3 ಕಡೆ ಸುಧಾರಣೆ ತಂದ್ರೆ ಭಾರತದ ಆರ್ಥಿಕತೆ ಬಲ ಹೆಚ್ಚಾಗುತ್ತೆ: ಐಎಂಎಫ್
ಭಾರತವು ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆಯಾಗಿ ಮುಂದುವರೆದಿದ್ದು, ದೇಶದ ಸ್ಥೂಲ ಅರ್ಥಶಾಸ್ತ್ರೀಯ ಸಂಗತಿಗಳು ಗಟ್ಟಿಯಾಗಿವೆ ಎಂದು ಐಎಂಎಫ್ ಶ್ಲಾಘಿಸಿದೆ.
ವಾಷಿಂಗ್ಟನ್: ಭಾರತವು ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆಯಾಗಿ ಮುಂದುವರೆದಿದ್ದು, ದೇಶದ ಸ್ಥೂಲ ಅರ್ಥಶಾಸ್ತ್ರೀಯ ಸಂಗತಿಗಳು ಗಟ್ಟಿಯಾಗಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಶ್ಲಾಘಿಸಿದೆ.
‘2024-25ನೇ ಸಾಲಿನಲ್ಲಿ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.7ರ ದರದಲ್ಲಿ ಬೆಳೆಯಲಿದೆ. ಒಳ್ಳೆಯ ಮಳೆಯಾಗಿರುವುದರಿಂದ ಕೃಷಿ ಉತ್ಪಾದನೆಯೂ ಚೆನ್ನಾಗಿರಲಿದೆ. ದೇಶವು ಈಗಲೂ ಜಗತ್ತಿನ ಅತಿದೊಡ್ಡ ಅಭಿವೃದ್ಧಿಶೀಲ ಆರ್ಥಿಕತೆಯಾಗಿದೆ’ ಎಂದು ಐಎಂಎಫ್‌ನ ಏಷ್ಯಾ ಪೆಸಿಫಿಕ್ ನಿರ್ದೇಶಕ ಕೃಷ್ಣ ಶ್ರೀನಿವಾಸನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಮೂರು ಕ್ಷೇತ್ರಗಳಲ್ಲಿ ಭಾರತ ಸುಧಾರಣೆ ಮಾಡಿಕೊಂಡರೆ ಇನ್ನಷ್ಟು ವೇಗವಾಗಿ ಬೆಳೆಯಲಿದೆ. ಮೊದಲನೆಯದಾಗಿ, ಇನ್ನಷ್ಟು ಉದ್ಯೋಗಗಳನ್ನು ಸೃಷ್ಟಿಸಬೇಕು. ಎರಡನೆಯದಾಗಿ, ವ್ಯಾಪಾರಕ್ಕೆ ಸಂಬಂಧಿಸಿದಂತೆ ಇರುವ ಕೆಲ ನಿರ್ಬಂಧಗಳನ್ನು ತೆರವುಗೊಳಿಸಬೇಕು. ಮೂರನೆಯದಾಗಿ, ಮೂಲಸೌಕರ್ಯ ಹಾಗೂ ಡಿಜಿಟಲ್ ಸೌಕರ್ಯಗಳನ್ನು ಹೆಚ್ಚಿಸಬೇಕು ಎಂದೂ ಅವರು ತಿಳಿಸಿದ್ದಾರೆ.
ಈ ವರ್ಷವಷ್ಟೇ ದೇಶ ಚುನಾವಣೆಯನ್ನು ಎದುರಿಸಿದ್ದರೂ ಆರ್ಥಿಕ ವ್ಯವಹಾರಗಳು ಸುಸ್ಥಿತಿಯಲ್ಲಿವೆ. ವಿದೇಶಿ ಮೀಸಲು ಚೆನ್ನಾಗಿದೆ. ಸ್ಥೂಲ ಅರ್ಥಶಾಸ್ತ್ರೀಯ ಸಂಗತಿಗಳು ಉತ್ತಮವಾಗಿವೆ. ಹೀಗಾಗಿ ದೇಶ ಚೆನ್ನಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದ್ದಾರೆ.
