Asianet Suvarna News Asianet Suvarna News

NRI shot dead: ಅಮೆರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಯ ಹತ್ಯೆಗೈದು ದರೋಡೆ

  • ಅಮೆರಿಕಾದಲ್ಲಿ ಅನಿವಾಸಿ ಭಾರತೀಯನ ಹತ್ಯೆ 
  • ಬ್ಯಾಂಕ್‌ ಮುಂದೆ ಹತ್ಯೆಗೈದು ಹಣ ದರೋಡೆ ಮಾಡಿದ ದುಷ್ಕರ್ಮಿ
  • ಗುಜರಾತ್‌ ಮೂಲದ ಅಮಿತ್‌ ಪಟೇಲ್‌ ಹತ್ಯೆಗೀಡಾದ ಎನ್‌ಆರ್‌ಐ
Indian origin man from Gujarat robbed and shot dead in America akb
Author
Bangalore, First Published Dec 7, 2021, 4:16 PM IST

ವಡೋದರಾ(ಡಿ.7): ಅಮೆರಿಕಾದಲ್ಲಿ ಅನಿವಾಸಿ ಭಾರತೀಯ ಉದ್ಯಮಿಯೊಬ್ಬರನ್ನು ದರೋಡೆಕೋರನೋರ್ವ ಗುಂಡಿಕ್ಕಿ ಹತ್ಯೆಗೈದು ಹಣ ದರೋಡೆ ಮಾಡಿದ ಘಟನೆ ನಡೆದಿದೆ. ಗುಜರಾತ್‌ನ ಖೇಡಾ(Kheda district) ಜಿಲ್ಲೆಯ ಅನಿವಾಸಿ ಭಾರತೀಯ  45 ವರ್ಷದ ಅಮಿತ್‌ ಪಟೇಲ್‌(Amit Patel) ಹತ್ಯೆಯಾದ ಎನ್‌ಆರ್‌ಐ. ಅಮೆರಿಕಾದ ಜಾರ್ಜಿಯಾ(Georgia)ದಲ್ಲಿ ಘಟನೆ ನಡೆದಿದೆ. ಅಮಿತ್ ಪಟೇಲ್‌ ಹಲವರು ವರ್ಷಗಳಿಂದ ಅಮೆರಿಕಾದಲ್ಲೇ ನೆಲೆಸಿದ್ದರು. 

ಅಮಿತ್‌ ಅವರಿಗೆ ಅಪರಿಚಿತ ದುಷ್ಕರ್ಮಿಯೋರ್ವ ತುಂಬಾ ಹತ್ತಿರದಿಂದ ಗುಂಡಿಕ್ಕಿದ್ದಾನೆ. ಬ್ಯೂನಾ ವಿಸ್ಟಾ(Buena Vista) ರಸ್ತೆಯಲ್ಲಿರುವ ಸೈನೋವಸ್ ಬ್ಯಾಂಕ್‌(Synovus Bank)ನ ಹೊರಭಾಗದಲ್ಲಿ ಘಟನೆ ನಡೆದಿದೆ ಎಂದು ಕೊಲಂಬಸ್‌ ಪೊಲೀಸ್‌ ಇಲಾಖೆ ತಿಳಿಸಿದೆ.  ಅಮೆರಿಕಾ ಪೊಲೀಸರ ಪ್ರಕಾರ ಅಮಿತ್‌ ಅವರನ್ನು ಹತ್ಯೆ ಮಾಡಿದ ನಂತರ ದುಷ್ಕರ್ಮಿ ಅವರ ಬಳಿ ಇದ್ದ ಹಣದೊಂದಿಗೆ ಎಸ್ಕೇಪ್‌ ಆಗಿದ್ದಾನೆ. ಸದ್ಯ ಪೊಲೀಸರು ದರೋಡೆ ಪ್ರಕರಣದಡಿ ತನಿಖೆ ನಡೆಸುತ್ತಿದ್ದಾರೆ.

ಅಮಿತ್‌ ಪಟೇಲ್‌ ಅವರು ಬ್ಯೂನಾ ವಿಸ್ಟಾ ರಸ್ತೆ( Buena Vista Road)ಯಲ್ಲಿ ಗ್ಯಾಸ್‌ ಸ್ಟೇಷನ್‌ ನಡೆಸುತ್ತಿದ್ದರು. ಇಲ್ಲಿ ನಡೆದ ವ್ಯವಹಾರದಲ್ಲಿ ಸಂಗ್ರಹವಾಗಿದ್ದ ದುಡ್ಡನ್ನು ಬ್ಯಾಂಕ್‌ಗೆ ಕಟ್ಟಲು ತೆರಳುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ. ಇತ್ತ ಅಮಿತ್‌ ಕುಟುಂಬ ಆತನ ಮಗುವಿನ 3ನೇ ವರ್ಷದ ಹುಟ್ಟುಹಬ್ಬ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದುರಂತ ನಡೆದಿದೆ. ತುರ್ತು ಚಿಕಿತ್ಸಾ ವೈದ್ಯರು ಸ್ಥಳಕ್ಕಾಗಮಿಸುವ ಮುನ್ನವೇ ಅಮಿತ್‌ ಪ್ರಾಣ ಬಿಟ್ಟಿದ್ದಾರೆ. 

