ನವದೆಹಲಿ(ಮಾ.03): ದೈನಂದಿನ ಕೊರೋನಾ ಕೇಸ್‌ಗಳ ಸಂಖ್ಯೆಯಲ್ಲಿ ಅಮೆರಿಕವನ್ನು ಹಿಂದಿಕ್ಕಿರುವ ಭಾರತ ಇದೀಗ ಸೋಂಕು ಅತೀ ವೇಗವಾಗಿ ಹಬ್ಬುತ್ತಿರುವ ವಿಶ್ವದ 2ನೇ ರಾಷ್ಟ್ರವಾಗಿ ಹೊರಹೊಮ್ಮಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 91,097 ಕೊರೋನಾ ಕೇಸ್‌ಗಳನ್ನು ದಾಖಲಿಸಿರುವ ಬ್ರೆಜಿಲ್‌ ವಿಶ್ವದ ನಂ.1 ಕೊರೋನಾ ಹಾಟ್‌ಸ್ಪಾಟ್‌ ರಾಷ್ಟ್ರವಾಗಿದೆ. ಇದೇ ಅವಧಿಯಲ್ಲಿ 81,466 ಕೇಸ್‌ಗಳನ್ನು ದಾಖಲಿಸಿರುವ ಭಾರತವು 77,718 ಕೊರೋನಾ ಕೇಸ್‌ಗಳು ಪತ್ತೆಯಾದ ಅಮೆರಿಕವನ್ನು ಹಿಂದಿಕ್ಕಿದೆ. ಕಳೆದ 3 ವಾರಗಳಲ್ಲಿ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದೆ.

"

12 ವರ್ಷದ ಮಕ್ಕಳಿಗೂ ಫೈಝರ್‌ ಲಸಿಕೆ ಶೇ.100 ಪರಿಣಾಮಕಾರಿ!

ಇನ್ನು ಅತಿ ಹೆಚ್ಚು ಕೊರೋನಾ ಸೋಂಕಿತರು ಇರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ ಮತ್ತು ಬ್ರೆಜಿಲ್‌ ನಂತರದ 3ನೇ ಸ್ಥಾನವು ಭಾರತದ ಪಾಲಾಗಿದೆ.

ಟಾಪ್‌ 5 ಕೊರೋನಾ ದೇಶಗಳು

ದೇಶ| ಒಟ್ಟಾರೆ ಕೇಸ್|‌ ಸಾವಿನ ಸಂಖ್ಯೆ

1. ಅಮೆರಿಕ| 3,12,46,420| 5,66,616

2. ಬ್ರೆಜಿಲ್‌| 1,28,42,717| 3,25,559

3. ಭಾರತ| 1,23,03,131| 1,63,428

4. ಫ್ರಾನ್ಸ್‌| 46,95,082| 95,976

5. ರಷ್ಯಾ| 45,63,056| 99,633