ಭಾರತವು ಭ್ರಷ್ಟಾಚಾರದ ಅಂಕಿ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದ್ದು ಒಟ್ಟು 180 ದೇಶಗಳಲ್ಲಿ ಎಷ್ಟನೇ ಸ್ಥಾನ ಪಡೆದಿದೆ..?
ನವದೆಹಲಿ (ಜ.29): ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ 2020ನೇ ಸಾಲಿನ ಭ್ರಷ್ಟಾಚಾರ ಸೂಚ್ಯಂಕ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತ 180 ದೇಶಗಳ ಪೈಕಿ 86ನೇ ಸ್ಥಾನ ಪಡೆದಿದೆ.
ಕಳೆದ ವರ್ಷ 80ನೇ ಸ್ಥಾನದಲ್ಲಿದ್ದ ಭಾರತದಲ್ಲಿ, ಈ ವರ್ಷ ಭ್ರಷ್ಟಾಚಾರ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ, ಸೂಚ್ಯಂಕದಲ್ಲಿ 6 ಸ್ಥಾನ ಕುಸಿದು 86ಕ್ಕೆ ಇಳಿದಿದೆ. ಸಾರ್ವಜನಿಕ ವಲಯದಲ್ಲಿನ ಭ್ರಷ್ಟಾಚಾರ ಪ್ರಮಾಣ ಲೆಕ್ಕಹಾಕಿ ಈ ಸೂಚ್ಯಂಕ ಬಿಡುಗಡೆ ಮಾಡಲಾಗುತ್ತದೆ.
ಡಿಕೆ ಸಾಮ್ರಾಜ್ಯದಲ್ಲಿ ಅಧಿಕಾರಿಗಳ ಭಾರಿ ಭ್ರಷ್ಟಾಚಾರ : ಪರ್ಸಂಟೇಜ್ ಲೆಕ್ಕದಲ್ಲಿ ಹಣ ವಸೂಲಿ ...
ಇದರಲ್ಲಿ 1ನೇ ಸ್ಥಾನ ಪಡೆದ ದೇಶಗಳಲ್ಲಿ ಭ್ರಷ್ಟಾಚಾರ ಅತಿಕಡಿಮೆ ಎಂದರ್ಥ. 180ನೇ ಸ್ಥಾನ ಪಡೆದ ದೇಶದಲ್ಲಿ ಅತಿ ಹೆಚ್ಚಿದೆ ಎಂದರ್ಥ. ಭಾರತ 40 ಅಂಕದೊಂದಿಗೆ 86ನೇ ಸ್ಥಾನ ಪಡೆದಿದೆ.
