ದೀಪಾವಳಿ ಆಚರಣೆಯಲ್ಲಿ ಮಾಂಸ, ಬಿಯರ್, ಹಿಂದೂಗಳ ಆಕ್ರೋಶಕ್ಕೆ ತುತ್ತಾದ ಯುಕೆ ಪ್ರಧಾನಿ!
ಯುಕೆ ಪ್ರಧಾನಿ ನಿವಾಸದಲ್ಲಿ ಆಚರಿಸಿದ ದೀಪಾವಳಿ ಹಬ್ಬ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಧಾನಿ ಕೈರ್ ಸ್ಟಾರ್ಮರ್ ದೀಪಾವಳಿ ಹಬ್ಬದ ಊಟದಲ್ಲಿ ಮಾಂಸ, ಬಿಯರ್ ನೀಡಲಾಗಿದೆ.
ಲಂಡನ್(ನ.10) ದೀಪಾವಳಿ ಹಬ್ಬವನ್ನು ಭಾರತದಲ್ಲಿ ಅದ್ಧೂರಿಯಾಗಿ ಆಚರಿಸಲಾಗಿದೆ. ಇನ್ನು ಹಲವು ದೇಶಗಳಲ್ಲಿರುವ ಅನಿವಾಸಿ ಭಾರತೀಯರು, ಅಲ್ಲಿನ ಸರ್ಕಾರ ದೀಪಾವಳಿ ಹಬ್ಬ ಆಚರಿಸಿದೆ. ಈ ಪೈಕಿ ಯುಕೆ ಪ್ರಧಾನಿ ಕೈರ್ ಸ್ಟಾರ್ಮರ್ ಅದ್ಧೂರಿಯಾಗಿ ದೀಪಾವಳಿ ಆಚರಿಸಿದ್ದಾರೆ. ಪ್ರಧಾನಿ ನಿವಾಸದಲ್ಲಿ ದೀಪ ಬೆಳಗಿ ಹಬ್ಬ ಆಚರಿಸಿದ್ದಾರೆ. ಆದರೆ ಕೈರ್ ಸ್ಟಾರ್ಮರ್ ಆಚರಿಸಿದ ದೀಪಾವಳಿ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಕೈರ್ ಸ್ಟಾರ್ಮರ್ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡ ಹಿಂದೂಗಳು ಅಸಮಾಧಾನ ಹೊರಹಾಕಿದ್ದಾರೆ
ಲಂಡನ್ 10 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಯುಕೆ ಪ್ರಧಾನಿ ನಿವಾಸದಲ್ಲಿ ಅದ್ಧೂರಿಯಾಗಿ ದೀಪಾವಳಿ ಹಬ್ಬ ಆಚರಿಸಲಾಗಿದೆ. ಯುಕೆ ಪ್ರತಿ ಸರ್ಕಾರ ದೀಪಾವಳಿ ಹಬ್ಬ ಆಚರಿಸುತ್ತದೆ. ಕಳೆದ ವರ್ಷ ಭಾರತೀಯ ಮೂಲದ ಹಿಂದೂ ರಿಷಿ ಸುನಕ್ ಪ್ರಧಾನಿಯಾಗಿದ್ದ ವೇಳೆ ಅದ್ಧೂರಿಯಾಗಿ ಹಾಗೂ ಭಾರತೀಯ ಸಂಪ್ರದಾಯದಂತೆ ಹಬ್ಬ ಆಚರಿಸಲಾಗಿತ್ತು. ಆದರೆ ಈ ಬಾರಿ ಹಲವು ಹಿಂದೂಗಳು ಈ ದೀಪಾವಳಿ ಹಬ್ಬದಲ್ಲಿ ಪಾಲ್ಗೊಂಡು ಆಕ್ರೋಶ ಹೊರಹಾಕಿದ್ದಾರೆ.
ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಬ್ರಿಟನ್ ಸಂಸದೆ
ಯುಕೆ ಸರ್ಕಾರದ ಹಲವು ಸಚಿವರು ಸೇರಿದಂತೆ ಗಣ್ಯರು ಈ ದೀಪಾವಳಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಪ್ರಾರ್ಥನೆ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಎಲ್ಲೆಡೆ ದೀಪ ಬೆಳಗಲಾಗಿತ್ತು. ಸಾಂಸ್ಕೃತಿ ಕೂಚುಪುಡಿ ನೃತ್ಯ ಸೇರಿದಂತೆ ಹಲವು ನೃತ್ಯ ಪ್ರಕಾರಗಳು ಮೇಳೈಸಿತ್ತು. ಅಲ್ಲೀವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ಹಬ್ಬ ಆಚರಿಸಿದ ಬಳಿಕ ದೀಪಾವಳಿ ಹಬ್ಬದೂಟ ಆಯೋಜಿಸಲಾಗಿತ್ತು. ಆದರೆ ಮೆನು ನೋಡಿದ ಹಿಂದೂಗಳು ಬೆಚ್ಚಿ ಬಿದ್ದಿದ್ದಾರೆ. ಮೇಕೆ ಮಾಂಸದ ಕಬಾಬ್, ಬಿಯರ್, ವೈನ್ ಸೇರಿದಂತೆ ಮದ್ಯಗಳು ದೀಪಾವಳಿ ಹಬ್ಬದೂಟದಲ್ಲಿ ತಯಾರಿಸಲಾಗಿತ್ತು. ಹಿಂದೂಗಳ ಪವಿತ್ರ ದೀಪಾವಳಿ ಹಬ್ಬವನ್ನು ಹಾಳು ಮಾಡಲಾಗಿದೆ. ಪಾವಿತ್ರ್ಯತೆ ಹಾಳಾಗಿದೆ. ಸಂಪ್ರದಾಯ ಮುರಿಯಲಾಗಿದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.
