Asianet Suvarna News Asianet Suvarna News

ದೆಹಲಿ ಬಳಿಕ ಇದೀಗ ಹಿಮಾಚಲ ಪ್ರದೇಶದಲ್ಲಿ ಭೂಕಂಪ, 4.1 ತೀವ್ರತೆ ದಾಖಲು

ಭಾರತ ಹಾಗೂ ನೇಪಾಳ ಗಡಿಯಲ್ಲಿ ಎರಡೆರಡು ಬಾರಿ ಭೂಕಂಪನ ಭಾರಿ ಆತಂಕಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಹಿಮಾಚಲ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ.

4 1 Magnitude Earthquake Hits Himachal Pradesh tremors 5 km below the ground says National Center for Seismology ckm
Author
First Published Nov 16, 2022, 10:39 PM IST

ಶಿಮ್ಲಾ(ನ.16); ವಿಧಾನಸಭಾ ಚುನಾವಣೆ ಮುಗಿಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಹಿಮಾಚಲ ಪ್ರದೇಶ ಜನರಲ್ಲಿ ಏಕಾಏಕಿ ಆತಂಕದ ಛಾಯೆ ಮೂಡಿಸಿದೆ. ದೆಹಲಿ ಬಳಿಕ ಇದೀಗ ಹಿಮಾಚಲ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಇಂದು(ನ.16) ರಾತ್ರಿ 9.32ರ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪನದಲ್ಲಿ 4.1ರಷ್ಟು ತೀವ್ರತೆ ದಾಖಲಾಗಿದೆ. ಹಿಮಾಲಚಲ ಪ್ರದೇಶದ ಮಂಡಿ ವಲಯದಲ್ಲಿ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸುವ ಅನುಭವವಾಗುತ್ತಿದ್ದಂತೆ ಜನರು ಮನೆ ಹಾಗೂ ಕಟ್ಟಡಗಳಿಂದ ಹೊರಗೋಡಿ ಬಂದಿದ್ದಾರೆ. ರಾತ್ರಿ ಸಮಯವಾಗಿದ್ದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. 5 ಸೆಕೆಂಡ್ ಕಂಪಿಸಿದ ಭೂಮಿ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಅದೃಷ್ಟವಶಾತ್ ಇದುವರೆಗೂ ಯಾವುದೇ ಸಾವು ನೋವು ಸಂಭಸಿಲ್ಲ. ಇದೀಗ ಭೂಕಂಪನದ ಅನುಭವದಿಂದ ಹೊರಬಂದಿರುವ ಜನರು ಮತ್ತೆ ಮನೆ ಸೇರಿಕೊಳ್ಳಲು ನಿರಾಕರಿಸಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳ ತಂಡ ಧಾವಿಸಿದೆ. ಇತ್ತ ಮಂಡಿ, ರಾಜಧಾನಿ ಶಿಮ್ಲಾ ಸೇರಿದಂತೆ ಹಲವು ಭಾಗಗಳಲ್ಲಿ ಮುನ್ಸೂಚನೆ ನೀಡಲಾಗಿದೆ. ಇತ್ತೀಚೆಗಷ್ಟೇ ಭಾರತ ಹಾಗೂ ನೇಪಾಳ ಗಡಿಯಲ್ಲಿ ಭೂಕಂಪ ಸಂಭವಿಸಿತ್ತು. ನೇಪಾಳದಲ್ಲಿ ತೀವ್ರ ಹಾನಿ ಮಾಡಿದ ಈ ಭೂಕಂಪ, ಭಾರತದಲ್ಲೂ ಭೂಮಿ ಕಂಪಿಸಿ ಆತಂಕಕ್ಕೆ ಕಾರಣವಾಗಿತ್ತು.

Breaking ದೆಹಲಿಯಲ್ಲಿ ಪ್ರಬಲ ಭೂಕಂಪ, 5 ಸೆಕೆಂಡ್ ಕಂಪಿಸಿದ ಭೂಮಿ!

