Asianet Suvarna News Asianet Suvarna News

ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ, 48 ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯ!

ಭಾರತ ಹಾಗೂ ನೇಪಾಳ ಗಡಿಯಲ್ಲಿ ಭೂಕಂಪ ಸಂಭವಿಸಿ ಸಾವು ನೋವು ಸಂಭವಿಸಿದೆ. ಇದೀಗ ಇಂಡೋನೇಷಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 48 ಮಂದಿ ಸಾವನ್ನಪ್ಪಿದರೆ, 700ಕ್ಕೂ ಹೆಚ್ಚು ಮಂದಿ ಗಾಯಗೊಡಿದ್ದಾರೆ. ಈ ಭೂಕಂಪ ಇತ್ತೀಚೆಗೆ ಶೃಂಗಸಭೆ ನಡೆದ ಪ್ರಾಂತ್ಯದಲ್ಲೇ ನಡೆದಿದೆ.

Indonesia report 5 6 magnitude earthquake in West Java province 20 died and more than 300 Injured ckm
Author
First Published Nov 21, 2022, 3:23 PM IST

ಜಕರ್ತಾ(ನ.21): ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ವಿಶ್ವದ ಪ್ರಬಲ ರಾಷ್ಟ್ರಗಳ ನಾಯಕರು ಇತ್ತೀಚೆಗೆ ಇಂಡೋನೇಷಿಯಾದ ಬಾಲಿಯಲ್ಲಿ ಶೃಂಗಸಭೆಗಾಗಿ ಸೇರಿದ್ದರು. ಈ ಶೃಂಗಸಭೆ ಪೂರ್ವ ಜಾವಾದಲ್ಲಿ ನಡೆದಿತ್ತು. ಈ ಸಭೆ ನಡೆದ ಒಂದೇ ವಾರದಲ್ಲಿ ಇದೀಗ ಪಶ್ಚಿಮ ಜಾವಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆ ದಾಖಲಾಗಿದೆ. ಪರಿಣಾಮ 48 ಮಂದಿ ಮೃತಪಟ್ಟಿದ್ದರೆ, 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವು ಮಂದಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ. ಹೀಗಾಗಿ ರಕ್ಷಣಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ.  ಪಶ್ಚಿಮ ಜಾವಾದ ಸಿಯಾಂಜೂರ್ ಬಳಿ ಭೂಕಂಪ ಸಂಭವಿಸಿದೆ. 

ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ರಕ್ಷಣಾ ತಂಡಗಳು ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿದೆ. ಇದೀಗ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇತ್ತೀಚೆಗಷ್ಟೆ ಇಂಡೋನೇಷಿಯಾದ ಕೆಲ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. 6.9ರ ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. 

ದೆಹಲಿ ಬಳಿಕ ಇದೀಗ ಹಿಮಾಚಲ ಪ್ರದೇಶದಲ್ಲಿ ಭೂಕಂಪ, 4.1 ತೀವ್ರತೆ ದಾಖಲು

ನ.8ಕ್ಕೆ ನೇಪಾಳದಲ್ಲಿ ಭೂಕಂಪ, 6 ಸಾವು
ಹಿಮಾಲಯ ಭಾಗದಲ್ಲಿ ಕಳೆದ ಐದಾರು ದಿನಗಳಿಂದ ಭೂಕಂಪಗಳು ಸಂಭವಿಸುತ್ತಿದ್ದು, ಮಂಗಳವಾರ ರಾತ್ರಿ 1.57ರ ಸುಮಾರಿಗೆ 6.3 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಈ ಪ್ರದೇಶ ಭಾರತದ ಪಿತೋರ್‌ಗಢದಿಂದ 90 ಕಿ.ಮೀ. ದೂರದಲ್ಲಿದೆ. ಲ್ಲದೇ ಉತ್ತರಾಖಂಡ ಮತ್ತು ನೇಪಾಳ ಭಾಗದಲ್ಲೂ ಮುಂಜಾನೆ 3.15 ಮತ್ತು 6.27ರ ಸುಮಾರಿಗೆ ಕ್ರಮವಾಗಿ 3.6 ಮತ್ತು 4.3 ಮ್ಯಾಗ್ನಿಟ್ಯೂಡ್‌ನಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ ಹೇಳಿದೆ.

ನೇಪಾಳದಲ್ಲಿ ಸಂಭವಿಸಿರುವ ಪ್ರಭಲ ಭೂಕಂಪಕ್ಕೂ ಮೊದಲು 2 ಮಧ್ಯಮ ಭೂಕಂಪಗಳು ಸಂಭವಿಸಿವೆ. ಮಂಗಳವಾರ ರಾತ್ರಿ 9.07ರ ಸುಮಾರಿಗೆ 5.7 ಮ್ಯಾಗ್ನಿಟ್ಯೂಡ್‌ ಮತ್ತು 9.56ರ ಸುಮಾರಿಗೆ 4.1 ಮ್ಯಾಗ್ನಿಟ್ಯೂಡ್‌ ಪ್ರಮಾಣದ ಭೂಕಂಪ ಸಂಭವಿಸಿದೆ. ದೋಟಿಯಲ್ಲಿ ಸಂಭವಿಸಿದ ಈ ದುರ್ಘಟನೆಯಲ್ಲಿ 6 ಜನರು ಸಾವನ್ನಪ್ಪಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ದೆಹಲಿ, ಗಾಜಿಯಾಬಾದ್‌ ಮತ್ತು ಗುರುಗ್ರಾಮ, ಲಖನೌಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.

Breaking ದೆಹಲಿಯಲ್ಲಿ ಪ್ರಬಲ ಭೂಕಂಪ, 5 ಸೆಕೆಂಡ್ ಕಂಪಿಸಿದ ಭೂಮಿ!

ಇತ್ತೀಚೆಗೆ ಕರ್ನಾಟಕದ ಹಲವು ಭಾಗಗಳಲ್ಲಿ ಲುಘು ಭೂಕಂಪನ ಸಂಭವಿಸಿತ್ತು. ಗಡಿ ಜಿಲ್ಲೆ ಬೀದರ್‌ನ ಔರಾದ್‌ ತಾಲೂಕಿನ ಉಜನಿ ಗ್ರಾಮದ ಬಳಿ ಮತ್ತೆ ಭೂಮಿ ಕಂಪಿಸಿತ್ತು.  ರಿಕ್ಟರ್‌ ಮಾಪಕದಲ್ಲಿ ಕಂಪನದ ಪ್ರಮಾಣ 1.7ರಷ್ಟುದಾಖಲಾಗಿತ್ತು. ಇನ್ನು ವಿಜಯಪುರದಲ್ಲಿ ಹಲವು ಭಾರಿ ಭೂಮಿ ಕಂಪಿಸಿದ ಅನುಭವವಾಗಿತ್ತು. ಲಘು ಭೂಕಂಪನವಾದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಹಲವು ಬಾರಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow Us:
Download App:
  • android
  • ios