ಇಸ್ರೇಲ್ ಹಾಗೂ ಇರಾನ್ ಯುದ್ಧ 12 ದಿನ ಬಳಿಕ ಕದನ ವಿರಾಮ ಘೋಷಣೆಯಾಗಿದೆ. ಡೋನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ್ದಾರೆ. ಇದಕ್ಕೂ ಮೊದಲು ಕದನ ವಿರಾಮ ಮಾತುಕತೆಗೆ ಟ್ರಂಪ್ ಮೊದಲು ಹೇಳಿದ ಪದ ಗೆಟ್ ಮಿ ಬಿಬಿ, ಏನಿದು ಗೆಟ್ ಮಿ ಬಿಬಿ? 

ವಾಶಿಂಗ್ಟನ್ (ಜೂ.24) ಇರಾನ್ ಹಾಗೂ ಇಸ್ರೇಲ್ ನಡುವೆ ಶುರುವಾಗಿದ್ದ ಭೀಕರ ಯುದ್ಧ 12 ದಿನಗಳ ಬಳಿಕ ಅಂತ್ಯಗೊಂಡಿದೆ. ಉಭಯ ದೇಶಗಳು ಕದನ ವಿರಾಮಕ್ಕ ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದು ಸಂಪೂರ್ಣ ಕದನ ವಿರಾಮವಾಗಿದೆ. ಇರಾನ್ ಹಾಗೂ ಇಸ್ರೇಲ್ ಈ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಟೆಹ್ರಾನ್ ಸಮಯ ಪ್ರಕಾರ ಬೆಳಗಿನ 4 ಜಾವ 4 ಗಂಟೆಯಿಂದ ಯಾವುದೇ ದಾಳಿ- ಪ್ರತಿದಾಳಿ ನಡೆದಿಲ್ಲ. ವಿಶೇಷ ಅಂದರೆ ಈ ಕದನ ವಿರಾಮ ಮಾತುಕತೆಗೆ ಟ್ರಂಪ್ ಮೊದಲು ಬಳಿಸದ ಒಂದು ವಾಕ್ಯ ಎಂದರೆ ಅದು ಗೆಟ್ ಮಿ ಬಿಬಿ. ಈ ಪದದೊಂದಿಗೆ ಟ್ರಂಪ್ ಕದನ ವಿರಾಮ ಮಾತುಕತೆ ಆರಂಭಗೊಂಡು ಅಷ್ಟೇ ವೇಗದಲ್ಲಿ ಕದನ ವಿರಾಮ ಘೋಷಣೆಯಾಗಿದೆ ಎಂದು ವೈಟ್ ಹೌಸ್ ಅಧಿಕಾರಿಗಳು ಹೇಳಿದ್ದಾರೆ.

ಯುದ್ಧ ನಿಲ್ಲಿಸಲು ಉಭಯ ದೇಶಗಳೊಂದಿಗೆ ಅಮೆರಿಕ ಮಾತುಕತೆ ನಡೆಸಿದೆ. ಈ ಪೈಕಿ ಡೋನಾಲ್ಡ್ ಟ್ರಂಪ್, ಇಸ್ರೇಲ್ ಜೊತೆ ಮಾತುಕತೆ ನಡೆಸಿದ್ದರೆ, ವ್ಯಾನ್ಸ್, ಅಮೆರಿಕ ಕಾರ್ಯದರ್ಶಿ ಮಾರ್ಕೋ ರುಬಿಯೋ, ವಿಶೇಷ ವಕ್ತಾರ ಸ್ಟೀವ್ ವಿಟ್ಕೌಫ್ ಸೇರಿದಂತೆ ಅಧಿಕಾರಿಗಳು ಇರಾನ್ ಜೊತೆ ಮಾತುಕತೆ ನಡೆಸಿದ್ದಾರ ಎಂದು ವೈಟ್ ಹೌಸ್ ಹೇಳಿದೆ.

ಏನಿದು ಟ್ರಂಪ್ ಬಳಸಿದ ಗೆಟ್ ಮಿ ಬಿಬಿ ಪದ ?

