ನ್ಯೂಯಾರ್ಕ್(ಮೇ.28): ಕೊರೋನಾ ವೈರಸ್‌ ದೇಹದ ಕೋಶಗಳಿಗೆ ಪ್ರವೇಶಿಸುತ್ತದೆ ಎಂಬುದನ್ನು ಪತ್ತೆಹಚ್ಚುವಲ್ಲಿ ಅಮೆರಿಕದ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ಕೊರೋನಾ ವೈರಸ್‌ ಹೇಗೆ ವ್ಯಕ್ತಿಯ ದೇಹವನ್ನು ಹೊಕ್ಕಿ ಪ್ರತಿರೋಧಕ ವ್ಯವಸ್ಥೆಯಿಂದ ಹೇಗೆ ರಹಸ್ಯವಾಗಿ ತಪ್ಪಿಸಿಕೊಳ್ಳುತ್ತದೆ ಎಂಬುದು ಇಕಾಹ್ನ್‌ ಸ್ಕೂಲ್‌ ಆಫ್‌ ಮೆಡಿಸಿನ್‌ನ ಸಂಶೋಧಕರ ತಂಡ ನಡೆಸಿದ ಅಧ್ಯಯನದಿಂದ ಎಂಬುದು ಪತ್ತೆಯಾಗಿದೆ. ಈ ಸಂಶೋಧನೆ ಕೊರೋನಾ ವೈರಸ್‌ಗೆ ಲಸಿಕೆ ಕಂಡುಹಿಡಿಯುವಲ್ಲಿ ನೆರವಾಗಬಲ್ಲದು ಎಂದೇ ಭಾವಿಸಲಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕೊರೋನಾ ತಡೆಯಲು ಆಯುರ್ವೇದ ಔಷಧಿ

ಕೊರೋನಾ ವೈರಸ್‌ ದೇಹದ ಪ್ರತಿರೋಧ ವ್ಯವಸ್ಥೆಯಿಂದ ತಪ್ಪಿಕೊಂಡು ಶ್ವಾಸಕೋಶ ಕೋಶಗಳನ್ನು ಹೇಗೆ ತಲುಪಬಲ್ಲದು ಎಂಬುದು ಇದುವರೆಗೆ ವಿಜ್ಞಾನಿಗಳಿಗೆ ರಹಸ್ಯವಾಗಿಯೇ ಉಳಿದಿತ್ತು. ವೈರಾಣುವಿನ ಮೇಲಿನ ಪ್ರೋಟೀನ್‌ ಕಣಗಳ ಮೂಲಕ ವೈರಸ್‌ಗಳು ದೇಹದ ಕೋಶಗಳ ಒಳಕ್ಕೆ ಸೇರಿಕೊಳ್ಳುತ್ತಿವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.