2020ನೇ ಸಾಲಿನ ಜಾಗತಿಕ ಪ್ರಜಾಪ್ರಭುತ್ವದ ಸೂಚ್ಯಂಕದ 167 ರಾಷ್ಟ್ರಗಳ ಪಟ್ಟಿಯಲ್ಲಿ 2 ಸ್ಥಾನಗಳ ಕುಸಿತ| ಪ್ರಜಾಪ್ರಭುತ್ವ ಸೂಚ್ಯಂಕ: 2 ಸ್ಥಾನ ಕುಸಿದ ಭಾರತ 53ನೇ ಸ್ಥಾನಕ್ಕೆ ಸೀಮಿತ!

ನವದೆಹಲಿ(ಫೆ.04): 2020ನೇ ಸಾಲಿನ ಜಾಗತಿಕ ಪ್ರಜಾಪ್ರಭುತ್ವದ ಸೂಚ್ಯಂಕದ 167 ರಾಷ್ಟ್ರಗಳ ಪಟ್ಟಿಯಲ್ಲಿ 2 ಸ್ಥಾನಗಳ ಕುಸಿತ ಕಂಡಿರುವ ಭಾರತವು 53ನೇ ರಾರ‍ಯಂಕ್‌ಗೆ ಸಮಾಧಾನಪಟ್ಟುಕೊಂಡಿದೆ.

2019ರಲ್ಲಿ ಭಾರತ 51ನೇ ರಾರ‍ಯಂಕ್‌ನಲ್ಲಿತ್ತು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಧಿಕಾರಿಗಳು ಪಾಲನೆ ಮಾಡದೇ ಇರುವುದು ಹಾಗೂ ಜನ ಸಾಮಾನ್ಯರ ಮೇಲೆ ಹೆಚ್ಚಿನ ನಿಯಂತ್ರಣ ಕ್ರಮಗಳು ಹೇರಿಕೆಯಾಗುತ್ತಿರುವ ಪರಿಣಾಮ ಭಾರತದ ಸ್ಥಾನ ಕುಸಿಯುವಿಕೆಗೆ ಕಾರಣವಾಗಿದೆ ಎಂದು ಈ ಕುರಿತಾಗಿ ವರದಿ ತಯಾರಿಸಿರುವ ದಿ ಎಕಾನಾಮಿಕ್‌ ಇಂಟೆಲಿಜೆನ್ಸ್‌ ಯೂನಿಟ್‌(ಇಐಯು) ತಿಳಿಸಿದೆ.

ಆದಾಗ್ಯೂ ನೆರೆಹೊರೆಯ ರಾಷ್ಟ್ರಗಳಿಗಿಂತ ಭಾರತದ ಸ್ಥಾನ ಮತ್ತು ಸಾಧನೆ ಉತ್ತಮವಾಗಿದೆ. ಪಟ್ಟಿಯಲ್ಲಿ ನಾರ್ವೆ, ಐಸ್‌ಲ್ಯಾಂಡ್‌, ಸ್ವೀಡನ್‌, ನ್ಯೂಜಿಲೆಂಡ್‌ ಮತ್ತು ಕೆನಡಾ ರಾಷ್ಟ್ರಗಳು ಮೊದಲ 5 ರಾರ‍ಯಂಕ್‌ಗಳನ್ನು ತಮ್ಮದಾಗಿಸಿಕೊಂಡಿವೆ.