ಪ್ರಕೃತಿ ಒಂದು ಸೋಜಿಗದ ಸಮುದ್ರ. ಅಪಾರವಾದ ಗುಟ್ಟುಗಳನ್ನು ವೈವಿಧ್ಯತೆಯನ್ನು ಮಾನವ ನಿರ್ಮಿಸಲು ಅಸಾಧ್ಯವೆನಿಸಿದ ಪ್ರಕೃತಿ ರಮಣೀಯ ಸೌಂದರ್ಯವನ್ನು ಪ್ರಕೃತಿ ತನ್ನೊಳಗೆ ಬಚ್ಚಿಟ್ಟುಕೊಂಡಿದೆ.
ಪ್ರಕೃತಿ ಒಂದು ಸೋಜಿಗದ ಸಮುದ್ರ. ಅಪಾರವಾದ ಗುಟ್ಟುಗಳನ್ನು ವೈವಿಧ್ಯತೆಯನ್ನು ಮಾನವ ನಿರ್ಮಿಸಲು ಅಸಾಧ್ಯವೆನಿಸಿದ ಪ್ರಕೃತಿ ರಮಣೀಯ ಸೌಂದರ್ಯವನ್ನು ಪ್ರಕೃತಿ ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಅದೇ ರೀತಿ ಪೃಕೃತಿಯ ಒಂದು ಭಾಗವೆನಿಸಿರುವ ಮುದ್ದಾದ ಹಕ್ಕಿಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಹೆಮ್ಮಿಂಗ್ ಬರ್ಡ್ ಒಂದು ಕ್ಷಣಕ್ಕೊಮ್ಮೆ ಬೇರೆ ಬೇರೆ ಬಣ್ಣಗಳನ್ನು ಬದಲಿಸುತ್ತಿದೆ.
ನಿಸರ್ಗವು ಆಕರ್ಷಕ ಜೀವಿಗಳಿಂದ ತುಂಬಿ ತುಳುಕುತ್ತಿದ್ದು, ಅವುಗಳಲ್ಲಿ ಪ್ರತಿಯೊಂದೂ ಜೀವಿಯೂ ಪ್ರತ್ಯೇಕ ವೈಶಿಷ್ಟ್ಯವನ್ನು ಹೊಂದಿದೆ. ಸಾಮಾನ್ಯವಾಗಿ ನಾವು ಬಣ್ಣ ಬಣ್ಣದ ಹಕ್ಕಿಗಳನ್ನು ಬಣ್ಣ ಬಣ್ಣದ ಚಿಟ್ಟೆಗಳನ್ನು, ವರ್ಣರಂಜಿತ ಬಣ್ಣಗಳನ್ನು ಹೊಂದಿರುವ ಕೀಟಗಳನ್ನು ನೋಡಿದ್ದೇವೆ. ಆದರೆ ಬಣ್ಣಗಳನ್ನು ಬದಲಾಯಿಸುವ ಹಕ್ಕಿಯನ್ನು ನೋಡಿರಲಿಲ್ಲ. ಸರೀಸೃಪವಾದ ಊಸರವಳ್ಳಿ ಬಣ್ಣ ಬದಲಾಯಿಸುತ್ತದೆಯಾದರೂ ಇಷ್ಟೊಂದು ವರ್ಣರಂಜಿತವಾಗಿ ಅದರ ಬಣ್ಣವಿಲ್ಲ. ಆದರೆ ಈ ಹೆಮ್ಮಿಂಗ್ ಬರ್ಡ್ ಹಕ್ಕಿ ಸಮಾರಂಭಕ್ಕೆ ಮನೆಯನ್ನು ಅಲಂಕರಿಸುವಾಗ ಮಾಡಿದ ಲೈಂಟಿಂಗ್ಸ್‌ಗಳು ಹೇಗೆ ಬಣ್ಣ ಬದಲಿಸುತ್ತವೋ ಅದೇ ರೀತಿ ಕ್ಷಣಕ್ಕೊಂದು ಬಣ್ಣ ಬದಲಿಸುವುದು ನೋಡುಗರ ಕಣ್ಣಿಗೆ ಮುದ್ದ ನೀಡುವುದರ ಜೊತೆಗೆ ಪ್ರಕೃತಿಯಲ್ಲಿ ಎಂಥೆಂತಾ ಕೌತುಕಗಳು ಇವೆ ಎಂಬುದನ್ನು ತೋರಿಸುತ್ತಿದೆ.
