Asianet Suvarna News Asianet Suvarna News

ಪನ್ನು ಹತ್ಯೆಗೆ ಭಾರತೀಯ ನಿಖಿಲ್‌ ಸಂಚು: ಅಮೆರಿಕ ಆರೋಪ: ತನಿಖೆಗೆ ಸಮಿತಿ ರಚನೆ

ಪ್ರತ್ಯೇಕತಾವಾದಿ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಹತ್ಯೆಗೆ ಭಾರತೀಯ ನಿಖಿಲ್‌ ಗುಪ್ತಾ ಎಂಬುವವರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಷಯವನ್ನು ಅಮೆರಿಕದ ಅಟಾರ್ನಿ ಕೋರ್ಟ್‌ಗೆ ಬುಧವಾರ ತಿಳಿಸಿದ್ದಾರೆ.

Indian Nikhil conspiracy to kill Khalistani militant Gurpatwant Singh Pannoon US accuses Committee formed to investigate akb
Author
First Published Nov 30, 2023, 8:13 AM IST

ನ್ಯೂಯಾರ್ಕ್‌: ಪ್ರತ್ಯೇಕತಾವಾದಿ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಹತ್ಯೆಗೆ ಭಾರತೀಯ ನಿಖಿಲ್‌ ಗುಪ್ತಾ ಎಂಬುವವರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಷಯವನ್ನು ಅಮೆರಿಕದ ಅಟಾರ್ನಿ ಕೋರ್ಟ್‌ಗೆ ಬುಧವಾರ ತಿಳಿಸಿದ್ದಾರೆ.

ಇದು ಅತ್ಯಂತ ಗಂಭೀರ ಕೃತ್ಯವಾಗಿದ್ದು, ಕೊಲೆಗೆ ನೇಮಕ, ಕೊಲೆ ಪಿತೂರಿ ಸೇರಿದಂತೆ 10 ವರ್ಷಗಳ ಜೈಲು ಶಿಕ್ಷೆಗೆ ಅರ್ಹವಾಗಿದೆ ಎಂದು ಅವರು ಹೇಳಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಗುಪ್ತಾ ಹಾಗೂ ಇತರರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಗುಪ್ತಾ ಭಾರತದಲ್ಲಿ ನೆಲೆಸಿರುವ ಮತ್ತು ಭಾರತೀಯ ಸರ್ಕಾರಿ ನೌಕರನ ಜೊತೆ ನಿಟಕ ಸಂಪರ್ಕವನ್ನು ಹೊಂದಿದ್ದು, ಈತನನ್ನು ಹತ್ಯೆ ಮಾಡಲು ನೇಮಕ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.

ಖಲಿಸ್ತಾನಿ ಉಗ್ರನ ಹತ್ಯೆ: ಭಾರತಕ್ಕೇ ವಾರ್ನಿಂಗ್ ಕೊಡ್ತಾ ಅಮೆರಿಕಾ? ಭಾರತದ ಪ್ರತ್ಯುತ್ತರವೇನು?

ಪನ್ನೂನ್‌ ಹತ್ಯೆಯಲ್ಲಿ ಭಾರತ ಭಾಗಿಯಾಗಿತ್ತು ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ ಈ ಕುರಿತು ತನಿಖೆ ನಡೆಸಲು ಭಾರತ ಸರ್ಕಾರ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದೆ. ಅಮೆರಿಕದಲ್ಲಿ ಪನ್ನೂನ್‌ನನ್ನು ಹತ್ಯೆ ಮಾಡುವ ಸಂಚೊಂದನ್ನು ಅಮೆರಿಕದ ತನಿಖಾ ಸಂಸ್ಥೆಗಳು (American investigative agencies) ವಿಫಲಗೊಳಿಸಿದ್ದವು ಎಂದು ಇತ್ತೀಚಿಗೆ ಅಮೆರಿಕ ಆರೋಪ ಮಾಡಿತ್ತು.

ತನಿಖೆಗೆ ಸಮಿತಿ ರಚನೆ: ಅಮೆರಿಕದ ಗಂಭೀರ ಕಳವಳದ ಬೆನ್ನಲ್ಲೇ ಭಾರತದ ಕ್ರಮ

ನವದೆಹಲಿ: ಪ್ರತ್ಯೇಕತಾವಾದಿ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ನನ್ನು ಅಮೆರಿಕದಲ್ಲಿ ಹತ್ಯೆ ಮಾಡುವ ಸಂಚು ರೂಪಿಸಲಾಗಿತ್ತು. ಅದರಲ್ಲಿ ಭಾರತ ಭಾಗಿಯಾಗಿತ್ತು ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ ಈ ಕುರಿತು ತನಿಖೆ ನಡೆಸಲು ಭಾರತ ಸರ್ಕಾರ ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದೆ.

ಅಮೆರಿಕದಲ್ಲಿ ಪನ್ನೂನ್‌ನನ್ನು ಹತ್ಯೆ ಮಾಡುವ ಸಂಚೊಂದನ್ನು ಅಮೆರಿಕದ ತನಿಖಾ ಸಂಸ್ಥೆಗಳು ವಿಫಲಗೊಳಿಸಿದ್ದವು. ಈ ವಿಷಯದಲ್ಲಿ ಭಾರತ ಸರ್ಕಾರ ಕೂಡಾ ಭಾಗಿಯಾಗಿರುವ ಮಾಹಿತಿ ಹಿನ್ನೆಲೆಯಲ್ಲಿ ಭಾರತಕ್ಕೆ ಅಮೆರಿಕ ಎಚ್ಚರಿಕೆ ಕೂಡಾ ನೀಡಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ‘ದ ಫೈನಾನ್ಷಿಯಲ್‌ ಟೈಮ್ಸ್‌’ (The Financial Times) ಇತ್ತೀಚೆಗೆ ವರದಿ ಮಾಡಿತ್ತು.

