕ ಡೇಟಾಗಳ ಗೌಪ್ಯತೆ ಕಾಪಾಡಿಕೊಳ್ಳಲಾಗುತ್ತಿದೆ. ಇದನ್ನು ಯಾವುದೇ ದೇಶಕ್ಕೆ ಹಂಚುತ್ತಿಲ್ಲ. ಜನರ ವಿಶ್ವಾಸಕ್ಕ ಧಕ್ಕೆ ತರುವುದಿಲ್ಲ ಎಂದು ಮೆಟಾ ಸ್ಪಷ್ಟಪಡಿಸಿದೆ.

ವ್ಯಾಟ್ಸಾಪ್ ಎಂಡ್ ಟು ಎಂಡ್ ಎನ್ಸ್‌ಸ್ಕ್ರಿಪ್ಶನ್ ಮೂಲಕ ಬಳಕೆದಾರರ ಸುರಕ್ಷತೆ ಖಾತ್ರಿಪಡಿಸುತ್ತಿದೆ. ವ್ಯಾಟ್ಸಾಪ್ ಎಂದಿಗೂ ಯಾವುದೇ ಬಳಕೆದಾರರ ಲೋಕೇಶನ್ ಟ್ರಾಕ್ ಮಾಡುವುದಿಲ್ಲ. ಯಾವುದೇ ಕಾರಣಕ್ಕೂ ಸುರಕ್ಷತೆ ಮಾನದಂಡ ಉಲ್ಲಂಘಿಸುವುದಿಲ್ಲ. ಇದು ಅಸಾಧ್ಯವಾದ ಮಾತು. ಈ ರೀತಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಮೆಟಾ ಸ್ಪಷ್ಟಪಡಿಸಿದೆ.