ವಂಡರ್ ಸೈನ್ಸ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ವಿವಿಧ ಬಣ್ಣಗಳನ್ನು ಬದಲಾಯಿಸುವ ಹೆಮ್ಮಿಂಗ್ ಬರ್ಡ್‌ನ ವಿಡಿಯೋ ಇದೆ. ಗಾತ್ರದಲ್ಲಿ ಹೆಬ್ಬೆರಳಿನಷ್ಟೇ ದೊಡ್ಡದಿರುವ ಈ ಪುಟ್ಟ ಹಕ್ಕಿ ತನ್ನ ತಲೆಯನ್ನು ತಿರುಗಿಸುತ್ತಿರುವಂತೆ ಬಣ್ಣಗಳು ಬದಲಾಗುತ್ತವೆ. ಒಮ್ಮೆ ಕೆಂಪು ಬಣ್ಣ ಬಂದರೆ ಮತ್ತೆ ಕೆಲವೊಮ್ಮೆ ಗುಲಾಬಿ ಬಣ್ಣ ಹಾಗೂ ಹಸಿರು ಮತ್ತು ಪಿಂಕ್ ಬಣ್ಣಗಳು ಕಾಣಿಸುತ್ತವೆ. ಹಕ್ಕಿ ಒಂದು ಕಡೆ ತಲೆ ತಿರುಗಿಸುವಂತೆ ಒಂದೊಂದು ದಿಕ್ಕಿಗೆ ಒಂದೊಂದು ಬಣ್ಣ ಬದಲಾಗುತ್ತಿರುತ್ತದೆ.
ಈ ಹಕ್ಕಿಯ ಬೆರಗುಗೊಳಿಸುವ ಬಣ್ಣಗಳು ಅವುಗಳ ಗರಿಗಳೊಳಗಿನ ನ್ಯಾನೊಸ್ಕೇಲ್ ರಚನೆಗಳಿಂದ ಬೆಳಕಿನ ಚದುರುವಿಕೆಯಿಂದ ಉಂಟಾಗುವ ವರ್ಣವೈವಿಧ್ಯವಾಗಿದೆ. ಈ ವಿಡಿಯೋ ನೋಡಿದ ಅನೇಕರು ಬೆರಗಾಗಿದ್ದು ಇದು ಊಸರವಳ್ಳಿಯ ಉನ್ನತೀಕರಿಸಿ ಸ್ವರೂಪ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಸೈನ್ಸ್ ಡೈಲಿ ಪ್ರಕಾರ, ಹಮ್ಮಿಂಗ್ ಬರ್ಡ್ಸ್ ಪ್ರಪಂಚದ ಎಲ್ಲಾ ಪ್ರಾಣಿಗಳಿಗಿಂತ ಸುಂದರ ಹಾಗೂ ಪ್ರಕಾಶ ಮಾನವಾದ ಬಣ್ಣಗಳನ್ನು ಹೊಂದಿದೆ. ಪಕ್ಷಿಗಳು ಹೊಂದಿಕೆಯಾಗುವ ರೀತಿಯಲ್ಲಿ ಅವುಗಳ ಗರಿಗಳು ಬೆಳಕನ್ನು ಪ್ರತಿಫಲಿಸುವುದರಿಂದ ನೆರಳಿನಲ್ಲಿ ಬದಲಾವಣೆಯು ಸಂಭವಿಸುತ್ತದೆ. ಪಕ್ಷಿಗಳು ತಮ್ಮ ಗರಿಗಳಲ್ಲಿ ಪ್ಯಾನ್‌ಕೇಕ್-ಆಕಾರದ ರಚನೆಗಳನ್ನು ಹೊಂದಿದ್ದು, ಅವುಗಳು ತಮ್ಮ ತಲೆಯನ್ನು ತಿರುಗಿಸಿದಾಗ ಮಳೆಬಿಲ್ಲಿನ ಬಣ್ಣಗಳನ್ನು ಪ್ರತಿಬಿಂಬಿಸಲು ಕಾರಣವಾಗುತ್ತವೆ.