ಢಾಖಾ(ಮಾ.21): ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಇಸ್ಲಾಮಿಕ್‌ ಗ್ರೂಪ್‌ನ ನೂರಾರು ಹಿಂಬಾಲಕರು ಹಿಂದೂ ಗ್ರಾಮದ 70-80 ಮನೆ ಮೇಲೆ ದಾಳಿ ನಡೆಸಿರುವ ಆಘಾತಕಾರಿ ಘಟನೆ ಇಲ್ಲಿನ ಈಶಾನ್ಯ ಸಿಲ್ಹೆತ್‌ ಪ್ರದೇಶದಲ್ಲಿ ಬುಧವಾರ ನಡೆದಿದೆ.

ಹಿಫಾಜತ್‌-ಇ-ಇಸ್ಲಾಂ ಸಂಘಟನೆಯ ಸಮಾವೇಶದಲ್ಲಿ ಭಾಗಿಯಾಗಿದ್ದ ನಾಯಕ ಮಮುನುಲ್‌ ಹಕಿ ಭಾಷಣವನ್ನು ಟೀಕಿಸಿ ಹಿಂದು ಯುವಕನೊಬ್ಬ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದ. ಇದರ ವಿರುದ್ಧ ಹಕಿ ಹಿಂಬಾಲಕರು ಹಿಂದು ಕುಟುಂಬಗಳ ಮನೆಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಘಟನೆ ಬೆನ್ನಲ್ಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಈ ಸಂಬಂಧ ಈಗಾಗಲೇ 22 ಶಂಕಿತರನ್ನು ಬಂಧಿಸಲಾಗಿದೆ.