Asianet Suvarna News Asianet Suvarna News

ಬೆತ್ತಲೆ ಮೃತದೇಹ, ಸುಟ್ಟ ಮುಖ, ಹಮಾಸ್ ಉಗ್ರ ದಾಳಿಯಲ್ಲಿ ನಡೆದಿತ್ತು ಭೀಕರ ಅತ್ಯಾಚಾರ!

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ನಡೆಸಿದ ಭೀಕರ ದಾಳಿಯ ನೋವಿನಿಂದ ಇಸ್ರೇಲ್ ಇನ್ನೂ ಚೇತರಿಸಿಕೊಂಡಿಲ್ಲ. ಈ ದಾಳಿಯ ಕುರಿತು ಸತತ 2 ತಿಂಗಳು ತನಿಖೆ ನಡೆಸಿ ವರದಿ ತಯಾರಿಸಲಾಗಿದೆ. ಈ ವರದಿ ಹಲವ ಘನಘೋರ ಸತ್ಯಗಳನ್ನು ಬಹಿರಂಗಪಡಿಸಿದೆ. ಹಮಾಸ್ ಸಿಕ್ಕ ಸಿಕ್ಕವರ ಮೇಲೆ ಗುಂಡಿನ ದಾಳಿ ಮಾತ್ರವಲ್ಲ, ಹೆಣ್ಣು ಮಕ್ಕಳು, ಯುವತಿರು, ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಭೀಕರತೆಯನ್ನು ಬಹಿರಂಗಪಡಿಸಿದೆ.
 

Horrific sexual violence against women come to light during Hamas terror attack on Israel ckm
Author
First Published Dec 30, 2023, 3:25 PM IST

ಟೆಲ್ ಅವೀವ್(ಡಿ.30) ಇಸ್ರೇಲ್ ಹಾಗೂ ಪ್ಯಾಲೆಸ್ತಿನ್ ನಡುವಿನ ಸಂಘರ್ಷ ಹಲವು ಯುದ್ಧ, ದಾಳಿಗೆ ಕಾರಣವಾಗಿದೆ. ಆದರೆ ಇಸ್ರೇಲ್ ನಾಗರೀಕರ ಮೇಲೆ ನಡೆದ ಅತೀ ದೊಡ್ಡ ದಾಳಿಗಳ ಪೈಕಿ ಅಕ್ಟೋಬರ್ 7 ರಂದು ಹಮಾಸ್ ಉಗ್ರರು ನಡೆಸಿದ ದಾಳಿಯೂ ಸೇರಿಕೊಂಡಿದೆ. ಜಲ, ವಾಯು ಹಾಗೂ ಭೂಮಾರ್ಗದ ಮೂಲಕ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಸಿಕ್ಕ ಸಿಕ್ಕ ಇಸ್ರೇಲ್ ನಾಗರೀಕರ ಮೇಲೆ  ಉಗ್ರರು ಗುಂಡಿನ ಸುರಿಮಳೆಗೈದಿದ್ದರು. ಮುದ್ದ ಕಂದಮ್ಮಗಳನ್ನೂ ಬಿಡದೆ ಭೀಕರ ಹತ್ಯೆ ನಡೆಸಿದ್ದರು. ಈ ದಾಳಿ ಕುರಿತು ನ್ಯೂಯಾರ್ಕ್ ಟೈಮ್ಸ್ ಕಳೆದ 2 ತಿಂಗಳ ತನಿಖೆ ನಡೆಸಿ ವರದಿ ತಯಾರಿಸಿದೆ. ಈ ವರದಿ ಬೆಚ್ಚಿ ಬೀಳಿಸುವ ಕೆಲ ಕಹಿ ಸತ್ಯಗಳನ್ನು ಬಿಚ್ಚಿಟ್ಟಿದೆ. ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಗುಂಡಿನ ದಾಳಿ,ಹತ್ಯೆ ಮಾತ್ರ ನಡೆಸಿಲ್ಲ. ಹೆಣ್ಣುಮಕ್ಕಳು. ಯುವತಿಯರು, ಮಹಿಳೆಯರ ಮೇಲೆ ಭೀಕರ ಅತ್ಯಾಚಾರ ನಡೆಸಿದೆ ಅನ್ನೋ ಮಾಹಿತಿಯನ್ನು ವರದಿ ಬಹಿರಂಗಪಡಿಸಿದೆ.

ಮಧ್ಯ ಇಸ್ರೇಲ್‌ನ ಗಲ್ ಅಬ್ದುಶ್ ಅನ್ನೋ ಇಸ್ರೇಲಿ ಮಹಿಳೆ ಕೂಡ ಇದೇ ಹಮಾಸ್ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ ಗಲ್ ಅಬ್ದುಶ್ ಮೃತದೇಹ ದಾರಿಯಲ್ಲಿ ಪತ್ತೆಯಾಗಿತ್ತು. ದಾಳಿ ಬಳಿಕ ಮತ್ತೊರ್ವ ಇಸ್ರೇಲಿ ಮಹಿಳೆ ತಮ್ಮ ಆಪ್ತರನ್ನು ಹುಡುಕುತ್ತಾ ಸಾಮೂಹಿಕ ಹತ್ಯೆ ನಡೆದ ಸ್ಥಳ ಹಾಗೂ ಸುತ್ತ ಮುತ್ತ ಹುಡುಕಿದ್ದರು. ಈ ವೇಳೆ ಗಲ್ ಅಬ್ದುಶ್ ಬೆತ್ತಲೇ ಮೃತದೇಹ ಪತ್ತೆಯಾಗಿತ್ತು. ಆದರೆ ಮುಖವನ್ನು ಸುಡಲಾಗಿತ್ತು. ಈ ಮೃತದೇಹ ಪೋಸ್ಟ್ ಮಾರ್ಟಂ ಮಾಡಲಾಗಿದೆ. ಇಷ್ಟೇ ಅಲ್ಲ ಪಕ್ಕದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದೆ.