ನೇಪಾಳ, ದಿಲ್ಲಿ, ಉತ್ತರಾಖಂಡದಲ್ಲಿ 5.4 ತೀವ್ರತೆ ಭೂಕಂಪ
ನೇಪಾಳ, ರಾಷ್ಟ್ರ ರಾಜಧಾನಿ ದೆಹಲಿ, ಸುತ್ತಮುತ್ತ, ಉತ್ತರಾಖಂಡ ಸೇರಿ ಹಲವು ಕಡೆ ಶನಿವಾರ ರಾತ್ರಿ 8ಕ್ಕೆ ಭೂಕಂಪನ ಅನುಭವವಾಗಿದೆ. ಆದರೆ ಯಾವುದೇ ಹಾನಿ ಸಂಭವಿಸಿದರ ಬಗ್ಗೆ ಮಾಹಿತಿ ದೊರಕಿಲ್ಲ.ಇದಲ್ಲದೆ, ನೋಯ್ಡಾ, ಗುರುಗ್ರಾಮ ಸೇರಿದಂತೆ ಹಲವೆಡೆ ಭೂಕಂಪನದ ಅನುಭವವಾಗಿದೆ. ರಿಕ್ಟರ್‌ ಮಾಪನದಲ್ಲಿ 5.4 ತೀವ್ರತೆ ಹೊಂದಿದ್ದಾಗಿ ತಿಳಿದುಬಂದಿದೆ. ನೇಪಾಳದಲ್ಲಿ ಕಳೆದ ಒಂದು ವಾರದಲ್ಲಿ ಸಂಭವಿಸಿದ ನಂತರದ 3ನೇ ಭೂಕಂಪನ ಇದಾಗಿದೆ. ಶನಿವಾರ ಮತ್ತೆ ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ. ಕಳೆದ ಬುಧವಾರ ನೇಪಾಳದಲ್ಲಿ ಸಂಭವಿಸಿದ ಭೂಕಂಪ 6 ಜನರನ್ನು ಬಲಿ ಪಡೆದಿತ್ತು.

ಕಳೆ ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದ ಕಾರಣದಿಂದ 6 ಮಂದಿ ಮೃತಪಟ್ಟಿರುವ ಘಟನೆ ನೇಪಾಳದ ಭಾಗದಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದೆ. ಈ ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 6.3ರಷ್ಟುದಾಖಲಾಗಿದೆ. ಉತ್ತರ ಭಾರತ ಮತ್ತು ನೇಪಾಳದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

 

ಭೂಕಂಪನದ ಭಯಕ್ಕೆ ಮನೆ ಬಿಟ್ಟು ಓಡಿದ ಖ್ಯಾತ ನಟ; ಸ್ನೇಹಿತನ ಮನೆಯಲ್ಲಿ ಆಶ್ರಯ

ಕೆಳ ಹಿಮಾಲಯ ಭಾಗದಲ್ಲಿ ಕಳೆದ ಐದಾರು ದಿನಗಳಿಂದ ಭೂಕಂಪಗಳು ಸಂಭವಿಸುತ್ತಿದ್ದು, ಮಂಗಳವಾರ ರಾತ್ರಿ 1.57ರ ಸುಮಾರಿಗೆ 6.3 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಈ ಪ್ರದೇಶ ಭಾರತದ ಪಿತೋರ್‌ಗಢದಿಂದ 90 ಕಿ.ಮೀ. ದೂರದಲ್ಲಿದೆ. ಲ್ಲದೇ ಉತ್ತರಾಖಂಡ ಮತ್ತು ನೇಪಾಳ ಭಾಗದಲ್ಲೂ ಮುಂಜಾನೆ 3.15 ಮತ್ತು 6.27ರ ಸುಮಾರಿಗೆ ಕ್ರಮವಾಗಿ 3.6 ಮತ್ತು 4.3 ಮ್ಯಾಗ್ನಿಟ್ಯೂಡ್‌ನಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ ಹೇಳಿದೆ.

Follow Us:
Download App:
  • android
  • ios