ಇಸ್ರೇಲ್‌ ಜತೆ ಬೆಂಬಲಕ್ಕೆ ನಿಲ್ಲಲು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಇಸ್ರೇಲ್‌ಗೆ ಭೇಟಿ ನೀಡ್ತಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ, ಜೋರ್ಡಾನ್‌ಗೂ ಸಹ ಅವರು ತೆರಳಲಿದ್ದಾರೆ. 

(ಟೆಲ್ ಅವೀವ್, ಇಸ್ರೇಲ್): ಇಸ್ರೇಲ್‌ ಮೇಲೆ ಹಮಾಸ್ ದಾಳಿಯ ನಂತರ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಇದೇ ಮೊದಲ ಬಾರಿಗೆ ಇಸ್ರೇಲ್‌ಗೆ ಬೇಟಿ ಮಾಡಲು ನಿರ್ಧರಿಸಿದ್ದಾರೆ. ಇಸ್ರೇಲ್‌ ಜತೆ ಬೆಂಬಲಕ್ಕೆ ನಿಲ್ಲಲು ಭೇಟಿ ನೀಡಲಿದ್ದಾರೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಘೋಷಿಸಿದ್ದಾರೆ. ಬಳಿಕ, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸಹ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

ಇನ್ನು, ಗಾಜಾಕ್ಕೆ ನೆರವು ನೀಡುವ ಯೋಜನೆಯನ್ನು ಅಭಿವೃದ್ಧಿಪಡಿಸಲು ಇಸ್ರೇಲ್ ಮತ್ತು ಅಮೆರಿಕ ಒಪ್ಪಿಕೊಂಡಿದೆ ಎಂದೂ ಆಂಟೋನಿ ಬ್ಲಿಂಕೆನ್ ಹೇಳಿದರು. ಅಕ್ಟೋಬರ್ 7 ರಂದು ಹಮಾಸ್ ದಾಳಿಯ ನಂತರ ಯುಎಸ್ ರಾಜತಾಂತ್ರಿಕರ ಎರಡನೇ ಭೇಟಿಯ ಕುರಿತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ರಕ್ಷಣಾ ಸಚಿವಾಲಯದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ಭೇಟಿಯಾದ ನಂತರ ಬ್ಲಿಂಕೆನ್ ಮಾತನಾಡಿದ್ದಾರೆ. "ಅಧ್ಯಕ್ಷರು ಇಸ್ರೇಲ್‌ನೊಂದಿಗೆ ಯುನೈಟೆಡ್ ಸ್ಟೇಟ್ಸ್ ಸಹಮತವನ್ನು ಮತ್ತು ಅದರ ಭದ್ರತೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲಿದ್ದಾರೆ" ಎಂದು ಆಂಟೋನಿ ಬ್ಲಿಂಕೆನ್ ಮಂಗಳವಾರ ಟೆಲ್ ಅವಿವ್‌ನಲ್ಲಿ ಹೇಳಿದರು.

ಇದನ್ನು ಓದಿ: ಹಮಾಸ್‌ ಉಗ್ರರಿಂದ ಹತ್ಯೆಯಾದ ಮಗಳು: ಫೋನ್‌, ಆ್ಯಪಲ್ ವಾಚ್ ಬಳಸಿ ಶವ ಪತ್ತೆಹಚ್ಚಿದ ತಂದೆ

Scroll to load tweet…

"ಹಮಾಸ್ ಮತ್ತು ಇತರ ಭಯೋತ್ಪಾದಕರಿಂದ ತನ್ನ ಜನರನ್ನು ರಕ್ಷಿಸಲು ಮತ್ತು ಭವಿಷ್ಯದ ದಾಳಿಯನ್ನು ತಡೆಯಲು ಇಸ್ರೇಲ್ ಹಕ್ಕು ಮತ್ತು ಕರ್ತವ್ಯವನ್ನು ಹೊಂದಿದೆ" ಎಂದೂ ಬ್ಲಿಂಕೆನ್‌ ಹೇಳಿದರು. "ಆ ಅಗತ್ಯಗಳನ್ನು ಪೂರೈಸಲು ನಾವು ಕಾಂಗ್ರೆಸ್‌ನೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವುದರಿಂದ ತನ್ನ ಜನರನ್ನು ರಕ್ಷಿಸಲು ಏನು ಬೇಕು ಎಂದು ಇಸ್ರೇಲ್‌ನಿಂದ ಜೋ ಬೈಡೆನ್‌ನಿಂದ ಕೇಳಲಿದ್ದಾರೆ ಎಂದು ಅವರು ಹೇಳಿದರು. 