 

ಯುದ್ಧ ಗೆಲ್ಲೋವರೆಗೆ ನಾವು ಬಿಡಲ್ಲ: ಶತ್ರು ನೆಲ ಗಾಜಾದಲ್ಲಿ ಘಂಟಾಘೋಷವಾಗಿ ಸಾರಿದ ಇಸ್ರೇಲ್‌ ಪ್ರಧಾನಿ

ಗಲ್ ಅಬ್ದುಶ್ ಮೇಲೆ ಐದಕ್ಕಿಂತ ಹೆಚ್ಚಿನ ಹಮಾಸ್ ಉಗ್ರರು ಭೀಕರವಾಗಿ ಅತ್ಯಾಚಾರ ನಡೆಸಿದ್ದಾರೆ. ಬೆಂಕಿಯಿಂದ ಜೀವಂತವಾಗಿ ಮುಖ ಸುಟ್ಟಿದ್ದಾರೆ. ಬಳಿಕ ಗುಂಡಿಕ್ಕಿ ಸಾಯಿಸಿದ್ದಾರೆ. ಸಂಗೀತ ಪಾರ್ಟಿ ಬಳಿ ನಡೆದ ಸಾಮೂಹಿತ ಹತ್ಯೆಯಲ್ಲಿ ಕೆಲವೇ ಕೆಲವು ಮಂದಿ ಬದುಕುಳಿದಿದ್ದಾರೆ. ಇವರು ಕೂಡ ಇದೇ ಭೀಕರತೆ ಬಿಚ್ಚಿಟ್ಟಿದ್ದಾರೆ. ಹಮಾಸ್ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ 150 ಇಸ್ರೇಲಿಗರು ಭೀಕರತೆ ವಿವರಿಸಿದ್ದಾರೆ.

ಗಲ್ ಅಬ್ದುಶ್ ಮೃತದೇಹದ ರೀತಿಯಲ್ಲೇ 30ಕ್ಕೂ ಹೆಚ್ಚಿನ ಮಹಿಳೆಯರು, ಯವತಿಯರು ಹಾಗೂ ಹೆಣ್ಣುಮಕ್ಕಳ ಮಚೃದೇಹ ಪತ್ತೆಯಾಗಿದೆ. ಕೆಲ ಮಹಿಳೆಯರ ಗುಪ್ತಾಂಗಕ್ಕೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಹುತೇಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಿರುವುದನ್ನು ಪೊಲೀಸ್ ತನಿಖೆ ಬಹಿರಂಗಪಡಿಸಿದೆ. ಇಬ್ಬರು ಇಸ್ರೇಲ್ ಮಹಿಳಾ ಯೋಧರನ್ನೂ ಕೈ ಕಾಲು ಕಟ್ಟಿ ಹಮಾಸ್ ಉಗ್ರರು ಅತ್ಯಾಚಾರ ಮಾಡಿದ್ದರು. ಬಳಿಕ ಗುಪ್ತಾಂಗಕ್ಕೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಕನಿಷ್ಠ ವಿವಿಧ 7 ಭಾಗದಲ್ಲಿ ಹಮಾಸ್ ಉಗ್ರರು ಇಸ್ರೇಲ್ ಮಹಿಳೆಯರು, ಯುವತಿಯರು, ಹೆಣ್ಣುಮಕ್ಕಳು ಮೇಲೆ ಭೀಕರ ಅತ್ಯಾಚಾರ ನಡೆದಿದೆ. ಹಮಾಸ್ ನಡೆಸಿದ ದಾಳಿ ಸಂದರ್ಭದಲ್ಲಿ ಕಲೆ ಹಾಕಿರುವ ಸಿಸಿಟಿವಿ ವಿಡಿಯೋಗಳು, ಹಮಾಸ್ ಉಗ್ರರೇ ಪೋಸ್ಟ್ ಮಾಡಿರುವ ವಿಡಿಯೋಗಳು ಹಾಗೂ ಮೃತದೇಹದ ಪೋಸ್ಟ್ ಮಾರ್ಟಂ ರಿಪೋರ್ಟ್, ಪ್ರತ್ಯಕ್ಷ ದರ್ಶಿಗಳ ಹೇಳಿಕೆ ಸೇರಿದಂತೆ ಹಲವು ಮಾಹಿತಿಗಳನ್ನು ಆಧರಿಸಿ ನ್ಯೂಯಾರ್ಕ್ ಟೈಮ್ಸ್ ತನಿಖಾ ವರದಿ ನೀಡಿದೆ.

 

ಆಸ್ಪತ್ರೆ, ಶಾಲೆಗಳೇ ಸುರಂಗಗಳ ಮಹಾ ಹಬ್..! ಪಾತಾಳಲೋಕ ಭೇದಿಸುವ ಶಪಥ ಮಾಡಿದ ಇಸ್ರೇಲ್ ಸೇನೆ..!
 

Follow Us:
Download App:
  • android
  • ios