ನ.19ಕ್ಕೆ ಏರಿಂಡಿಯಾದಲ್ಲಿ ಪ್ರಯಾಣ ಮಾಡದಿರಿ: ಖಾಲಿಸ್ತಾನ್ ಉಗ್ರನಿಂದ ಸಿಖ್ಖರಿಗೆ ಎಚ್ಚರಿಕೆ

ಈ ಕುರಿತು ಬುಧವಾರ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಗ್ಚಿ(Arindam Bagchi), ಉಭಯ ದೇಶಗಳ ನಡುವಿನ ಭದ್ರತೆ ಕುರಿತಾದ ದ್ವಿಪಕ್ಷೀಯ ಮಾತುಕತೆಯಲ್ಲಿ ಸಂಘಟಿತ ಕ್ರಿಮಿನಲ್‌ಗಳು, ಗನ್‌ಧಾರಿಗಳು, ಉಗ್ರರು ಮತ್ತು ಇತರರ ನಡುವಿನ ನಂಟಿನ ಕುರಿತ ಕೆಲ ಮಾಹಿತಿಯನ್ನು ಅಮೆರಿಕ ನಮ್ಮೊಂದಿಗೆ ಹಂಚಿಕೊಂಡಿದೆ. ಈ ವೇಳೆ, ಇಂಥ ಬೆಳವಣಿಗೆಗಳು ಭಾರತದ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡುವ ಕಾರಣ ಅಂಥ ವಿಷಯಗಳ ಕುರಿತ ಯಾವುದೇ ಮಾಹಿತಿಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂಬ ಸಂದೇಶವನ್ನು ನಾವು ಕೂಡಾ ಅಮೆರಿಕಕ್ಕೆ ರವಾನಿಸಿದ್ದೇವೆ. ಜೊತೆಗೆ ಕೆಲವೊಂದು ಮಾಹಿತಿಗಳ ಕುರಿತು ತನಿಖೆ ನಡೆಸಲು ನ.18ರಂದೇ ನಾವು ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದ್ದೇವೆ ಎಂದು ಹೇಳಿದ್ದಾರೆ.

ಕೆಲ ತಿಂಗಳ ಹಿಂದೆ ಕೆನಡಾದಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲೂ ಭಾರತದ ಏಜೆಂಟ್‌ಗಳ ಕೈವಾಡವಿತ್ತು ಎಂದು ಕೆನಡಾ ಪ್ರಧಾನಿ(Canadian Prime Minister) ಜಸ್ಟಿನ್‌ ಟ್ರುಡೋ  (Justin Trudeau)ಬಹಿರಂಗವಾಗಿ ಆರೋಪ ಮಾಡಿದ್ದರು. ಇದು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಮರಕ್ಕೆ ಕಾರಣವಾಗಿತ್ತು. ಆದರೆ ತನ್ನ ಆರೋಪ ಸಾಬೀತುಪಡಿಸುವ ಯಾವುದೇ ಸಾಕ್ಷ್ಯವನ್ನು ಕೆನಡಾ ನೀಡಿರಲಿಲ್ಲ.

ಕಳೆದ ವರ್ಷ 1.40 ಲಕ್ಷ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ: ದಾಖಲೆ

ವಾಷಿಂಗ್ಟನ್‌: ಕಳೆದ ವರ್ಷ 1.40 ಲಕ್ಷ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ವಿತರಿಸುವ ಮೂಲಕ ಹೊಸ ದಅಖಲೆ ನಿರ್ಮಿಸಿದೆ. ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ವೀಸಾ ಸೇವೆಗಳ ಉಪಸಹಾಯಕ ಕಾರ್ಯದರ್ಶಿ (US Assistant Secretary for Visa) ಜೂಲಿ ಸ್ಟಫ್ಟ್‌ (Julie Stuft)  1 ವರ್ಷದಲ್ಲಿ 10 ಲಕ್ಷ ಭಾರತೀಯರಿಗೆ ವೀಸಾ ನೀಡುವ ಗುರಿ ಹೊಂದಿದ್ದೆವು. ಆದರೆ ಹಲವು ತಿಂಗಳ ಮುಂಚೆಯೇ ಅದು ಈಡೇರಿದೆ. ಆ ಪೈಕಿ ವಿದ್ಯಾರ್ಥಿಗಳಿಗೇ 1.40 ಸಾವಿರ ವೀಸಾ ನೀಡಲಾಗಿದೆ. ಇದೊಂದು ಇತಿಹಾಸ ಮತ್ತು ಈ ದಾಖಲೆಗಾಗಿ ನಮಗೆ ಹೆಮ್ಮೆ ಇದೆ ಎಂದಿದ್ದಾರೆ. ಉಭಯ ದೇಶಗಳ ಸಂಬಂಧ ಸುಧಾರಣೆಯ ಭಾಗವಾಗಿ ಅಧ್ಯಕ್ಷ ಜೋ ಬಿಡೆನ್‌ ಆಡಳಿತ ಈಗಾಗಲೇ ಹಲವು ಕ್ರಮ ಕೈಗೊಂಡಿದ್ದು ಅದರ ಪರಿಣಾಮ ವೀಸಾ ವಿತರಣೆಯಲ್ಲಿ ಭಾರೀ ಏರಿಕೆ ದಾಖಲಾಗಿದೆ.

Follow Us:
Download App:
  • android
  • ios