ಯುಕೆ ಪ್ರಧಾನಿ ನಿವಾಸದಲ್ಲಿನ ದೀಪಾವಳಿ ಪೂಜೆ ಹಾಗೂ ಇತರ ಸಂಪ್ರದಾಯಗಳ ಆಚರಣೆ ನಡೆಸಿಕೊಟ್ಟ ಪಂಡಿತ್ ಸತೀಶ್ ಕೆ ಶರ್ಮಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಹಿಂದೂಗಳ ಪವಿತ್ರ ಹಬ್ಬ. ಇಷ್ಟೇ ಅಲ್ಲ ಈ ರೀತಿಯ ವಿಚಾರಗಳಲ್ಲಿ ಸೂಕ್ಷತೆ ಅರಿಯುವಲ್ಲಿ ಬ್ರಿಟನ್ ಸರ್ಕಾರ ವಿಫಲವಾಗಿದೆ. ಕಳೆದ ವರ್ಷ ರಿಷಿ ಸುನಕ್ ಪ್ರಧಾನಿಯಾಗಿದ್ದ ವೇಳೆ ಉತ್ತವವಾಗಿ ಹಿಂದೂ ಸಂಪ್ರದಾಯದಂತೆ ದೀಪಾವಳಿ ಆಚರಿಸಲಾಗಿತ್ತು ಎಂದು ಸತೀಶ್ ಕೆ ಶರ್ಮಾ ಹೇಳಿದ್ದಾರೆ. ಕಳೆದ 14 ವರ್ಷದಲ್ಲಿ ಬ್ರಿಟನ್ ಪ್ರಧಾನಿ ನಿವಾಸದಲ್ಲಿ ದೀಪಾವಳಿ ಆಚರಣೆ ವೇಳೆ ಮಾಂಸ, ಮದ್ಯಕ್ಕೆ ಅವಕಾಶ ಇರಲಿಲ್ಲ. ಆದರೆ ಈ ಬಾರಿ ಸಂಪ್ರದಾಯ ಮುರಿದಿದ್ದಾರೆ ಎಂದು ಸತೀಶ್ ಕೆ ಶರ್ಮಾ ಹೇಳಿದ್ದಾರೆ.
ಆಕ್ರೋಶ ಹೆಚ್ಚಾಗುತ್ತಿದ್ದಂತೆ ಬ್ರಿಟನ್ ಪ್ರಧಾನಿ ಕೈರ್ ಸ್ಟಾರ್ಮರ್ ಕ್ಷಮೆ ಕೇಳಿದ್ದಾರೆ. ಆಕಸ್ಮಿಕವಾಗಿ ಸಂಭವಿಸಿದೆ. ಇದು ಉದ್ದೇಶಪೂರ್ವಕವಲ್ಲ. ಅಧಿಕಾರಿಗಳ ತಪ್ಪಿನಿಂದ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಬ್ರಿಟನ್ ಪ್ರಧಾನಿ ಕ್ಷಮೆ ಕೇಳಿದರೂ ಆಕ್ರೋಶ ತಣ್ಣಗಾಗಿಲ್ಲ. ಬ್ರಿಟನ್ ಪ್ರಧಾನಿ ನಿವಾಸದ ಅಧಿಕಾರಿಗಳು ನಿರ್ಲಕ್ಷ್ಯ ಹಾಗೂ ಅಸಡ್ಡೆ ತೋರಿದ್ದಾರೆ. ಪವಿತ್ರ ಹಿಂದೂ ಹಬ್ಬ ಆಚರಿಸುವಾಗ ಇಷ್ಟು ವರ್ಷ ಇಲ್ಲದ ಸಂಪ್ರದಾಯ ಈ ಬಾರಿ ಬಂದಿದ್ದು ಹೇಗೆ? ಎಂದು ಪ್ರಶ್ನಿಸಿದ್ದಾರೆ. ಈ ರೀತಿ ಹಬ್ಬಗಳ ಪಾವಿತ್ರ್ಯತೆ ಹಾಳುವು ಮಾಡುವುದಾದರೆ ಆಚರಿಸುವು ಅಗತ್ಯವಿಲ್ಲ. ಕಾಟಾಚಾರಕ್ಕೆ, ಮತಕ್ಕಾಗಿ, ಒಲೈಕೆಗಾಗಿ ಹಬ್ಬ ಆಚರಿಸಬೇಡಿ ಎಂದು ಹಿಂದೂಗಳು ಸಲಹೆ ನೀಡಿದ್ದಾರೆ. ಈ ಘಟನೆ ಯುಕೆ ಹಿಂದೂ ಸಮುದಾಯಕ್ಕೆ ಮಾತ್ರವಲ್ಲ, ಭಾರತೀಯ ಹಿಂದೂಗಳ ಆಕ್ರೋಶವನ್ನೂ ಹೆಚ್ಚಿಸಿದೆ, ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬ್ರಿಟನ್ ಸಂಪುಟದಲ್ಲಿ ಭಾರತ ಮೂಲದ ಯುವತಿಗೆ ಸ್ಥಾನ; ಮಹತ್ವದ ಜವಾಬ್ದಾರಿ ನೀಡಿದ ಕೀರ್ ಸ್ಟಾರ್ಮರ್