shootout in America: ಅಮೆರಿಕಾದಲ್ಲಿ ಗುಂಡಿನ ದಾಳಿಗೆ ಕೇರಳದ ತರುಣಿ ಬಲಿ

ಅಮೆರಿಕಾದಲ್ಲಿ ಇತ್ತೀಚೆಗೆ ಗುಂಡಿನ ದಾಳಿ ಸಾಮಾನ್ಯ ಎನಿಸಿದೆ. ಕೆಲ ದಿನಗಳ ಹಿಂದಷ್ಟೇ ಕೇರಳ ಮೂಲದ ತರುಣಿಯೊಬ್ಬಳು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಳು. ನಿದ್ರಿಸುತ್ತಿದ್ದ ವೇಳೆ ಮಹಡಿಯ ಸೀಲಿಂಗ್‌ ಸೀಳಿ ಬಂದ ಗುಂಡೊಂದು ತಗುಲಿ ಕೇರಳ ಮೂಲದ ತರುಣಿ  ಮರಿಮ್‌ ಸುಸಾನ್‌ ಮ್ಯಾಥಿವ್‌ ಮೃತಪಟ್ಟಿದ್ದಳು.  ಮರಿಯಮ್ ಸುಸಾನ್‌ ಮ್ಯಾಥಿವ್‌, ಬೊಬೆನ್‌ ಮ್ಯಾಥಿವ್‌ ಅವರ ಪುತ್ರಿಯಾಗಿದ್ದು, ಇವರು ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿರಣಂ ಮೂಲದ ನಿವಾಸಿಯಾಗಿದ್ದರು. 

ಈ ಘಟನೆಗೂ ಮೊದಲು ಅಮೆರಿಕಾದ  ಮಾಂಟ್ಗೊಮೆರಿ(Montgomery)ಯಲ್ಲಿ ವ್ಯಕ್ತಿಯೋರ್ವನನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಇದಕ್ಕೂ ಮೊದಲು ಕೇರಳ ಮೂಲದ ಸಜನ್ ಮ್ಯಾಥಿವ್‌(Sajan Mathews) ಎಂಬುವವರನ್ನು 15ವರ್ಷದ ಬಾಲಕ ದರೋಡೆ ಮಾಡುವ ಸಲುವಾಗಿ ಗುಂಡಿಕ್ಕಿ ಹತ್ಯೆ ಮಾಡಿದ್ದ 56 ವರ್ಷದ ಸಜ್ಜನ್‌ ಮ್ಯಾಥಿವ್‌ ಅಲಿಯಾಸ್‌ ಸಜಿ, ಡಲ್ಲಾಸ್‌( Dallas)ನಲ್ಲಿ ಸೌಂದರ್ಯವರ್ಧಕಗಳ ಪೂರೈಕೆ ಮಾಡುವ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಇವರ ಅಂಗಡಿಗೆ ನುಗ್ಗಿದ ದರೋಡೆಕೋರ ಇವರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಕೇರಳದ ಕೋಝೆಂಚೇರಿ ಮೂಲದ ಮ್ಯಾಥ್ಯೂಸ್ ಅವರು 2005 ರಲ್ಲಿ ಕುವೈತ್‌ನಿಂದ ಯುಎಸ್‌ಗೆ ವಲಸೆ ಬಂದಿದ್ದರು.

Michigan Shootout: ಶಾಲಾ ಬಾಲಕನಿಂದ ಫೈರಿಂಗ್‌, 3 ವಿದ್ಯಾರ್ಥಿಗಳು ಬಲಿ, ಶಿಕ್ಷಕ ಸೇರಿ 8 ಮಂದಿಗೆ ಗಾಯ!

ಬರೀ ಇವಿಷ್ಟೇ ಅಲ್ಲದೇ ಅಮೆರಿಕಾದಲ್ಲಿ ಮಕ್ಕಳು ಕೂಡ ಗುಂಡಿನ ದಾಳಿ ನಡೆಸುವುದು ಸಾಮಾನ್ಯವೆನಿಸಿದೆ. ಅಮೆರಿಕದ ಮಿಚಿಗನ್ ಡೆಟ್ರಾಯಿಟ್‌ ಬಳಿಯ ಹೈಸ್ಕೂಲ್‌ನಲ್ಲಿ ಬಾಲಕನೊಬ್ಬ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ ಕಾರಣ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದರು. 15 ವರ್ಷದ ಬಾಲಕ ಹೈಸ್ಕೂಲ್‌ನಲ್ಲಿ ಗುಂಡಿನ ದಾಳಿ ನಡೆಸಿದ ಪರಿಣಾಮ, ಮೂವರು ವಿದ್ಯಾರ್ಥಿಗಳು ಸಾವಿಗೀಡಾಗಿ , ಶಿಕ್ಷಕ ಸೇರಿದಂತೆ 8 ಜನರು ಗಾಯಗೊಂಡಿದ್ದರು. ಈ ವಿದ್ಯಾರ್ಥಿಯೂ ಐದು ನಿಮಿಷಗಳಲ್ಲಿ ಅರೆ-ಸ್ವಯಂಚಾಲಿತ ಬಂದೂಕಿನಿಂದ ಸುಮಾರು ಹದಿನೈದರಿಂದ ಇಪ್ಪತ್ತು ಸುತ್ತು ಗುಂಡು ಹಾರಿಸಿದ್ದ. ಘಟನೆಯ ಬಳಿಕ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಒಟ್ಟಿನಲ್ಲಿ ಅಮೆರಿಕಾದಲ್ಲಿ ಇತ್ತೀಚೆಗೆ ಶೂಟೌಟ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಮೆರಿಕಾ ಸರ್ಕಾರ ಶಸ್ತ್ರಾಸ್ತ್ರ ಕಾಯಿದೆಯನ್ನು ಕಠಿಣ ಗೊಳಿಸಬೇಕಾಗಿದೆ. 

Follow Us:
Download App:
  • android
  • ios