ಇಸ್ರೇಲಿ ಕುಟುಂಬವನ್ನೇ ಒತ್ತೆಯಾಳಾಗಿಟ್ಟು ಫೇಸ್‌ಬುಕ್ ಲೈವ್ ಬಂದ ಹಮಾಸ್ ಉಗ್ರರು!

ಹಮಾಸ್ ಉಗ್ರರು ನಡೆಸಿದ ನರಮೇಧದ ವಿಡಿಯೋಗಳು ಬೆಚ್ಚಿ ಬೀಳಿಸುವಂತಿದೆ. ಈಗಲೂ ಹಮಾಸ್ ಉಗ್ರರ ಕೈಯಲ್ಲಿ 500ಕ್ಕೂ ಹೆಚ್ಚು ನಾಗರೀಕರು ಒತ್ತೆಯಾಳಾಗಿದ್ದಾರೆ. ಇದೀಗ ಇಸ್ರೇಲ್ ಮನೆಯೊಂದಕ್ಕೆ ನುಗ್ಗಿರುವ ಉಗ್ರರು ಸಂಪೂರ್ಣ ಕುಟುಂಬವನ್ನೇ ಒತ್ತೆಯಾಳಗಿಟ್ಟುಕೊಂಡಿದೆ. ಕೆಲವರ ಕಾಲಿಗೆ ಗುಂಡು ಹಾರಿಸಿದೆ. ಬಳಿಕ ಇಸ್ರೇಲ್ ಕುಟುಂಬ ಸದಸ್ಯರ ಫೇಸ್‌ಬುಕ್ ಮೂಲಕ ಹಮಾಸ್ ಉಗ್ರರು ಲೈಫ್ ಬಂದಿದ್ದಾರೆ.

Heart breaking scene Hamas Terrorist Facebook live reveal Israeli hostages horrific condition ckm

ಜೆರುಸಲೆಂ(ಅ.11) ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿಯ ಭೀಕರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಸ್ರೇಲ್ ಒಳನುಗ್ಗಿರುವ ಹಮಾಸ್ ಉಗ್ರರೂ ಈಗಲೂ ಕೆಲ ಇಸ್ರೇಲ್ ಕುಟುಂಬಗಳ ಮನೆಯಲ್ಲಿ ಉಳಿದುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ ಅನ್ನೋ ಮಾಹಿತಿಗಳು ಬಹಿರಂಗವಾಗಿದೆ.ಇದಕ್ಕೆ ಹಮಾಸ್ ಉಗ್ರರು ನಡೆಸಿದ ಫೇಸ್‌ಬುುಕ್ ಲೈವ್ ಸಾಕ್ಷಿಯಾಗಿದೆ. ಇಸ್ರೇಲ್ ಒಳಗೆ ನುಗ್ಗಿದ ಹಮಾಸ್ ಉಗ್ರರು ಇಸ್ರೇಲ್ ನಾಗರೀಕರ ಮನೆಗಳ ಮೇಲೆ ದಾಳಿ ನಡೆಸಿ ನರಮೇಧ ಮಾಡಿದೆ. ಇದೇ ವೇಳೆ ಒಂದು ಕುಟುಂಬದ ಮನೆಯೊಳಗ್ಗೆ ನುಗ್ಗಿ ಕೆಲವರ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು ಇಡೀ ಕುಟಂಬವನ್ನು ಒತ್ತೆಯಾಳಾಗಿಟ್ಟುಕೊಂಡಿದೆ. ಇದೇ ವೇಳೆ ಕುಟುಂಬ ಸದಸ್ಯರ ಫೇಸ್‌ಬುಕ್ ಖಾತೆ ಮೂಲಕ ಲೈವ್ ಮಾಡಿರವ ಹಮಾಸ್ ಉಗ್ರರು, ಇಸ್ರೇಲ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಏಕಾಏಕಿ ಹಮಾಸ್ ಉಗ್ರರು ರಾಕೆಟ್ ದಾಳಿ ನಡೆಸಿದ್ದರು. ಇದೇ ವೇಳೆ ಪ್ಯಾರಾಗ್ಲೈಡಿಂಗ್, ಸಮುದ್ರ ಮಾರ್ಗದ ಮೂಲಕ ಇಸ್ರೇಲ್ ಒಳನುಗ್ಗಿ ಸಿಕ್ಕ ಸಿಕ್ಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಹಲವರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಇಸ್ರೇಲಿಗರ ಮನೆ ಮನೆಗೆ ನುಗ್ಗಿದ ಹಮಾಸ್ ಉಗ್ರರು ಮಕ್ಕಳು, ಕಂದಮ್ಮಗಳನ್ನು ನೋಡದೆ ಹತ್ಯೆ ಮಾಡಿದ್ದಾರೆ. ಹೀಗೆ ಗುಂಡಿನ ಮಳೆ ಸುರಿಸುತ್ತಾ ಮನೆಯೊಳಕ್ಕೆ ನುಗ್ಗಿದ ಹಮಾಸ್ ಉಗ್ರರು, ಇಡೀ ಕುಟುಂಬವನ್ನೇ ಒತ್ತೆಯಾಳಾಗಿಟ್ಟುಕೊಂಡಿದೆ.

