Asianet Suvarna News Asianet Suvarna News

ಜಿ-7 ದೇಶಗಳ ಮೀರಿಸಿ ಭಾರತ ರಫ್ತು ಸಾಧನೆ!

* ರಫ್ತು 47% ದಾಖಲೆಯ ಹೆಚ್ಚಳ

* ಜಿ-7 ದೇಶಗಳ ಮೀರಿಸಿ ಭಾರತ ರಫ್ತು ಸಾಧನೆ

* ಜನವರಿ-ಜುಲೈ ಅವಧಿಯಲ್ಲಿ ಭಾರತ ನಂ.1

 

India Beats All G7 Nations To Record Highest Growth In Merchandise Exports In 1 5 Years pod
Author
Bangalore, First Published Oct 28, 2021, 6:57 AM IST

ನವದೆಹಲಿ(ಅ.28): ಇತ್ತೀಚೆಗೆ ಜಿಡಿಪಿ(GDP) ಬೆಳವಣಿಗೆ ಮುನ್ನೋಟದಲ್ಲಿ ವಿಶ್ವದ ಪ್ರಬಲ ದೇಶಗಳನ್ನು ಹಿಂದಿಕ್ಕಿದ್ದ ಭಾರತಕ್ಕೆ(India) ಈಗ ಮತ್ತೊಂದು ಗರಿ. ವಾಣಿಜ್ಯ ಸರಕು ರಫ್ತಿನಲ್ಲಿ(Merchandise exports) ಭಾರತ ಇದೀಗ ಜಿ-7 ದೇಶಗಳನ್ನು ಹಿಂದಿಕ್ಕಿದೆ. ಈ ಬಗ್ಗೆ ಭಾರತ ಸರ್ಕಾರ ವಿಶ್ವ ವ್ಯಾಪಾರ ಸಂಸ್ಥೆ (World Trade Organisation)) ನೀಡಿದ ಅಂಕಿ ಅಂಶಗಳನ್ನು ಉಲ್ಲೇಖಿಸಿ ಪಟ್ಟಿಬಿಡುಗಡೆ ಮಾಡಿದೆ. ಇದರಲ್ಲಿ ಜನವರಿಯಿಂದ ಜುಲೈವರೆಗಿನ ಅವಧಿಯಲ್ಲಿ ಭಾರತದ ಸರಕುಗಳ ರಫ್ತು ಶೇ.47ರಷ್ಟು ಪ್ರಗತಿ ಕಂಡಿದ್ದು, ಜಿ-7 ದೇಶಗಳನ್ನು(G-7 Nations) ‘ಓವರ್‌ ಟೇಕ್‌’ ಮಾಡಿದೆ. ‘ಹಿಂದೆಂದಿಗಿಂತಲೂ ಭಾರತದ ಸರಕು ರಫ್ತು(Export) ವೇಗದ ಬೆಳವಣಿಗೆ ಕಂಡಿದೆ’ ಎಂದು ಸರ್ಕಾರವು ‘ಮೈ ಗವ್‌’ ಟ್ವೀಟರ್‌ ಖಾತೆಯಲ್ಲಿ ಹರ್ಷಿಸಿದೆ.

ಇದರಲ್ಲಿ ಭಾರತವು ಶೇ.47, ಇಟಲಿ(Italy) ಶೇ.33, ಕೆನಡಾ(Canada) ಶೇ.32- ಮೊದಲ 3 ಸ್ಥಾನ ಪಡೆದಿವೆ. ನಂತರದ ಸ್ಥಾನಗಳಲ್ಲಿ ಫ್ರಾನ್ಸ್‌ (France) ಶೇ.27, ಜರ್ಮನಿ(Germany) ಶೇ.26 ಹಾಗೂ ಜಪಾನ್‌ ಶೇ.25 ಇವೆ.

ಇನ್ನು ಡಬ್ಲ್ಯುಟಿಒ(World Trade Organisation) ಅಂಕಿ ಅಂಶ ಗಮನಿಸಿದಾಗ, ಜಿ-7 ಮಾತ್ರವಲ್ಲ, ಇತರ ಪ್ರಬಲ ದೇಶಗಳನ್ನೂ ಹಿಂದಿಕ್ಕಿ ರಫ್ತಿನಲ್ಲಿ ಭಾರತವು(India) ಸಾರ್ವಕಾಲಿಕ ಗರಿಷ್ಠ ದಾಖಲಿಸಿದ್ದು ಕಂಡುಬರುತ್ತದೆ. ಚೀನಾ(China) ಶೇ.34 ಹಾಗೂ ಯುರೋಪ್‌(Europe) ಒಕ್ಕೂಟ ಸೇ.27ರಷ್ಟುರಫ್ತು ಪ್ರಗತಿ ದಾಖಲಿಸಿವೆ.

ದೇಶ ರಫ್ತು ಪ್ರಗತಿ

ಭಾರ (India): ಶೇ.47

ಇಟಲಿ (Italy) ಶೇ.33

ಕೆನಡಾ (Canada) ಶೇ.32

ಫ್ರಾನ್ಸ್‌ (France) ಶೇ.27

ಜರ್ಮನಿ (Germany) ಶೇ.26

ಜಪಾನ್‌ (Japan) ಶೇ.25

ಅಮೆರಿಕ ಶೇ.24

ಬ್ರಿಟನ್‌ ಶೇ.20

ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳ ದಾಸ್ತಾನು ಬ್ಯಾನ್

1) ವಿದೇಶಿ ವ್ಯಾಪಾರ ನಿರ್ದೇಶನಾಲಯದಿಂದ ಕೋಡ್ ನಂಬರ್ ಪಡೆದಿರುವ ಆಮದುದಾರರು – ರಫ್ತುದಾರರು, ಸಂಸ್ಕರಣದಾರರು, ಕಾರ್ಖಾನೆಗಳ ಮಾಲಿಕರು, ಎಣ್ಣೆ ತೆಗೆಯುವವರು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಅಥವಾ ಡೀಲರ್ ಗಳು ತಮ್ಮ ಇಡೀ ರಫ್ತು ಮಾಡಲಿರುವ ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳ ಪ್ರಮಾಣ  ರಫ್ತು ದಾಸ್ತಾನು ಮಿತಿಯ ವ್ಯಾಪ್ತಿಯಲ್ಲಿದೆ ಎಂದು ನಿರೂಪಿಸಿದಾಗ.

