ಕ್ಯಾಲಿಫೋರ್ನಿಯಾ(ಮೇ.28):  ಕಾರ್ಮಿಕನೊಬ್ಬ ಕ್ಯಾಲಿಫೋರ್ನಿಯಾ ಸ್ಯಾನ್‌ಜೋಸ್‌ನಲ್ಲಿ ನಡೆಸಿದ ದಿಡೀರ್ ಗುಂಡಿನ ದಾಳಿಗೆ  ಭಾರತೀಯ ಮೂಲಕ ಸಿಖ್ ತಪ್ತೇಜ್‌ದೀಪ್ ಸಿಂಗ್(36) ನಿಧನರಾಗಿದ್ದಾರೆ. ಈ ಮೂಲಕ ಈ ದಾಳಿಯಲ್ಲಿ ಸಾವೀಗೀಡಾದವರ ಸಂಖ್ಯೆ 9ಕ್ಕೆ ಏರಿದೆ.

ಪೊಲೀಸರ ಮೇಲೆ ಹಲ್ಲೆ: ರೌಡಿಶೀಟರ್‌ ಗುಂಡು ಹಾರಿಸಿ ಸೆರೆ

ಸ್ಯಾನ್‌ ಜೋಸ್  ವಲಯದಲ್ಲಿ ರೈಲ್ವೇ ಇಲಾಖೆ ಕಾರ್ಮಿಕನೊಬ್ಬ ಓಪನ್ ಫೈರಿಂಗ್ ನಡೆಸಿದ್ದಾರೆ. ರೈಲ್ವೇ ಇಲಾಖೆಯ ಉದ್ಯೋಗಿಯಾಗಿರುವ ತಪ್ತೇಜ್‌ದೀಪ್ ಸಿಂಗ್,  ಮಹಿಳೆಯೊಬ್ಬರನ್ನು ಸುರಕ್ಷಿತವಾಗಿ ಕಂಟ್ರೋಲ್‌ ರೂಂಗೆ ಕರೆ ತರುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಗುಂಡು ತುಗಲಿ ತಪ್ತ್‌ತೇಜ್‌ದೀಪ್ ಸಿಂಗ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ.

ಮೇ 26 ರ ಬುಧವಾರ ಸ್ಯಾನ್ ಜೋಸ್‌ನ ರೈಲು ಪ್ಲಾಟ್‌ಫಾರ್ಮ್ ಸನಿಹದಲ್ಲೇ ಗುಂಡಿನ ದಾಳಿ ನಡೆದಿದೆ. ಭೀಕರ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದಾರೆ. ರೈಲ್ವೇ ಅಧಿಕಾರಿಯೂ ಗುಂಡಿನ ದಾಳಿಗೆ ಬಲಿಯಾಗಿರುವುದಾಗಿ ವರದಿಯಾಗಿದೆ. 

ಅಮೆರಿಕದಲ್ಲಿರುವ ಸ್ವಾಮಿನಾರಾಯಣ ಮಂದಿರದ ಮೇಲೆ FBI ರೇಡ್!.

ರೈಲು ಕಾರ್ಮಿಕರ ಯೂನಿಯನ್ ಸಭೆ ವೇಳೆ ಘಟನೆ ನಡೆದಿದೆ. ಈ ಸಭೆಯಲ್ಲಿ 80 ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿಯಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಅಮೆರಿಕದಲ್ಲಿ ಈ ರೀತಿಯ ಗುಂಡಿನ ದಾಳಿಗಳು ಪದೇ ಪದೆ ನಡೆಯುತ್ತಿದೆ. 2021ರಲ್ಲಿ ಮಾಸ್ ಫೈರಿಂಗ್ ಸಂಖ್ಯೆ ಇದೀಗ 15ಕ್ಕೆ ಏರಿದೆ.