ರಸ್ತೆಗುಂಡಿಯಲ್ಲಿ ನಿಂತ ನೀರಿನಲ್ಲಿ ವ್ಯಕ್ತಿಯೋರ್ವ ಸ್ನಾನ ಮಾಡುತ್ತಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಇದಾದ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದೆ.
ಜಕಾರ್ತ (ಮಾ.28): ಗುಂಡಿ ಬಿದ್ದ ರಸ್ತೆ ಈಜುಕೊಳದಂತಿದೆ. ಅದರಲ್ಲಿ ಊರವರೆಲ್ಲಾ ಸ್ನಾನ ಮಾಡಬಹುದು ಎಂದು ಆಡಿಕೊಳ್ಳುತ್ತಿರುತ್ತೇವೆ.
ಆದರೆ, ಇಲ್ಲೊಬ್ಬ ವ್ಯಕ್ತಿ ರಸ್ತೆ ಗುಂಡಿಯಲ್ಲೇ ಸ್ನಾನ ಮಾಡಿ, ಮೀನು ಹಿಡಿದು ಈ ಮಾತನ್ನು ನಿಜವಾಗಿಸಿದ್ದಾನೆ.
ರಸ್ತೆ ಗುಂಡಿ ಸರಿಪಡಿಸುವವರೆಗೆ ಟೋಲ್ ದರ ಶೇ.50 ರಷ್ಟು ಕಡಿತ; ಮದ್ರಾಸ್ ಹೈಕೋರ್ಟ್! ...
ಹೌದು, ಇಂಡೋನೇಷ್ಯಾದ ಅಮಖ್ ಒಹಾನ್ ಎಂಬಾತ ನೀರು ತುಂಬಿದ ರಸ್ತೆ ಗುಂಡಿಯಲ್ಲಿ ಕುಳಿತು ಸ್ನಾನ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈಲರ್ ಆಗಿದೆ.
ಇದರಿಂದ ಎಚ್ಚೆತ್ತಿರುವ ಸರ್ಕಾರ ರಸ್ತೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ.
ಭಾರತದಲ್ಲಿಯೂ ಈ ರೀತಿಯ ಅನೇಕ ಘಟನೆಗಳು ನಡೆದಿದ್ದು, ರಸ್ತೆಗಳ ಗುಂಡಿಗಳ ಬಗ್ಗೆ ಎಚ್ಚರಿಸುವ ಕೆಲಸಗಳು ಆಗುತ್ತಲೇ ಇರುತ್ತವೆ.
