Asianet Suvarna News

ಕೊರೋನಾ ನಿಯಂತ್ರಣ: ಭಾರತದ ಕ್ರಮ ಶ್ಲಾಘಿಸಿದ WHO ರಾಯಭಾರಿ!

ವಿಶ್ವದೆಲ್ಲೆಡೆ ಕೊರೋನಾ ವೈರಸ್ ವ್ಯಾಪಿಸುತ್ತಿದೆ. ಆಯಾ ದೇಶಗಳು ಕೊರೋನಾ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಕೆಲ ದೇಶಗಳು ಯಶಸ್ವಿಯಾಗಿದ್ದರೆ, ಇನ್ನು ಹಲವು ದೇಶಗಳು ಪ್ರಗತಿಯ ಹಂತದಲ್ಲಿದೆ. ಇದರ ನಡುವೆ ವಿಶ್ವ ಆರೋಗ್ಯ ಸಂಸ್ಥೆ ವಿಶೇಷ ರಾಯಭಾರಿ, ಬ್ರಿಟೀಷ್ ವೈದ್ಯ ಡೇವಿಡ್ ನಬಾರೋ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಭಾರತದಲ್ಲಿ ಕೊರೋನಾ ನಿಯಂತ್ರಣದ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. 

India doing remarkable job to tackle coronavirus says WHO envoy David Nabarro
Author
Bengaluru, First Published May 11, 2020, 4:12 PM IST
  • Facebook
  • Twitter
  • Whatsapp

ಲಂಡನ್(ಮೇ.10): ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳ ಪರಿಸ್ಥಿತಿ ಗಂಭೀರವಾಗಿದೆ. ಇತ್ತ ಭಾರತದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ಹೆತ್ತಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮಗಳ ಮೂಲಕ ನಿಯಂತ್ರಣಕ್ಕೆ ಮುಂದಾಗಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ವಿಶೇಷ ರಾಯಭಾರಿ ಹಾಗೂ ಬ್ರಿಟೀಷ್ ಡಾಕ್ಟರ್ ಡೇವಿಡ್ ನಬಾರೋ ಖಾಸಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶದಲ್ಲಿ ಕೊರೋನಾ ನಿಯಂತ್ರಣದ ವಿಚಾರದಲ್ಲಿ ಭಾರತ ಸರ್ಕಾರ ಹಾಗೂ ಆಯಾ ರಾಜ್ಯಗಳು ಕೈಗೊಂಡಿರುವ ಕ್ರಮಗಳನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.

ಯುಎಇ ಸೋಂಕಿತರ ಚಿಕಿತ್ಸೆಗೆ ಬೆಂಗಳೂರು ನರ್ಸ್‌ಗಳು!

ಕೊರೋನಾ ವೈರಸ್‌ಗೆ ತೀವ್ರವಾಗಿ ಗುರಿಯಾಗಿರುವ ದೇಶಗಳಲ್ಲಿ ಸೋಂಕಿತರ ಸಂಖ್ಯೆ ಎರಡೂವರೆ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಆದರೆ ಭಾರತದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು 11 ದಿನ ತೆಗೆದುಕೊಳ್ಳುತ್ತಿದೆ. ಇದು ಭಾರತದಲ್ಲಿನ ನಿಯಂತ್ರಣ ಹಾಗೂ ಹರಡುವಿಕೆ ಪ್ರಮಾಣವನ್ನು ಸೂಚಿಸುತ್ತದೆ. ಇದರಲ್ಲಿ ಎರಡು ವಿಚಾರಗಳಿವೆ. ಒಂದು, ಸೋಂಕಿತರನ್ನು ಗುರುತಿಸಿ ಅಥವಾ ಪರೀಕ್ಷೆಗೆ ಒಳಪಡಿಸಿ ಅವರಿಗೆ ಚಿಕಿತ್ಸೆ ನೀಡುವುದು, ಅವರ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡುವುದು ಸೇರಿದಂತೆ ಆರೋಗ್ಯ ಸಂಬಂಧಿತ ಕ್ರಮಗಳನ್ನು ಕೈಗೊಳ್ಳುವುದಾಗಿದೆ. ಇದರಲ್ಲಿ ಭಾರತ ಸರ್ಕಾರ ಅವಿರತ ಪರಿಶ್ರಮ ಪಡುತ್ತಿದೆ ಎಂದು ಡೇವಿಡ್ ಹೇಳಿದ್ದಾರೆ.

ಕೊರೋನಾ ಜಗತ್ತಿಗೆ ಹರಡಿದ ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆಯ ಶಾಕ್!

ಎರಡನೇ ವಿಚಾರ, ಸೋಂಕಿತರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ, ಇತರರನ್ನು ಸಂಪರ್ಕಿಸದಂತೆ ನಿರ್ಬಂಧ ವಿಧಿಸುವುದು. ಇದನ್ನೂ ಲಾಕ್‌ಡೌನ್ ಮೂಲಕ ಭಾರತ ಮಾಡುತ್ತಿದೆ. ಹೀಗಾಗಿ ದೇಶದಲ್ಲಿ ಕೊರೋನಾ ವೈರಸ್ ಹರಡುವಿಕೆ ತೀವ್ರತೆ ಇತರ ದೇಶಕ್ಕಿಂತ ಕಡಿಮೆ ಇದೆ. ಅದರಲ್ಲೂ ಹೆಚ್ಚು ಜನಸಂಖ್ಯೆ ಇರುವು ಭಾರತದಲ್ಲಿ ತೀವ್ರತೆ ಕಡಿಮೆ ಮಾಡಿರುವುದು ಭಾರತ ಮಾತ್ರವಲ್ಲ, ಇತರ ದೇಶಗಳಿಗೂ ಸಹಕಾರಿಯಾಗಿದೆ ಎಂದಿದ್ದಾರೆ.