2) ಆಮದುದಾರರು, ಸಂಸ್ಕರಣೆದಾರರು, ಕಾರ್ಖಾನೆ ಮಾಲಿಕರು, ಎಣ್ಣೆ ತೆಗೆಯುವವರು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಅಥವಾ ಡೀಲರ್ ಗಳು ಅಥವಾ ಆಮದುದಾರರು ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳಿಗೆ ಸಂಬಂಧಿಸಿದಂತೆ ಇಡೀ ಪ್ರಮಾಣ ಆಮದು ಮೂಲದಿಂದ ಪಡೆದಿರುವುದು ಎಂಬುದನ್ನು ನಿರೂಪಿಸಬೇಕು.

ಒಂದು ವೇಳೆ ಸಂಬಂಧಿಸಿದ ಕಾನೂನುಬದ್ಧ ಸಂಸ್ಥೆಗಳು ನಿಗದಿಗಿಂತ ಹೆಚ್ಚಿನ ದಾಸ್ತಾನನ್ನು ಹೊಂದಿದ್ದರೆ ಅವುಗಳು ಆ ಕುರಿತು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ (https://evegoils.nic.in/EOSP/login) ಪೋರ್ಟಲ್ ನಲ್ಲಿ ಘೋಷಣೆ ಮಾಡಿಕೊಳ್ಳಬೇಕು ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿರ್ಧರಿಸಿದ ದಾಸ್ತಾನು ಮಿತಿಯೊಳಗೆ ತಂದುಕೊಳ್ಳಬೇಕು. ಈ ಕಾರ್ಯ ಸಂಬಂಧಿಸಿದ ಅಧಿಕಾರಿಗಳು ಆದೇಶ ಹೊರಡಿಸಿದ 30 ದಿನಗಳಲ್ಲಿ ಆಗಬೇಕು.

ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತಗಾರರು ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳ ದಾಸ್ತಾನನ್ನು ನಿರಂತರವಾಗಿ ಘೋಷಿಸುವುದನ್ನು ಖಾತ್ರಿಪಡಿಸಬೇಕಾಗಿದೆ ಮತ್ತು ಆ ಕುರಿತ ಮಾಹಿತಿಯನ್ನು ಇಲಾಖೆಯ ಪೋರ್ಟಲ್ ಅಂದರೆ ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣಾ ಇಲಾಖೆ (https://evegoils.nic.in/EOSP/login) ಪೋರ್ಟಲ್ ನಲ್ಲಿ ಅಪ್ ಡೇಟ್ ಮಾಡಬೇಕು.

ವಾಣಿಜ್ಯ ಕ್ಷೇತ್ರದ ಚಹರೆ ಬದಲಿಸಲಿದೆ MSME!

ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಆರ್ಥಿಕತೆಯನ್ನಾಗಿ ಮಾಡಲು, ಹೆಚ್ಚು ಬೇಡಿಕೆಯಿರುವ ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡುವತ್ತ ಗಮನ ನೀಡಬೇಕಿದೆ. ಈ ನಿಟ್ಟಿನಲ್ಲಿ ದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ(MSME) ಪಾತ್ರ ಅತ್ಯಂತ ಮಹತ್ವದ್ದು ಎಂಬುದರಲ್ಲಿ ಎರಡು ಮಾತಿಲ್ಲ.

MSMEಗೆ ಹೆಚ್ಚಿನ ಉತ್ತೇಜನ ನೀಡುವುದರಿಂದ ಜಾಗತಿಕ ಬೇಡಿಕೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಸಹಜವಾಗಿ ಭಾರತ ಪಡೆದುಕೊಳ್ಳಲಿದೆ. ನಾವೀನ್ಯತೆಗೆ ವೇಗ ನೀಡುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಭಾರತ ಹೊಂದಿರುವುದನ್ನು ನಾವು ಕಾಣಬಹುದಾಗಿದೆ.

MSME ವಲಯವು ನಮ್ಮ ದೇಶದ ಆರ್ಥಿಕ ರಚನೆಯ ಬೆನ್ನೆಲುಬಾಗಿದೆ. 63 ದಶಲಕ್ಷ MSMEಗಳು ದೇಶದಲ್ಲಿ ಕಾರ್ಯಾಚರಿಸುತ್ತಿದ್ದು, ದೇಶದ ಶೇ. 80ರಷ್ಟು ಕೈಗಾರಿಕೆಗಳನ್ನು ಒಳಗೊಂಡಿದೆ. MSME ಕ್ಷೇತ್ರ ದೇಶದ ಜಿಡಿಪಿಗೆ ಶೇ.31ರಷ್ಟು ಕೊಡುಗೆ ನೀಡುತ್ತದೆ. ಅಲ್ಲದೇ ರಫ್ತು ಪ್ರಮಾಣದಲ್ಲಿ ಶೇ.45ರಷ್ಟು ಪಾಲನ್ನು ಹೊಂದಿದೆ ಎಂಬುದು ಗಮನಾರ್ಹ.

Follow Us:
Download App:
  • android
  • ios