ರಷ್ಯಾ ಯುದ್ಧ ಟ್ಯಾಂಕರ್‌ಗೆ ಅಡ್ಡಲಾಗಿ ನಿಂತ ಉಕ್ರೇನ್ ನಾಗರಿಕರು: ವಿಡಿಯೋ ವೈರಲ್
- ಎಂತದ್ದೇ ಪ್ರತಿರೋಧ ಬಂದರು ಕುಗ್ಗದ ಉಕ್ರೇನಿಯರ ಆತ್ಮಸ್ಥೈರ್ಯ
- ರಷ್ಯಾದ ಯುದ್ಧ ಟ್ಯಾಂಕರ್‌ಗೆ ಅಡ್ಡಲಾಗಿ ನಿಂತ ನಾಗರಿಕರು
- ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಕೈವ್(ಫೆ.28): ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ಸೈನಿಕರಿಗೆ ಉಕ್ರೇನ್‌ನ ಸೈನಿಕರಿಗಿಂತ ಹೆಚ್ಚು ನಾಗರಿಕರೇ ತೀವ್ರ ಪ್ರತಿರೋಧವನ್ನು ಒಡ್ಡುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಉಕ್ರೇನ್ ನಾಗರಿಕರು ರಷ್ಯಾಯುದ್ಧ ವಿಮಾನಕ್ಕೆ ಮಾರ್ಗದಲ್ಲಿ ನಿರ್ಬಂಧ ಹೇರಿರುವ ದೃಶ್ಯವನ್ನು ಕಾಣಬಹುದು. ನೂರಾರು ಉಕ್ರೇನಿಯನ್ನರು ರಾಜಧಾನಿ ಕೈವ್‌ನತ್ತ ಹೋಗುತ್ತಿದ್ದ ರಷ್ಯಾದ ಟ್ಯಾಂಕ್‌ಗಳ ಮಾರ್ಗವನ್ನು ನಿರ್ಬಂಧಿಸಿದ್ದಾರೆ. ಎಎಫ್‌ಪಿ ಸುದ್ದಿ ಸಂಸ್ಥೆ ಹಂಚಿಕೊಂಡ ವಿಡಿಯೋದಲ್ಲಿ ರಷ್ಯಾ (Russia) ವಿರುದ್ಧ ಉಕ್ರೇನ್ (Ukraine)ಜನರ ಕೆಚ್ಚೆದೆಯ ಹೋರಾಟ ಕಾಣಿಸುತ್ತಿದೆ. ಈ ರಷ್ಯಾದ ಟ್ಯಾಂಕರ್‌ಗಳು ದಾರಿ ಕೇಳಲು ರಸ್ತೆ ಮಧ್ಯೆ ನಿಲ್ಲಿಸಿವೆ. ಈ ವೇಳೆ ಆ ಟ್ಯಾಂಕರ್‌ಗಳನ್ನು ತಮ್ಮ ವಾಹನಗಳಿಂದ ಉಕ್ರೇನ್ ಜನ ಸುತ್ತುವರೆದು ಮುಂದೆ ಹೋಗದಂತೆ ತಡೆದರು ಎಂದು ತಿಳಿದು ಬಂದಿದೆ.
ಇತ್ತ ಉಕ್ರೇನ್ ಮೇಲೆ ರಷ್ಯಾದ ಸಂಪೂರ್ಣ ಮಿಲಿಟರಿ ದಾಳಿಯು ಐದನೇ ದಿನವೂ ಮುಂದುವರೆದಿದೆ.ಉಕ್ರೇನ್‌ನಲ್ಲಿನ ಆಡಳಿತಾಧಿಕಾರಿಗಳು ದೇಶದ ಸಾರ್ವಭೌಮತ್ವವನ್ನು ರಕ್ಷಿಸುವ ಪ್ರಯತ್ನವಾಗಿ ದೇಶದ ನಾಗರಿಕರನ್ನು ಜೊತೆ ಸೇರಲು ಒತ್ತಾಯಿಸಿದ್ದಾರೆ. ಅನೇಕರು ಸ್ವಯಂಪ್ರೇರಣೆಯಿಂದ ಸೈನ್ಯಕ್ಕೆ ಸೇರಿದರೆ ಮತ್ತೆ ಕೆಲವರು ಜೀವ ಉಳಿಸಿಕೊಳ್ಳುವ ಸಲುವಾಗಿ ದೇಶಬಿಟ್ಟು ಓಡಿ ಹೋಗಿದ್ದಾರೆ. ಅದಾಗ್ಯೂ ರಷ್ಯಾಗೆ ಹೋಲಿಸಿದರೆ ಮಿಲಿಟರಿ ಸಾಮರ್ಥ್ಯದಲ್ಲಿ ಅದರ ಕಾಲು ಭಾಗದಷ್ಟು ಇಲ್ಲದ ಉಕ್ರೇನ್ ದೇಶದ ಜನ ತಮ್ಮ ತಾಯ್ನಾಡಿನ ಮೇಲಿನ ಪ್ರೇಮವನ್ನು ಪ್ರದರ್ಶಿಸುತ್ತಿರುವ ಹಲವು ವಿಡಿಯೋಗಳು ಈಗಾಗಲೇ ವೈರಲ್ ಆಗಿದೆ.
ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಯ ಅಮ್ಮ ಸಾವು: ವಿಡಿಯೋ ಕಾಲ್‌ನಲ್ಲಿ ಅಂತಿಮ ದರ್ಶನ ಪಡೆದ ಮಗ
ಕೋರ್ಯುಕಿವ್ಕಾದ (Koryukivka) ಹೊರವಲಯದಲ್ಲಿ ಈ ಘಟನೆ ನಡೆದಿದೆ. ಉಕ್ರೇನ್ ಜನರು ರಷ್ಯಾದ ಸೈನಿಕರ ಚಲನೆಯನ್ನು ತಡೆಯುತ್ತಿದ್ದಾರೆ. ರಷ್ಯಾದ ಸೈನಿಕರು ನಿರ್ದೇಶನಗಳನ್ನು ಕೇಳಲು ವಾಹನ ನಿಲ್ಲಿಸಿದರು. ಆದರೆ ಅವರು ಕೈವ್ ಕಡೆಗೆ ಚಲಿಸುವುದನ್ನು ತಡೆಯಲು ಸ್ಥಳೀಯರು ಅವರನ್ನು ಸುತ್ತುವರೆದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗೆ ರಸ್ತೆ ಅಭಿವೃದ್ಧಿಯ ಉಸ್ತುವಾರಿ ವಹಿಸಿರುವ ಉಕ್ರೇನಿಯನ್ ಕಂಪನಿಯು ರಷ್ಯಾ ಸೈನ್ಯವನ್ನು ದಿಕ್ಕು ತಪ್ಪಿಸಲು ರಸ್ತೆ ಚಿಹ್ನೆಗಳನ್ನು ತೆಗೆದುಹಾಕುತ್ತಿದೆ ಎಂದು ಹೇಳಿದೆ. ಶತ್ರುಗಳು ಕಳಪೆ ಸಂವಹನವನ್ನು ಹೊಂದಿದ್ದಾರೆ, ಅವರು ಭೂಪ್ರದೇಶವನ್ನು ನ್ಯಾವಿಗೇಟ್ ಮಾಡಲು ಸಾಧ್ಯವಿಲ್ಲ ಎಂದು ಉಕ್ರಾವ್ಟೋಡರ್ ಎಂಬುವವರು ಫೇಸ್‌ಬುಕ್ ಅಪ್ಡೇಟ್‌ನಲ್ಲಿ ಹೇಳಿದ್ದಾರೆ.
ಏತನ್ಮಧ್ಯೆ, ರಷ್ಯಾದ ಪಡೆಗಳು ಉಕ್ರೇನ್‌ನ ರಾಜಧಾನಿ ಕೈವ್ ಅನ್ನು ಎಲ್ಲಾ ಕಡೆಯಿಂದ ಮುಚ್ಚುತ್ತಿವೆ. ಯುಎಸ್ ಮೂಲದ ಗುಪ್ತಚರ ಕಂಪನಿಯಾದ ಮ್ಯಾಕ್ಸರ್ ಟೆಕ್ನಾಲಜೀಸ್ ಪ್ರಕಾರ, ಟ್ಯಾಂಕರ್‌ಗಳು ಸೇರಿದಂತೆ ರಷ್ಯಾದ ಭೂಸೇನೆಯ ದೊಡ್ಡ ಬೆಂಗಾವಲು ನಗರದ ಸುಮಾರು 64 ಕಿಲೋಮೀಟರ್ ದೂರದಲ್ಲಿದೆ.\
Russia Ukraine Crisis: ತಾಯಿ ನೆಲದ ರಕ್ಷಣೆಗಾಗಿ ಸೈನಿಕರಾದ ನಾಗರಿಕರು!
ಯುದ್ಧಪೀಡಿತ ಉಕ್ರೇನ್‌ನಲ್ಲಿ ಬಂಕರ್‌ಗಳೇ ಆಶ್ರಯ ತಾಣಗಳಾಗಿವೆ. ದಾಳಿಯನ್ನು ಮುಂದುವರೆಸಿರುವ ರಷ್ಯಾ, ಉಕ್ರೇನ್‌ನ ಖಾರ್ಕೀವ್ ನಗರವನ್ನು ವಶಪಡಿಸಿಕೊಳ್ಳುವತ್ತ ಮುನ್ನುಗ್ಗಿದೆ. ಖಾರ್ಕೀವ್ ಸ್ಥಳೀಯರು, ರಷ್ಯಾ ಸೇನೆಯನ್ನು ಹಿಮ್ಮೆಟ್ಟಿಸಿದ್ದಾರೆ. ಟ್ಯಾಂಕರ್‌ಗಳನ್ನು ಸ್ಪೋಟಿಸಿ, ಸೈನಿಕರಿಗೆ ಪ್ರತಿರೋಧ ಒಡ್ಡಿದ್ದಾರೆ. ಎಲ್ಲೆಲ್ಲೂ ಬಾಂಬ್ ಸದ್ದು, ಸಾವು-ನೋವು ಸಂಭವಿಸುತ್ತಿದೆ.