ಬಹಳ ಮುಖ್ಯವಾಗಿ ಭಾರತದಲ್ಲಿ ವೈರಸ್ ಕೇಂದ್ರೀಕೃತವಾಗಿರುವುದು ಮಹಾರಾಷ್ಟ್ರ, ಅದರಲ್ಲೂ ಮುಂಬೈ, ಗುಜರಾತ್‌ನ ಅಹಮ್ಮದಾಬಾದ್, ದೆಹಲಿ, ರಾಜಸ್ಥಾನ ಹಾಗೂ ದಕ್ಷಿಣದಲ್ಲಿ ತಮಿಳುನಾಡು. ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ವೈರಸ್ ಕೇಂದ್ರೀಕೃತವಾಗಿದೆ. ಇನ್ನು ಜಿಲ್ಲೆಗಳಿ ಹರಡಿದ ವೈರಸನ್ನು ಹಲವು ಜಿಲ್ಲಾಡಳಿತಗಳು ಯಶಸ್ವಿಯಾಗಿ ನಿರ್ವಹಣೆ ಮಾಡಿದೆ. ಇನ್ನು ಕೆಲ ಜಿಲ್ಲೆಗಳು ಪ್ರಗತಿ ಹಂತದಲ್ಲಿದೆ. ಭಾರತದಲ್ಲಿನ ಸರಿಸುಮಾರು 750 ಜಿಲ್ಲೆಗಳ ಪೈಕಿ 450 ಜಿಲ್ಲೆಗಳಲ್ಲಿ ಸದ್ಯ ಯಾವುದೇ ಕೊರೋನಾ ಪ್ರಕರಣಗಳಿಲ್ಲ. ಇದು ಎರಡ ಅಂಶಗಳನ್ನು ಸೂಚಿಸುತ್ತದೆ. ಒಂದು ಭಾರತ ಕೊರೋನಾ ವೈರಸ್ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುತ್ತಿದೆ. ಎರಡನೇ ಅಂಶ, ಇತರರಿಗೆ ಹರಡದಂತೆ ನೋಡಿಕೊಳ್ಳುತ್ತಿದೆ. ಇದು ಭಾರತದ ಯಶಸ್ಸು ಎಂದು ಡೇವಿಡ್ ನಬಾರೋ ಹೇಳಿದ್ದಾರೆ.

ಕೊರೋನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯು ಪ್ರಯತ್ನಗಳು ನಡೆಯುತ್ತಿದೆ. ಕನಿಷ್ಠ ಈ ವರ್ಷದ ಅಂತ್ಯಕ್ಕೆ ಲಸಿಕೆ ಮಾರುಕಟ್ಟೆ ಪ್ರವೇಶಿಸಬಹುದು. ಆದರೆ ಅದರ ಪರೀಕ್ಷೆ, ಅಡ್ಡ ಪರಿಣಾಮ, ಸೋಂಕಿತರ ಗುಣುಖ ಪ್ರಮಾಣ, ಚಿಕಿತ್ಸಾ ವಿಧಾನ ಸೇರಿದಂತೆ ಆರೋಗ್ಯ ಸಂಬಂಧಿತ ವಿಚಾರಗಳ ಫಲಿತಾಂಶ ಹೊರಬೀಳುವಾಗ ಸರಿಸುಮಾರು 2 ವರ್ಷ ತೆಗೆದುಕೊಳ್ಳಲಿದೆ. ಹೀಗಾಗಿ ಕೊರೋನಾ ನಡುವೆ ಜೀವನ ನಡೆಸಲು ಕಲಿಯಬೇಕು. ಮುಂಜಾಗ್ರತ ಕ್ರಮ, ಸಾಮಾಜಿಕ ಅಂತರ, ಶುಚಿತ್ವ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಸ್ವಯಂ ಪ್ರೇರಿತರಾಗಿ ರೂಢಿಸಿಕೊಳ್ಳಬೇಕು ಎಂದು ಡೇವಿಡ್ ನಬಾರೋ ಹೇಳಿದ್ದಾರೆ.

ಕೊರೋನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯುವುದು ಬಹುದೊಡ್ಡ ಕೆಲಸ. ಇದರಲ್ಲಿ ವಿಶ್ವ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಕಾರಣ ಏಡ್ಸ್‌‌ಗೆ ಲಸಿಕೆ ಕಂಡು ಹಿಡಿಯಲು 25 ವರ್ಷಗಳಾದರೂ ಸಾಧ್ಯವಾಗಿಲ್ಲ. ಹಾಗಂತ ನಾವು ಆತ್ಮವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ. ಕಾರಣ ಕೊರೋನಾ ವೈರಸ್ ಈ ರೀತಿಯ ಸೋಂಕಲ್ಲ. ಕನಿಷ್ಠ 2 ವರ್ಷ ನಾವು ಕಾಯಬೇಕು. ಅಲ್ಲೀವರಿಗೆ ಮುಂಜಾಗ್ರತೆ ಕ್ರಮಗಳು ಅಗತ್ಯ ಎಂದು ಡೇವಿಡ್ ಹೇಳಿದ್ದಾರೆ.

Follow Us:
Download App:
  • android
  • ios