ಲಸಿಕಾ ಅಭಿಯಾನ ಅಮೆರಿಕ, ಜಪಾನ್ ಸೇರಿ 18 ದೇಶಗಳನ್ನು ಹಿಂದಿಕ್ಕಿದ ಭಾರತ!

* ಕೊರೋನಾ ನಿಯಂತ್ರಿಸಲು ದೆಶದಲ್ಲಿ ಭರದಿಂದ ಸಾಗುತ್ತಿದೆ ಲಸಿಕೆ ಅಭಿಯಾನ

* ಲಸಿಕೆ ಅಭಿಯಾನದಲ್ಲಿ ಭಾರತದ ಮತ್ತೊಂದು ಸಾಧನೆ

* 18 ಪ್ರಮುಖ ರಾಷ್ಟ್ರಗಳನ್ನು ಹಿಂದಿಕ್ಕಿದೆ ಭಾರತ

Including USA Japan  India surpasses average daily Covid 19 vaccination of 18 countries pod

ನವದೆಹಲಿ(ಸೆ.16): ಕೊರೋನಾ ಸೋಳಿಸುವ ಯುದ್ಧದಲ್ಲಿ, ಭಾರತ ಪ್ರಪಂಚದ ಎಲ್ಲಾ ರಾಷ್ಟ್ರಗಳನ್ನು ಹಿಂದಿಕ್ಕಿದೆ. ದೇಶದ ಸರಾಸರಿ ವ್ಯಾಕ್ಸಿನೇಷನ್ ಡೋಸ್ ವಿಶ್ವದ 18 ದೇಶಗಳಲ್ಲಿನ ಒಟ್ಟು ವ್ಯಾಕ್ಸಿನೇಷನ್‌ಗಿಂತ ಹೆಚ್ಚಿದೆ ಎಂಬುವುದು ಉಲ್ಲೇಖನೀಯ. ಯುಕೆ, ಕೆನಡಾ, ಇಟಲಿ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ 18 ದೇಶಗಳಲ್ಲಿ, ದಿನನಿತ್ಯದ ಲಸಿಕೆ ಪ್ರಮಾಣಕ್ಕಿಂತ, ಭಾರತದಲ್ಲಿ ನೀಡಲಾಗುತ್ತಿರುವ ಲಸಿಕೆ ಡೋಸ್‌ಗಳ ಸಂಖ್ಯೆ ಹೆಚ್ಚಾಗಿದೆ. ಈ 18 ದೇಶಗಳಲ್ಲಿ ಪ್ರತಿದಿನ 8.17 ಮಿಲಿಯನ್ ಲಸಿಕೆ ಡೋಸ್‌ಗಳನ್ನು ನೀಡಲಾಗುತ್ತಿದ್ದರೆ, ಕೇವಲ ಭಾರತದಲ್ಲಿ 8.54 ಮಿಲಿಯನ್ ಲಸಿಕೆ ಡೋಸ್‌ಗಳನ್ನು ಪ್ರತಿದಿನ ನೀಡಲಾಗುತ್ತಿದೆ.

18 ದೇಶಗಳಲ್ಲಿ ನಿತ್ಯ ಎಷ್ಟು ಲಸಿಕೆ ನೀಡಲಾಗುತ್ತಿದೆ?

ಜಪಾನ್‌ನಲ್ಲಿ ಪ್ರತಿದಿನ 1.42 ಮಿಲಿಯನ್ ಲಸಿಕೆಗಳನ್ನು ನೀಡಲಾಗುತ್ತಿದೆ. ಯುಎಸ್ಎಯಲ್ಲಿ ದಿನಕ್ಕೆ 0.79 ಮಿಲಿಯನ್ ಲಸಿಕೆಗಳಾದರೆ, ಇಂಡೋನೇಷ್ಯಾದಲ್ಲಿ 1.31 ಮಿಲಿಯನ್ ಲಸಿಕೆಗಳನ್ನು ಕೊಡಲಾಗುತ್ತಿದೆ. ಜರ್ಮನಿ ದಿನಕ್ಕೆ 0.18 ಮಿಲಿಯನ್ ಲಸಿಕೆ ನೀಡಿದರೆ, ರಷ್ಯಾ 0.39 ಮಿಲಿಯನ್ ಲಸಿಕೆಗಳು ಹಾಗೂ ಕೆನಡಾ ದಿನಕ್ಕೆ 0.09 ಮಿಲಿಯನ್ ಲಸಿಕೆ ನಿಡುತ್ತಿದೆ. ಇನ್ನು ಫ್ರಾನ್ಸ್ ದಿನಕ್ಕೆ 0.28 ಮಿಲಿಯನ್ ಲಸಿಕೆಗಳನ್ನು ಕೊಡುತ್ತಿದೆ.

