ದುಬೈ(ಮೇ.18):  ಭಾರತದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ತಬ್ಲೀಘಿ ಜಮಾತ್ ಭೀತಿ ಹುಟ್ಟಿಸಿದ್ದರೆ, ಇದೀಗ ವಿದೇಶಿಂದ, ಇತರ ರಾಜ್ಯಗಳಿಂದ ಆಗಮಿಸುವವರಿಂದ ಕೊರೋನಾ ಹರಡುತ್ತಿದೆ. ಇದರ ನಡುವೆ ದುಬೈನ ಸ್ಟೀವನ್ ರಾಕ್ ಮೈನಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಬ್ರಾಜ್ ಕಿಶೋರ್ ಗುಪ್ತ, ಫೇಸ್ಬುಕ್ ಪೋಸ್ಟ್‌ನಿಂದ ಉದ್ಯೋಗ ಕಳೆದುಕೊಂಡಿದ್ದಾರೆ.

ಚೀನಾಗೆ ಬಿಗ್ ಶಾಕ್: Apple, ಲಾವಾ ಬೆನ್ನಲ್ಲೇ ಮತ್ತೊಂದು ಕಂಪನಿ ಭಾರತಕ್ಕೆ!

ಭಾರತದಲ್ಲಿ ಕೊರೋನಾ ವೈರಸ್ ಹರಡಲು ಮುಸ್ಲೀಮರು ಕಾರಣ. ಇನ್ನು ದೆಹಲಿ ಗಲಭೆ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.  ಈ ವಿಚಾರ ತಳಿದ ತಕ್ಷಣವೇ ಕಂಪನಿ ಯಾವುದೇ ನೋಟೀಸ್ ನೀಡಿದೆ ತಕ್ಷಣವೇ ಅಮಾನತು ಮಾಡಿದೆ. ಮತ್ತೋರ್ವ ಉದ್ಯೋಗಿಯ ವಿಚಾರಣೆ ನಡೆಯುತ್ತಿದೆ. ನಮ್ಮ ಕಂಪನಿ ಯುಎಇ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತದೆ ಹಾಗೂ ಸರ್ಕಾರವನ್ನು ಗೌರವಿಸುತ್ತದೆ. ಮುಸ್ಲಿಂ ಧರ್ಮ ನಿಂದನೆಯನ್ನು ಕಂಪನಿ ಸಹಿಸುವುದಿಲ್ಲ ಎಂದು ಕಿಶೋರ್ ಗುಪ್ತಾರನ್ನು ಅಮಾನತು ಮಾಡಿದೆ.

ಕೊರೋನಾ ಮುಚ್ಚಿಡಲು ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಒತ್ತಡ: ಗಂಭೀರ ಆರೋಪ

ಭಾರತೀಯ ಉದ್ಯೋಗಿಗಳು ಇಲ್ಲಿ ಧರ್ಮವನ್ನು ಕೆಣಕಬಾರದು. ಇದು ಎಲ್ಲರಿಗೂ ಅನ್ವಯವಾಗುತ್ತದೆ. ಹೀಗಾಗಿ ಎಲ್ಲರೂ ಎಚ್ಚರ ವಹಿಸಬೇಕು ಎಂದು ಸ್ಟೀವನ್ ರಾಕ್ ಕಂಪನಿ ಹೇಳಿದೆ. ಈ ತಿಂಗಳ ಆರಂಭದಲ್ಲಿ ತಬ್ಲೀಘಿ ಜಮಾತ್ ಕುರಿತು ಪೋಸ್ಟ್ ಹಾಕಿದ್ದ ಮೂವರು ಭಾರತೀಯರು ದುಬೈನಲ್ಲಿ ಉದ್ಯೋಗ ಕಳೆದುಕೊಂಡಿದ್ದರು.