Scroll to load tweet…

ಹಮಾಸ್ ಆಳ್ವಿಕೆಯ ಪ್ರದೇಶದ ವಿರುದ್ಧ ಇಸ್ರೇಲ್ ಭೂ ಸೇನೆ ಆಕ್ರಮಣವನ್ನು ಸಿದ್ಧಪಡಿಸುತ್ತಿರುವಾಗ, ಬಡ ಮತ್ತು ದಿಗ್ಬಂಧನಕ್ಕೊಳಗಾದ ಗಾಜಾ ಪಟ್ಟಿಗೆ ವಿದೇಶಿ ನೆರವು ತರಲು ಕೆಲಸ ಮಾಡುವ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಇಸ್ರೇಲ್‌ನಿಂದ ಭರವಸೆಯನ್ನು ಪಡೆದುಕೊಂಡಿದೆ ಎಂದೂ ಬ್ಲಿಂಕೆನ್‌ ಹೇಳಿದರು. "ನಾಗರಿಕ ಸಾವುನೋವುಗಳನ್ನು ಕಡಿಮೆ ಮಾಡುವ ರೀತಿಯಲ್ಲಿ ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ಹೇಗೆ ನಡೆಸುತ್ತದೆ ಎಂಬುದನ್ನು ಕೇಳಲು ಜೋ ಬೈಡೆನ್‌ ಆಶಿಸಿದ್ದಾರೆ ಮತ್ತು ಹಮಾಸ್‌ಗೆ ಪ್ರಯೋಜನವಾಗದ ರೀತಿಯಲ್ಲಿ ಗಾಜಾದಲ್ಲಿ ನಾಗರಿಕರಿಗೆ ಮಾನವೀಯ ನೆರವು ಹರಿಯಲು ಅನುವು ಮಾಡಿಕೊಡುತ್ತದೆ" ಎಂದೂ ಬ್ಲಿಂಕೆನ್ ಹೇಳಿದರು.

ಇದನ್ನೂ ಓದಿ: ಇಸ್ರೇಲ್ ಸೈನಿಕರಿಗೆ ಉಚಿತ ಊಟ ಘೋಷಣೆ: ಮೆಕ್‌ಡೊನಾಲ್ಡ್ಸ್ ಔಟ್ಲೆಟ್‌ ಮೇಲೆ ಪ್ಯಾಲೆಸ್ತೀನ್‌ ಬೆಂಬಲಿಗರ ದಾಳಿ!

"ನಮ್ಮ ಕೋರಿಕೆಯ ಮೇರೆಗೆ, ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ದಾನಿ ರಾಷ್ಟ್ರಗಳು ಹಾಗೂ ಬಹುಪಕ್ಷೀಯ ಸಂಸ್ಥೆಗಳಿಂದ ಮಾನವೀಯ ಸಹಾಯವನ್ನು ಗಾಜಾದಲ್ಲಿ ನಾಗರಿಕರನ್ನು ತಲುಪಲು ಅನುವು ಮಾಡಿಕೊಡುವ ಯೋಜನೆಯನ್ನು ಅಭಿವೃದ್ಧಿಪಡಿಸಲು ಒಪ್ಪಿಕೊಂಡಿವೆ" ಎಂದೂ ಅವರು ಹೇಳಿದರು.

ಉಭಯ ಕಡೆಯವರು "ನಾಗರಿಕರಿಗೆ ಹಾನಿಯಾಗದಂತೆ ಸಹಾಯ ಮಾಡಲು ಪ್ರದೇಶಗಳನ್ನು ರಚಿಸುವ ಸಾಧ್ಯತೆ" ಕುರಿತು ಚರ್ಚಿಸುತ್ತಿದ್ದಾರೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಯಾರ್ಯಾರು ಬದುಕ್ಬೇಕೋ ಅವರು 24 ಗಂಟೆಗಳಲ್ಲಿ ಊರು ಖಾಲಿ ಮಾಡಿ ಎಂದ ಇಸ್ರೇಲ್‌: ದಿಕ್ಕಾಪಾಲಾಗಿ ಓಡ್ತಿರೋ ಗಾಜಾ ಜನತೆ!