ಸ್ವಿಡ್ಜರ್ಲೆಂಡ್‌ ದಿನಕ್ಕೆ 0.03 ಮಿಲಿಯನ್ ಲಸಿಕೆ ಕೊಟ್ಟರೆ, ಸ್ಪೇನ್‌ನಲ್ಲಿ ದಿನಕ್ಕೆ 0.23 ಮಿಲಿಯನ್ ಲಸಿಕೆಗಳ ನೀಡಲಾಘುತ್ತಿದೆ. ಇನ್ನು ಯುಕೆ ನಲ್ಲಿ 0.11 ಮಿಲಿಯನ್, ಬ್ರೆಜಿಲ್‌ನಲ್ಲಿ ದಿನಕ್ಕೆ 1.38 ಮಿಲಿಯನ್ ಹಾಗೂ ಸೌದಿ ಅರೇಬಿಯಾದಲ್ಲಿ ದಿನಕ್ಕೆ 0.21 ಮಿಲಿಯನ್ ಲಸಿಕೆ ನೀಡಲಾಗುತ್ತಿದೆ.

ಆಸ್ಟ್ರೇಲಿಯಾದಲ್ಲಿ 0.28 ಮಿಲಿಯನ್, ನ್ಯೂಜಿಲ್ಯಾಂಡ್‌ನಲ್ಲಿ 0.06 ಮಿಲಿಯನ್ , ಅರ್ಜೆಂಟೀನಾದಲ್ಲಿ ದಿನಕ್ಕೆ 0.11 ಮಿಲಿಯನ್ , ಇಟಲಿಯಲ್ಲಿ ದಿನಕ್ಕೆ 0.24 ಮಿಲಿಯನ್ ಲಸಿಕೆಗಳು, ದಕ್ಷಿಣ ಆಫ್ರಿಕಾದಲ್ಲಿ ದಿನಕ್ಕೆ 0.17 ಮಿಲಿಯನ್  ಹಾಗೂ ಟರ್ಕಿಯಲ್ಲಿ ದಿನಕ್ಕೆ 0.63 ಮಿಲಿಯನ್ ಲಸಿಕೆಗಳನ್ನು ನೀಡಲಾಗುತ್ತಿದೆ.

ಭಾರತದಲ್ಲಿ ದೈನಂದಿನ ನೀಡುತ್ತಿರುವ ಲಸಿಕೆ?

ದೇಶದಲ್ಲಿ ಪ್ರತಿದಿನ 8.54 ಮಿಲಿಯನ್ ಲಸಿಕೆಗಳನ್ನು ನೀಡಲಾಗುತ್ತಿದೆ. ಕೆಲವೇ ದಿನಗಳ ಹಿಂದೆ, 1.09 ಕೋಟಿ ಡೋಸ್ ಲಸಿಕೆ ಹಾಕುವ ಮೂಲಕ ಹೊಸ ದಾಖಲೆ ನಿರ್ಮಾಣಗೊಂಡಿದೆ. ಒಂದು ದಿನದಲ್ಲಿ ಒಂದು ಕೋಟಿಗೂ ಹೆಚ್ಚು ಲಸಿಕೆಗಳನ್ನು ನಡೆಸುವ ದಾಖಲೆಯನ್ನು ದೇಶದಲ್ಲಿ ಅನೇಕ ಬಾರಿ ಸ್ಥಾಪಿಸಿದೆ. ಕೋವಿಡ್ -19 ರ ಮೂರನೇ ತರಂಗದ ದೃಷ್ಟಿಯಿಂದ, ವ್ಯಾಕ್ಸಿನೇಷನ್ ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದೆ.

Latest Videos
Follow Us:
Download App:
  • android
  • ios