ಈ ಬಾರಿಯ ಮಳೆ ಎಲ್ಲೆಡೆ ಅವಾಂತರ ಸೃಷ್ಟಿಸಿದೆ. ಅದರಲ್ಲೂ ಹಲವೆಡೆ ಕರಾವಳಿಯಲ್ಲಿ ಸಮುದ್ರದ ಅಲೆಗಳು ಸಮುದ್ರ ತೀರದ ಹಲವು ಮನೆಗಳನ್ನು ಸಮುದ್ರಕ್ಕೆ ಸೇರಿಸಿವೆ. ಸಮುದ್ರ ಕೊರೆತದ ಅನೇಕ ಭಯಾನಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಈ ಬಾರಿಯ ಮಳೆ ಎಲ್ಲೆಡೆ ಅವಾಂತರ ಸೃಷ್ಟಿಸಿದೆ. ಅದರಲ್ಲೂ ಹಲವೆಡೆ ಕರಾವಳಿಯಲ್ಲಿ ಸಮುದ್ರದ ಅಲೆಗಳು ಸಮುದ್ರ ತೀರದ ಹಲವು ಮನೆಗಳನ್ನು ಸಮುದ್ರಕ್ಕೆ ಸೇರಿಸಿವೆ. ಸಮುದ್ರ ಕೊರೆತದ ಅನೇಕ ಭಯಾನಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈಗ ಸಮುದ್ರ ತೀರದಲ್ಲಿದ್ದ ಮದುವೆ ಹಾಲ್‌ವೊಂದಕ್ಕೆ ಸಮುದ್ರದಲೆ ಅಪ್ಪಳಿಸಿದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫ್ಯಾನ್ಸಿಯಾಗಿ ಎಲ್ಲರಿಗಿಂತ ಡಿಫರೆಂಟ್ ಆಗಿ ವಿಭಿನ್ನವಾದ ಸ್ಥಳದಲ್ಲಿ ಮದುವೆಯಾಗಬೇಕು ಎನ್ನುವುದು ಬಹುತೇಕರ ಕನಸು. ಅದಕ್ಕಾಗಿ ಕೆಲವರು ಬೀಚ್‌ಗಳನ್ನು ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಬೀಚ್‌ನಲ್ಲಿ ಮದುವೆಯಾಗಬೇಕೆಂದು ಬಂದವರನ್ನು ಸಮುದ್ರದ ಅಲೆಗಳು ಬೆಚ್ಚಿ ಬೀಳಿಸಿವೆ. ಸಮುದ್ರದಲೆಗಳು ಮದುವೆ ಹಾಲ್‌ಗೆ ನುಗ್ಗಿ ಬಂದಿದ್ದು, ಮದುವೆಗೆ ಬಂದಿದ್ದ ಅತಿಥಿಗಳೆಲ್ಲಾ ಸಮುದ್ರದೆಲೆ ಹತ್ತಿರ ಬರುತ್ತಿದ್ದಂತೆ ದೂರ ಓಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಅಮೆರಿಕಾದ ಹವಾಯಿಯಲ್ಲಿ ನಡೆದ ಘಟನೆ ಇದಾಗಿದೆ. ಅಲೆಗಳು ಬಂದು ಅಪ್ಪಳಿಸಿದ ರಭಸಕ್ಕೆ ಮದುವೆಗೆ ಬಂದ ಅತಿಥಿಗಳ ಸತ್ಕಾರಕ್ಕೆ ಜೋಡಿಸಿಟ್ಟಿದ್ದ ಚೇರು ಬೆಂಚು ಮೇಜುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬೀಳುತ್ತವೆ. ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಮೂರು ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ ಆದರೆ ಮದುವೆಗೆ ತಂದಿದ್ದ ಕೇಕ್ ಹಾಳಾಯಿತು ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
