ನವದೆಹಲಿ(ಆ.08): ಅಮೋನಿಯಂ ನೈಟ್ರೇಟ್ ರಾಸಾಯನಿಕ ಸ್ಫೋಟಗೊಂಡ ಪರಿಣಾಮ ಲೆಬನಾನ್ ರಾಜಧಾನಿ ಬೈರೂತ್ ನಗರ ಸಂಪೂರ್ಣ ಬೂದಿಯಾಗಿದೆ. 137 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 5,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಗರದಲ್ಲಿನ ಬಹುತೇಕ ಎಲ್ಲಾ ಕಟ್ಟಡಗಳು ಧರೆಗುರುಳಿದೆ. ಮನೆಗಳು ಧ್ವಂಸಗೊಂಡಿದೆ. ಆಹಾರ ದಾಸ್ತಾನು ಬೂದಿಯಾಗಿದೆ. ಸ್ಫೋಟದ ಬಳಿಕ ಲೆಬನಾನ್‌ನಲ್ಲಿ ಆಹಾರ ಹಾಗೂ ಔಷಧಿ ಕೊರತೆಯ ಭೀತಿ ಎದುರಾಗಿದೆ.

ಚೆನ್ನೈನಲ್ಲೂ ಬೈರೊತ್ ರೀತಿ ಭಾರೀ ಸ್ಪೋಟಕ ಸಂಗ್ರಹ: ಶುರುವಾಯ್ತು ಕಳವಳ...

ಸ್ಫೋಟಕದಲ್ಲಿ ಐವರು ಭಾರತೀಯರೂ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ. ಸುಮಾರು 4,000 ಭಾರತೀಯರು ಲೆಬನಾನ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಇತ್ತ ಸ್ಫೋಟದಿಂದ ಇಲ್ಲಿನ ಆಹಾರ ದಾಸ್ತಾನು ಸಂಪೂರ್ಣವಾಗಿ ಬೂದಿಯಾಗಿದೆ. ಇನ್ನೊಂದು ವಾರಕ್ಕೆ ಬೇಕಾಗುವಷ್ಟು ದಸ್ತಾನು ಲಭ್ಯವಿದೆ. ಆದರೆ ಪರಿಸ್ಥಿತಿ ಸುಧಾರಿಸಲು ವರ್ಷಗಳೇ ಹಿಡಿಯುವಂತಿದೆ. ಇದರ ನಡುವೆ ಆಹಾರ ಮತ್ತು ಔಷಧಿ ಪೂರೈಕೆಗೆ ಭಾರತ ಸಜ್ಜಾಗಿದೆ.

ಲೆಬನಾನ್‌ನಲ್ಲಿ ಸ್ಫೋಟವಾಗಿದ್ದು 2750 ಟನ್‌ ಅಮೋನಿಯಂ ನೈಟ್ರೇಟ್‌!

ಭಾರತೀಯ ರಾಯಭಾರ ಕಚೇರಿ, ಲೆಬನಾನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಲೆಬನಾನ್ ಅವಶ್ಯಕತೆ ಕುರಿತು ಮಾಹಿತಿ ಸಂಗ್ರಹಿಸಲಿದೆ. ಕೊರೋನಾ ವೈರಸ್ ಸಮಯದಲ್ಲಿ 100ಕ್ಕೂ ಹೆಚ್ಚು ದೇಶಗಳಿಗೆ ಭಾರತ ಔಷಧಿಗಳನ್ನು ಕಳುಹಿಸಿತ್ತು. ಇದೀಗ ಲೆಬನಾನ್‌ಗೆ ಔಷಧಿ ಹಾಗೂ ಆಹಾರ ಪೂರೈಕೆ ಮಾಡಲು ನಿರ್ಧರಿಸಿದೆ. 

ಲೆಬೆನಾನ್ ಅಧಿಕಾರಿಗಳು ಸಂಪರ್ಕಿಸಿ ಅಗತ್ಯ ನೆರವು ನೀಡುವ ಭರವಸೆ ನೀಡಲಾಗಿದೆ. ಲೆಬೆನಾನ್ ಕೂಡ ಭಾರತದ ಸ್ಪಂದನೆಗೆ ಸಂತಸ ವ್ಯಕ್ತಪಡಿಸಿದೆ.