Asianet Suvarna News Asianet Suvarna News

ಕಮಲಾ ಹ್ಯಾರಿಸ್‌ಗಿಂತ ಹೆಚ್ಚು ಭಾರತೀಯರ ಬೆಂಬಲ ನನಗಿದೆ: ಟ್ರಂಪ್‌

 ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಭಾರತೋಯ ಮೂಲದ ಕಮಲಾ ಹ್ಯಾರಿಸ್‌|  ಕಮಲಾ ಹ್ಯಾರಿಸ್‌ ಸ್ಪರ್ಧೆ ಬೆನ್ನಲ್ಲೇ ಟ್ರಂಪ್ ಟಾಂಗ್| ಹೆಚ್ಚು ಭಾರತೀಯರ ಬೆಂಬಲ ನನಗಿದೆ ಎಂದ ಟ್ರಂಪ್

I Have More Indians Than She Has Trump Taunts Kamala Harris
Author
Bangalore, First Published Aug 16, 2020, 7:53 AM IST

ವಾಷಿಂಗ್ಟನ್(ಆ.16): ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಸ್ಪರ್ಧಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹ್ಯಾರಿಸ್‌ ಅವರಿಗಿಂತ ಹೆಚ್ಚು ಭಾರತೀಯರ ಬೆಂಬಲ ನನಗಿದೆ ಎಂದು ಟಾಂಗ್‌ ನೀಡಿದ್ದಾರೆ.

ಶುಕ್ರವಾರ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷ ಸ್ಫರ್ಧಿ ಜೋ ಬೈಡೆನ್‌ ಮತ್ತು ಉಪಾಧ್ಯಕ್ಷ ಸ್ಪರ್ಧಿ ಕಮಲಾ ಹ್ಯಾರಿಸ್‌ ವಿರುದ್ಧ ವಾಗ್ದಾಳಿ ಡೆಸಿರುವ ಟ್ರಂಪ್‌, ‘ಬೈಡೆನ್‌ ಅವರ ಕೈಯಲ್ಲಿ ಅಮೆರಿಕನ್ನರಾರೂ ಸುರಕ್ಷಿತರಲ್ಲ. ಇನ್ನು ಕಮಲಾ ಹ್ಯಾರಿಸ್‌ ಭಾರತೀಯ ಮೂಲದವರು. ಆದರೆ ಅವರಿಗಿಂತ ಹೆಚ್ಚು ಭಾರತೀಯ ಬೆಂಬಲ ನನಗಿದೆ’ ಎಂದು ಹೇಳಿದ್ದಾರೆ.

ಕಮಲಾ ಹ್ಯಾರಿಸ್, ಇಡ್ಲಿ ತಿಂದು ಬೆಳೆದ ಭಾರತೀಯ ಸಂಜಾತೆ ಇಂದು ಯುಎಸ್‌ ಉಪಾಧ್ಯಕ್ಷ ಸ್ಪರ್ಧಿ!

ಯಾರು ಈ ಕಮಲಾ ಹ್ಯಾರಿಸ್?

ಡೆಮೊಕ್ರೆಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡಲಿರುವ ಕಮಲಾ ಭಾರತದ ಮೊಸರನ್ನ, ದಾಲ್ , ಪೊಟ್ಯಾಟೋ ಕರಿ, ಇಡ್ಲಿ ತಿಂದು ದೊಡ್ಡವರಾದವರು.  ಕೆಲ ವರ್ಷಗಳ ಹಿಂದೆ ಚೆನ್ನೈ ಗೆ ಭೇಟಿ ನೀಡಿ ತಮ್ಮ ಅಜ್ಜಿ-ಅಜ್ಜನ ಮಾತನಾಡಿಸಿಕೊಂಡು ಹೋಗಿದ್ದರು. ಸಂದರ್ಶನವೊಂದರಲ್ಲಿ ದಕ್ಷಿಣ ಭಾರತದ ಆಹಾರದ ಬಗ್ಗೆ ಹೇಳಿಕೊಂಡಿದ್ದರು. ತಾಯಿಯಿಂದ ಭಾರತೀಯ ಪರಂಪರೆಯ ಅನೇಕ ಅಂಶಗಳನ್ನು ಆಕೆ ಕಲಿತುಕೊಂಡಿದ್ದಾರೆ. ಕಮಲಾ ಹೆಸರು ಘೋಷಣೆಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿಯೂ ಸಂಭ್ರಮ ಮನೆ ಮಾಡಿತ್ತು.

ಉಪಾಧ್ಯಕ್ಷ ಸ್ಪರ್ಧೆಗೆ ಅಣಿಯಾದ ಮೊದಲ ಕಪ್ಪು ಮಹಿಳೆ(ಕಮಲಾ ತಂದೆ ಜಮೈಕಾ ಮೂಲದವರು)  ಮೊದಲ ಭಾರತೀಯ ಸಂಜಾತೆ ಎನ್ನುವ ಅನೇಕ ಶ್ರೇಯ ಪಡೆದುಕೊಂಡರು. ಕಮಲಾ ತಾಯಿ ಶ್ಯಾಮಲಾ ಚೆನ್ನೈನಲ್ಲಿ ಜನಿಸಿದವರು. ಕ್ಯಾನ್ಸರ್ ಸಂಶೋಧಕಿಯಾಗಿ ಅಮೆರಿಕ್ಕೆ ತೆರಳಿದ್ದರು.

ಈ ಬಾರಿ ಟ್ರಂಪ್‌ಗೆ ಸೋಲು ಖಚಿತ: ಅಮೆರಿಕ ‘ಜ್ಯೋತಿಷಿ’!

ಪಕ್ಷದಿಂದ ಬಹುಮತದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೂರನೇ ಮಹಿಳೆ ಕ್ಯಾಲಿಫೋರ್ನಿಯಾ ರಾಜ್ಯದ ಸೆನೆಟರ್ ಕಮಲಾ ಹ್ಯಾರಿಸ್. ಈ ಹಿಂದೆ 2008ರಲ್ಲಿ ಅಲಸ್ಕ ಗವರ್ನರ್ ಸಾರಾ ಪಾಲಿನ್ ಮತ್ತು ನ್ಯೂಯಾರ್ಕ್ ರೆಪ್ರೆಸೆಂಟೇಟಿವ್ ಗೆರಲ್ಡಿನ್ ಫೆರ್ರರೊ 1984ರಲ್ಲಿ ಪಕ್ಷಗಳಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಈ ಹಿಂದೆ ಕಳೆದ ವರ್ಷ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟು ಕಮಲಾ ಹ್ಯಾರಿಸ್ ಪ್ರಚಾರವನ್ನು ಆರಂಭಿಸಿದ್ದರು. ನಂತರ ತಮ್ಮ ಪ್ರಚಾರವನ್ನು ಮುಂದುವರಿಸಲು ಹಣಕಾಸಿನ ಕೊರತೆಯಿದೆ ಎಂದು ಸ್ಪರ್ಧೆಯಿಂದ ಹಿಂದೆ ಸರಿದರು. ಅಮೆರಿಕ ಸೆನೆಟ್ ನಲ್ಲಿರುವ ಮೂವರು ಏಷ್ಯಾ ಅಮೆರಿಕನ್ ಮಹಿಳೆಯರಲ್ಲಿ ಕಮಲಾ ಹ್ಯಾರಿಸ್ ಒಬ್ಬರಾಗಿದ್ದಾರೆ .

Follow Us:
Download App:
  • android
  • ios