ಕೀನ್ಯಾ(ಏ.12): ಜಾಂಕಿ ಬಹುಶಃ ಈ ಹೆಸರನ್ನು ನೀವು ಮೊದಲ ಬಾರಿ ಕೇಳಿರುತ್ತೀರಿ. ಅಷ್ಟಕ್ಕೂ ಏನಿದು ಅಂತೀರಾ? ಇದು ಜೀಬ್ರಾ ಹಾಗೂ ಡಾಂಕಿ(ಕತ್ತೆ)ಗೆ ಹುಟ್ಟಿದ ಮರಿ. ಹೀಗಾಗಿ ಇವೆರಡನ್ನೂ ಸೇರಿಸಿ ಈ ಪುಟ್ಟ ಮರಿಗೆ ಜಾಂಕಿ ಎಂದು ಹೆಸರಿಡಲಾಗಿದೆ. 

ಅಯ್ಯೋ, ಅಮೇರಿಕಾದ ಹೆಣ್ಣು ಹುಲಿಗೂ ತಗುಲಿತು ಕೊರೋನಾ!

ಹೌದು ಕೀನ್ಯಾದ ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್ ಫೋಸ್ಟ್ ಒಂದನ್ನು ಶೇರ್ ಮಾಡಿದೆ. ಇದರಲ್ಲಿ ಜಾಂಕಿಯ ಫೋಟೋ ಶೇರ್ ಮಾಡಿ ಇದು ಕತ್ತೆ ಹಾಗೂ ಜೀಬ್ರಾದ ಮರಿ ಎಂಬ ವಿಚಾರವನ್ನು ಬಹಿರಂಗಪಡಿಸಿದೆ. 

ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್ ಜಾಂಕಿ ಜನಿಸಿದ ಸಂಪೂರ್ಣ ವೃತ್ತಾಂತವನ್ನು ಅಧಿಕೃತ ಫೇಸ್ಬುಕ್ ಪೇಜ್‌ನಲ್ಲಿ ಬರೆದುಕೊಂಡಿದೆ. ಇನ್ನು ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್ ಪ್ರಾಣಿಗಳ ರಕ್ಷಣೆ, ಅವುಗಳ ಪಾಲನೆ - ಪೋಷಣೆಗೆ ವಿಶೇಷ ಗಮನ ಹರಿಸುತ್ತದೆ. ಇದಕ್ಕಾಗೇ ಇದು ಬಹಳಷ್ಟು ಫೇಮಸ್.

ಕಳೆದ ವರ್ಷ ಮೇ ತಿಂಗಳಲ್ಲಿ ಜೀಬ್ರಾ ಸಾವೋ ಈಸ್ಟ್ ನ್ಯಾಷನಲ್ ಪಾರ್ಕ್‌ನಿಂದ ತಪ್ಪಿಸಿಕೊಂಡು, ಅಲ್ಲಿನ ಸ್ಥಳೀಯ ಮಹಿಳೆಯ ಸಾಕು ಪ್ರಾಣಿಗಳ ಗುಂಪು ಸೇರಿಕೊಂಡಿತ್ತು. ಈ ಮಾಹಿತಿ ಟ್ರಸ್ಟ್‌ಗೆ ಸಿಕ್ಕಿದ ಕೂಡಲೇ ಜೀಬ್ರಾವನ್ನು ಮರಳಿ ಪಾರ್ಕ್‌ಗೆ ಕರೆತಂದ ಸಿಬ್ಬಂದಿ, ಅದರ ಮೇಲೆ ನಿಗಾ ಇಟ್ಟಿರು. ಅಲ್ಲದೇ ವಿಶೇಷ ಆರೈಕೆ ಮಾಡಿದರು. 

ಲಾಕ್‌ಡೌನ್‌ ಎಫೆಕ್ಟ್‌: ಹಸಿದ ಪ್ರಾಣಿಗಳಿಗೆ ಯುವಕರಿಂದ ಆಹಾರ

ಇನ್ನು ಜೀಬ್ರಾವನ್ನು ಮರಳಿ ಪಾರ್ಕ್‌ಗೆ ಕರೆ ತಂದಾಗ ಅದು ಪ್ರೆಗಗ್ನೆಂಟ್ ಆಗಿತ್ತು. ಅಲ್ಲದೇ ಕೆಲವೇ ವಾರಗಳಲ್ಲಿ ಅದು ಒಂದು ಮುದ್ದಾದ ಮರಿಗೆ ಜನ್ಮ ಕೊಟ್ಟಿತು. ಈ ಮರಿ ಜನಿಸಿದಾಗಲೇ ಕೊಂಚ ವಿಚಿತ್ರವಾಗಿ ಕಾಣುತ್ತಿತ್ತು. ಆದರೆ ಇದಾದ ಕೆಲ ಸಮಯದಲ್ಲಿ ವಾಸ್ತವ ಕಣ್ಣಿಗೆ ಬಿದ್ದಿದ್ದು, ಅದು ಜಾಂಕಿಗೆ ಜನ್ಮ ನೀಡಿದ್ದು ಖಚಿತವಾಯ್ತು. ಅದು ನೋಡಲು ಕತ್ತೆಯಂತಿತ್ತು, ಆದರೆ ಕಾಲುಗಳು ಜೀಬ್ರಾದಂತೆ ಕಪ್ಪು ಹಾಗೂ ಬಿಳಿ ಬಣ್ಣದ ಗೆರೆಗಳನ್ನು ಹೊಂದಿತ್ತು ಎಂದಿದ್ದಾರೆ.