ಪತಿ ಜೊತೆ ವಿಡಿಯೋ ಕಾಲ್‌ನಲ್ಲಿರುವಾಗಲೇ ಭಾರತೀಯ ಮಹಿಳೆ ಮೇಲೆ ಹಮಾಸ್ ಉಗ್ರರ ದಾಳಿ!

ಕುಟುಂಬ ಸದಸ್ಯರ ಫೇಸ್‌ಬುಕ್ ಖಾತೆ ಮೂಲಕ ಲೈವ್ ಮಾಡಿದ ಹಮಾಸ್ ಉಗ್ರರು, ನಿಮ್ಮ(ಇಸ್ರೇಲ್) ಸರ್ಕಾರಕ್ಕೆ ಹೇಳಿ, ನಾವು ಇಲ್ಲೇ ಇದ್ದೇವೆ ಎಂದು ಸೂಚಿಸಿದ್ದಾರೆ. ಬಳಿಕ ಮನೆಯ ಯಜಮಾನ ನನ್ನ ಕಾಲಿಗೆ ಗುಂಡು ಹಾರಿಸಿದ್ದಾರೆ. ನಾವು ಒತ್ತೆಯಾಳಾಗಿದ್ದೇವೆ ಎಂದು ಅಳುತ್ತಲೇ ಹೇಳಿದ್ದಾರೆ. ಈತನ ಕಾಲಿನಿಂದ ರಕ್ತ ಸುರಿಯುತ್ತಿದೆ. ಪತ್ನಿ ಮಕ್ಕಳು ಆತಂಕ, ಭಯದಿಂದ ಕಣ್ಣೀರಿಡುತ್ತಿದ್ದಾರೆ. ಫೇಸ್‌ಬುಕ್ ಲೈವ್ ಮೂಲಕ ಇಸ್ರೇಲ್ ಸರ್ಕಾರಕ್ಕೆ ಹಮಾಸ್ ಉಗ್ರರು ಎಚ್ಚರಿಸಿದ್ದಾರೆ.

 

 

ಬಳಿಕ ಶಾಲಾ ಬಾಲಕನನ ಗನ್ ತೋರಿಸಿ ಇತರ ಮನೆಗಳಲ್ಲಿನ ಇಸ್ರೇಲಿ ಕುಟುಂಬಸ್ಥರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಈ ಎಲ್ಲಾ ನಡೆಯನ್ನು ಲೈವ್ ಮೂಲಕ ತೋರಿಸಲಾಗಿದೆ.  ಈ ಭೀಕರ ಘಟನೆ ಇಸ್ರೇಲ್ ಸರ್ಕಾರವನ್ನೇ ಬೆಚ್ಚಿ ಬೀಳಿಸಿದೆ. ಇದೇ ರೀತಿ ಹಲವು ಕುಟುಂಬಗಳ ಪರಿಸ್ಥಿತಿ ಶೋಚನೀಯವಾಗಿದೆ.

ಇಸ್ರೇಲ್‌ ಮೇಲಿನ ದಾಳಿಗೆ ಅಮೆರಿಕ - ಇರಾನ್ 600 ಕೋಟಿ ಡಾಲರ್‌ ಡೀಲ್‌ ಹಣ ಬಳಕೆ? ಇರಾನ್‌ ದುಡ್ಡಿಂದ್ಲೇ ಹಮಾಸ್‌ ಉಗ್ರರ ದಾಳಿ?

Latest Videos
Follow Us:
Download App:
  • android
  • ios