ಭಾರತಕ್ಕೆ ಇನ್ನೂ ಸಾಕಷ್ಟು ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಮಾಡಿಕೊಳ್ಳಲು ಅವಕಾಶಗಳಿವೆ. ಉದ್ಯೋಗಿಗಳ ಕೌಶಲ್ಯಾಭಿವೃದ್ಧಿ ಹೆಚ್ಚಿಸಬೇಕಿದೆ. ಸಾಮಾಜಿಕ ಭದ್ರತಾ ಉಪಕ್ರಮಗಳು ಸುಧಾರಿಸಬೇಕಿದೆ. ಸರ್ಕಾರಿ ವ್ಯವಹಾರಗಳಲ್ಲಿನ ವಿಳಂಬ ನೀತಿ ನಿವಾರಣೆಯಾಗಬೇಕಿದೆ ಎಂದೂ ಅವರು ತಿಳಿಸಿದ್ದಾರೆ.
ಜಿಡಿಪಿ ಈ ವರ್ಷ ಶೇ.7ಕ್ಕೆ, 2025ರಲ್ಲಿ ಶೇ.6.5ಕ್ಕೆ ಇಳಿಕೆ ಸಂಭವ
2023ರಲ್ಲಿ ಶೇ.8.2ರಷ್ಟಿದ್ದ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ), ಈ ವರ್ಷ ಶೇ.7ಕ್ಕೆ ಹಾಗೂ 2025ರಲ್ಲಿ ಶೇ.6.5ಕ್ಕೆ ಕುಸಿತವಾಗುವ ಸಾಧ್ಯತೆ ಇದದೆ ಎಂದು ಮಂಗಳವಾರ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜಿಸಿದೆ.
ಭಾರತ ತನ್ನ ಅಭಿವೃದ್ಧಿಯ ವೇಗಕ್ಕೆ ಹೋಲಿಸಿದರೆ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದೆ: ಗೀತಾ ಗೋಪಿನಾಥ್
ಪ್ರಮುಖವಾಗಿ ಕೋವಿಡ್-19 ಮುಗಿದ ನಂತರ ವಸ್ತುಗಳ ಬೇಡಿಕೆ ಹೆಚ್ಚಿತ್ತು. ಆದ್ದರಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಯಲ್ಲಿ ತೊಡಗಿದ್ದರು. ಇದರಿಂದ ಭಾರತದ ಜಿಡಿಪಿ ಏರಿಕೆ ಕಂಡಿತ್ತು. ಆದರೆ ಈಗ ಜಗತ್ತು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಹೀಗಾಗಿ ಜಿಡಿಪಿ ಇಳಿಕೆಯಾಗಲಿದೆ ಎಂದು ಅದು ಹೇಳಿದೆ.
2027ರ ವೇಳೆಗೆ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆ: ವಿಶ್ವಬ್ಯಾಂಕ್
ಭಾರತದ ಆರ್ಥಿಕ ಪ್ರಗತಿ ದರ ನಿರೀಕ್ಷೆಗಿಂತ ಉತ್ತಮವಾಗಿದೆ. ಹೀಗಾಗಿ 2027ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು (ಐಎಂಎಫ್) ನಿಧಿಯ ಹಿರಿಯ ಅಧಿಕಾರಿ, ಮೈಸೂರು ಮೂಲದ ಗೀತಾ ಗೋಪಿನಾಥ್ ಹೇಳಿದ್ದಾರೆ.
ಸಾಲದ ಸುಳಿಗೆ ಸಿಲುಕಿ 1.5 ಲಕ್ಷ ಸರ್ಕಾರಿ ಹುದ್ದೆಗಳನ್ನೇ ಕಡಿತಗೊಳಿಸಿದ ಪಾಕಿಸ್ತಾನ