ನ್ಯೂಯಾರ್ಕ್(ಫೆ.13): ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಇದೀಗ ಭಾರತೀಯ ಮೂಲದ ಅರೋರಾ ಆಕಾಂಕ್ಷ ಉಮೇದುವಾರಿಗೆ ಸಲ್ಲಿಸಿದ್ದಾರೆ. ಸದ್ಯ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆ್ಯಂಟೋನಿಯೋ ಗುಟೆರಸ್ ಸೇವೆ ಸಲ್ಲಿಸುತ್ತಿದ್ದಾರೆ. ಇವರ ವಿರುದ್ಧ ಆರೋರಾ ಸ್ಪರ್ಧಿಸುತ್ತಿದ್ದಾರೆ. ಇವರ ಅವಧಿ ಡಿಸೆಂಬರ್ 2021ಕ್ಕೆ ಅಂತ್ಯಗೊಳ್ಳಲಿದೆ. 

ಮಾನವೀಯ ಕಾರ್ಯಗಳಿಗೆ ಗೌರವ: ಸೋನು ಸೂದ್‌ಗೆ‌ ವಿಶ್ವಸಂಸ್ಥೆ ಪ್ರಶಸ್ತಿ..!

34 ವರ್ಷದ ಆರೋರಾ ಆಕಾಂಕ್ಷ   ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆಯ(UNDP) ಲೆಕ್ಕಪರಿಶೋಧಕ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ವಿಶ್ವದ ಅತ್ಯುನ್ನತ ರಾಜತಾಂತ್ರಿಕ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ.  ಈಗಾಗಲೇ ಗುಟೆರಸ್ ವಿಶ್ವ ಸಂಸ್ಥೆಯ ಪ್ಱಧಾನ ಕಾರ್ಯದರ್ಶಿ ಹುದ್ದೆಗೆ ಮತ್ತೆ ಸ್ಪರ್ಧಿಸುವುದಾಗಿ ಖಚಿತಪಡಿಸಿದ್ದರು.

 

ಔಷಧೀಯ ಸಸ್ಯಪಟ್ಟಿಗೆ ಗಾಂಜಾ ಅಧೀಕೃತ ಸೇರ್ಪಡೆ; ಮಹತ್ವದ ಹೆಜ್ಜೆ ಇಟ್ಟ UN!

ಕಳೆದ 75 ವರ್ಷಗಳಿಂದ ವಿಶ್ವಸಂಸ್ಥೆ ನೀಡಿದ ಭರವಸೆಗಳು ಈಡೇರಿಲ್ಲ. ವಿಶ್ವಸಂಸ್ಥೆ ಕಾರ್ಯಗಳಿಗೆ ಚುರುಕುತನದ ಅವಶ್ಯಕತೆ ಇದೆ. ಮಾನವೀಯ ನೆರವನ್ನು ಹೆಚ್ಚಿಸಬೇಕು. ನಿರಾಶ್ರಿತ ರಕ್ಷಣೆಯಲ್ಲಿ ವಿಶ್ವಸಂಸ್ಥೆ ಬಹುದೊಡ್ಡ ಪಾತ್ರ ನಿರ್ವಹಿಸಬೇಕಿತ್ತು. ಆದರೆ ಇದುವರೆಗೂ ಸಾಧ್ಯ ವಾಗಿಲ್ಲ.  ಜನರ ನೋವಿಗೆ ಧನಿಯಾಗಲು ನಾನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಅರೋರ ಹೇಳಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿರುವ ಆರೋರ, ವಿಡಿಯೋ ಮೂಲಕ ತಮಗೆ ಬೆಂಬಲ ನೀಡಬೇಕೆಂದು ಕೋರಿದ್ದಾರೆ. ವಿಶ್ವಸಂಸ್ಥೆಗೆ ಹೊಸತನದ ಅವಶ್ಯಕತೆ ಇದೆ. ವಿಶ್ವಸಂಸ್ಥೆ ಕೆಲಸಗಳಿಗೆ ಹೊಸತನ ಸ್ಪರ್ಶ ನೀಡಬೇಕಿದೆ ಎಂದು ಆರೋರ ಹೇಳಿದ್ದಾರೆ.

 

ಜನವರಿ 1, 2017ರಲ್ಲಿ ಗುಟೆರಸ್ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಕಳೆದ 4 ವರ್ಷದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದೇನೆ. ಮುಂದಿನ ಅವಧಿಯಲ್ಲಿ ಹೊಸ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಲು ನನ್ನ ಬೆಂಬಲಿಸಬೇಕು ಎಂದು ಗುಟೆರಸ್ ಹೇಳಿದ್ದಾರೆ.