ಇರಾನ್ ಅಮೆರಿಕಾದ ಮದ್ಯಪ್ರಾಚ್ಯ ದೇಶದಲ್ಲಿನ ಸೇನಾ ನೆಲೆ ಮೇಲೆ ಮಿಸೈಲ್ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಯುದ್ಧ ತೀವ್ರತೆ ಅರಿತ ಡೋನಾಲ್ಡ್ ಟ್ರಂಪ್, ಅಮೆರಿಕ ಅಧಿಕಾರಿಗಳ ಬಳಿ ಮಾತನಾಡಿದ್ದಾರೆ. ಗೆಟ್ ಮಿ ಬಿಬಿ, ನಾವು ಶಾಂತಿ ನೆಲೆಸಲು ಮಹತ್ವದ ಹೆಜ್ಜೆ ಇಡುತ್ತಿದ್ದೇವೆ ಎಂದಿದ್ದಾರೆ. ಇದರಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜೊತೆ ಮಾತುಕತೆ ಶುರುವಾಗಿದೆ. ಈ ಪೈಕಿ ಟ್ರಂಪ್ ಬಳಸಿದ ಗೆಟ್ ಮಿ ಬಿಬಿ ಪದಕ್ಕೆ ವಿಶೇಷ ಅರ್ಥವಿದೆ. ಬೆಂಜಮಿನ್ ನೇತನ್ಯಾಹು ಅವರ ನಿಕ್ ನೇಮ್ ಬಿಬಿ. ಬೆಂಜಮಿನ್ ನೇತನ್ಯಾಹು ಹೆಸರಿನಿಂದ ಬಾಲ್ಯದಲ್ಲಿ ಇವರನ್ನು ಬಿಬಿ ಎಂದು ಶಾರ್ಟ ಆಗಿ ಕರೆಯುತ್ತಿದ್ದರು. ಇಸ್ರೇಲ್‌ನ ಮಾಧ್ಯಮಗಳು ಹಲವು ಬಾರಿ ಬಿಬಿ ಎಂದು ಉಲ್ಲೇಖಿಸಿದೆ. ಈ ತಕ್ಷಣವೇ ಬೆಂಜಮಿನ್ ನೇತನ್ಯಾಹುು ಅವರನ್ನು ಸಂಪರ್ಕಿಸಿ ಎಂದು ಟ್ರಂಪ್ ಸೂಚಿಸಿದ್ದರು. ಇದಕ್ಕೆ ಟ್ರಂಪ್ ಗೆಟ್ ಮಿ ಬಿಬಿ ಎಂದು ಸೂಚಿಸಿದ್ದಾರೆ. ಇದರಂತೆ ಕರೆಗಳ ಮೂಲಕ ಮಾತುಕತೆ ನಡೆಸಲಾಗಿತ್ತು ಎಂದು ವೈಟ್ ಹೌಸ್ ಹೇಳಿದೆ.

ಅಮೆರಿಕ ಮಾತುಕತೆ ಬಳಿಕ ದಾಳಿ ನಿಲ್ಲಿಸಿದ ಇಸ್ರೇಲ್

ಡೋನಾಲ್ಡ್ ಟ್ರಂಪ್ ಸೂಚನೆಯಿಂತೆ ಬೆಂಜಮಿನ್ ನೇತನ್ಯಾಹು ಜೊತೆ ಅಮೆರಿಕ ಮಾತುಕತೆ ನಡೆಸಿದೆ. ಕದನ ವಿರಾಮಕ್ಕೆ ಸೂಚಿಸಿದೆ. ಇದರಂತೆ ಇಸ್ರೇಲ್ ಕದಮನ ವಿರಾಮ ಒಪ್ಪಿಕೊಂಡಿದೆ. ಬಳಿಕ ಅಮರಿಕ ಅಧಿಕಾರಿಗಳು ಇರಾನ್ ಜೊತೆ ಮಾತನಾಡಿದ್ದಾರೆ ಎಂದು ವೈಟ್ ಹೇಳಿದೆ.

ಕದನ ವಿರಾಮ ಅಲ್ಲ, ಇಸ್ರೇಲ್ ನಿಲ್ಲಿಸಿದ ಕಾರಣ ನಮ್ಮಿಂದ ಪ್ರತಿದಾಳಿ ಇಲ್ಲ

ಇಸ್ರೇಲ್ ದಾಳಿ ನಿಲ್ಲಿಸಿದ ಕಾರಣ ನಾವು ಪ್ರತಿ ದಾಳಿ ನಿಲ್ಲಿಸಿದ್ದೇವೆ. ಇದು ಕದನ ವಿರಾಮ ಅಲ್ಲ. ನಾವು ಶರಣಾಗುವ ಮಾತಿಲ್ಲ. ನಮ್ಮ ಕೊನೆಯ ಉಸಿರಿನವರೆಗೆ ಹೋರಾಡುತ್ತೇವೆ ಎಂದು ಇರಾನ್ ಸ್ಪಷ್ಟವಾಗಿ ಹೇಳಿದೆ. ಈ ಯುದ್ಧವನ್ನು ಇಸ್ರೇಲ್ ಆರಂಭಿಸಿದೆ. ಇಸ್ರೇಲ್ ನಿಲ್ಲಿಸಿದೆ. ನಮ್ಮ ಮೇಲೆ ನಡೆಸಿದ ದಾಳಿಗೆ ಪ್ರತಿದಾಳಿ ಮಾಡಿದ್ದೇವೆ. ನಾವಾಗಿ ಯುದ್ಧ ಆರಂಭಿಸಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ನಮ್ಮ ಮೇಲೆ ಯಾವುದೇ ಶತ್ರು ದಾಳಿ ನಡೆಸಿದರೆ ಪ್ರತಿ ದಾಳಿ ನಡೆಸುತ್ತೇವೆ ಎಂದಿದೆ.