Asianet Suvarna News Asianet Suvarna News

ತಾಲಿಬಾನಿಯರ ಕಣ್ತಪ್ಪಿಸಲು ಅಪ್ಘನ್ ಡ್ರಗ್ಸ್‌ ಭಾರತಕ್ಕೆ!

* ತಾಲಿಬಾನಿಗಳ ವಶ ತಪ್ಪಿಸಲು ಭಾರತಕ್ಕೆ ಆಫ್ಘನ್‌ ಡ್ರಗ್ಸ್‌ ಡಂಪ್‌

* ಹಣಕ್ಕಾಗಿ ಡ್ರಗ್ಸ್‌ ಮಾಫಿಯಾಗಳ ಮೇಲೆ ಕಣ್ಣಿಟ್ಟಿರುವ ತಾಲಿಬಾನ್‌

* ಸಿಕ್ಕಿಬಿದ್ದರೆ ಕೋಟ್ಯಂತರ ರು. ಮೊತ್ತದ ಡ್ರಗ್ಸ್‌ ಜಪ್ತಿ ಆಗುವ ಭೀತಿ

India seized 2 7bn dollars in Afghan heroin amid Taliban takeover chaos pod
Author
Bangalore, First Published Sep 23, 2021, 8:39 AM IST
  • Facebook
  • Twitter
  • Whatsapp

ಅಹಮದಾಬಾದ್‌(ಸೆ.23): ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌(Talliban) ಸರ್ಕಾರ ರಚನೆಯಾಗಿರುವುದು ನೆರೆ ಹೊರೆಯ ದೇಶಗಳಿಗೆ ಮಾತ್ರವಲ್ಲ, ದೇಶದಲ್ಲಿನ ಮಾದಕ ವಸ್ತು ದಂಧೆಕೋರರಿಗೂ ದೊಡ್ಡ ಮಟ್ಟದಲ್ಲಿ ಆತಂಕ ಶುರುವಾಗಿದೆ. ಹೀಗಾಗಿಯೇ ತಾವು ಸಂಗ್ರಹಿಸಿದ್ದ ಮಾದಕ ವಸ್ತು ತಾಲಿಬಾನಿಗಳ ಕೈವಶವಾಗುವುದನ್ನು ತಪ್ಪಿಸಲು ಅವರು ಭಾರೀ ಪ್ರಮಾಣದಲ್ಲಿ ಭಾರತದ ಕಡೆಗೆ ಡ್ರಗ್ಸ್‌ ಡಂಪ್‌(Drugs Dump) ಮಾಡುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ಶಂಕಿಸಿವೆ.

ಗುಜರಾತ್‌ನ(Gujarat) ಮುಂಬ್ರಾ ಬಂದರಿನಲ್ಲಿ ಮಂಗಳವಾರ ಪತ್ತೆಯಾದ 21000 ಕೋಟಿ ರು.ಮೌಲ್ಯದ ಡ್ರಗ್ಸ್‌ ಸೇರಿ ಇತ್ತೀಚಿನ ದಿನಗಳಲ್ಲಿ ಗುಜರಾತ್‌ನಲ್ಲಿ ಮಾದಕ ವಸ್ತು ಕಳ್ಳಸಾಗಣೆಯ ಹಲವು ಪ್ರಕರಣಗಳು ವರದಿಯಾಗಿವೆ. ಇವೆಲ್ಲಾ, ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ಆಫ್ಘನ್‌(Afghanistan) ಡ್ರಗ್ಸ್‌ ದಂಧೆಕೋರರು ನಡೆಸುತ್ತಿರುವ ಯತ್ನ ಎಂದು ಗುಪ್ತಚರ ಮೂಲಗಳ ಅಂದಾಜಿಸಿವೆ.

ತೀವ್ರ ಹಣಕಾಸು ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿರುವ ತಾಲಿಬಾನ್‌(Taliban) ಉಗ್ರರು, ಅಂತಾರಾಷ್ಟ್ರೀಯ ಡ್ರಗ್ಸ್‌ ಮಾಫಿಯಾಗಳ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಒಂದು ವೇಳೆ ಮಾದಕ ದ್ರವ್ಯಗಳ ದಾಸ್ತಾನು ಇರುವುದು ಗೊತ್ತಾದರೆ ಅವುಗಳನ್ನು ತಾಲಿಬಾನ್‌ ವಶಪಡಿಸಿಕೊಳ್ಳಬಹುದು. ಜೊತೆಗೆ ವಿಚಾರಣೆಯೂ ಇಲ್ಲದೇ ತಮ್ಮನ್ನು ಮರಣದಂಡನೆ ಶಿಕ್ಷೆಗೆ ಗುರಿಪಡಿಸಬಹುದು ಎಂಬ ಕಾರಣಕ್ಕೆ ತಮ್ಮ ಬಳಿ ಇರುವ ಮಾದಕದ್ರವ್ಯ ದಾಸ್ತಾನುಗಳನ್ನು ಆದಷ್ಟುಬೇಗನೆ ಖಾಲಿ ಮಾಡಲು ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂತಾರಾಷ್ಟ್ರೀಯ ಮಾಫಿಯಾಗಳು ಯತ್ನಿಸುತ್ತಿವೆ.

ಇರಾನ್‌ ಬಂದರನ್ನು ಬಳಸಿಕೊಂಡು ಸಮುದ್ರ ಮಾರ್ಗದ ಮೂಲಕ ಎಷ್ಟು ಸಾಧ್ಯವೋ ಅಷ್ಟು ಮಾದಕದ್ರವ್ಯಗಳನ್ನು ಭಾರತಕ್ಕೆ(India) ಸಾಗಾಟ ಮಾಡಲಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬಂದರೂ ಅಚ್ಚರಿಯಿಲ್ಲ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಮಾದಕದ್ರವ್ಯ ನಿಯಂತ್ರಣ ಬ್ಯೂರೋ ಹಾಗೂ ಕಂದಾಯ ಗುಪ್ತಚರ ಇಲಖೆ ಹಾಗೂ ಗುಜರಾತ್‌ ಭಯೋತ್ಪಾದಕ ನಿಗ್ರಹ ದಳಗಳು ಅಫ್ಘಾನಿಸ್ತಾನದಿಂದ ಭಾರತಕ್ಕೆ ಡ್ರಗ್ಸ್‌ ಸಾಗಣೆಗೆ ಯತ್ನಗಳು ನಡೆಯುತ್ತಿವೆ ಎಂಬುದನ್ನು ಖಚಿತಪಡಿಸಿವೆ. ಈ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios