ಲಂಡನ್(ಜ.19): ಬ್ರಿಟನ್ ರಾಜಮನೆತನದ ಯುವರಾಜ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅಧಿಕೃತವಾಗಿ ಅರಮನೆಯ ಜವಾಬ್ದಾರಿಗನ್ನು ಕಳಚಿ ಹೊರ ನಡೆದಿದ್ದಾರೆ. 

ಈ ಕುರಿತು ಬಕಿಂಗ್‌ಹ್ಯಾಮ್ ಅರಮನೆ ಅಧಿಕೃತ ಘೋಷಣೆ ಹೊರಡಿಸಿದ್ದು, ರಾಜ ಮನೆತನದ ಈ ದಂಪತಿ ಇನ್ನು ಸಾಮಾನ್ಯರಂತೆ ಜೀವನ ನಡೆಸಲಿದೆ ಎಂದು ಹೇಳಿದೆ.

ತಮ್ಮ ಕೆಲಸ ಕಾರ್ಯಗಳಿಗೆ ಹ್ಯಾರಿ ಮತ್ತು ಮೇಘನ್ ಸಾರ್ವಜನಿಕ ಹಣವನ್ನು ಬಳಸುವಂತಿಲ್ಲ ಎಂದು ಹೇಳಿರುವ ಅರಮನೆ ವಕ್ತಾರ, 2020ರಿಂದ ಅರಮನೆಯ ಹೊಸ ವ್ಯವಸ್ಥೆಗಳು ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

ಹ್ಯಾರಿ ದಂಪತಿ ರಾಜ ಪ್ರಭುತ್ವ ತೊರೆಯಲು ರಾಣಿ ಎಲಿಜಬೆತ್‌ ಸಮ್ಮತಿ!

ಒಪ್ಪಂದದಂತೆ ಹ್ಯಾರಿ ದಂಪತಿ  ವಿಂಡ್ಸರ್​ ಕಾಸ್ಟಲ್‌​ನ ತಮ್ಮ ಮನೆಯ ನವೀಕರಣಕ್ಕಾಗಿ ಮಾಡಿರುವ ವೆಚ್ಚ ಸೇರಿದಂತೆ, ಸಾರ್ವಜನಿಕರ ತೆರಿಗೆ ಮೊತ್ತ 2.4 ಮಿಲಿಯನ್​ ಪೌಂಡ್ಸ್​ ಮರಳಿಸಬೇಕಾಗಿದೆ. 

ಕಳೆದ ಹತ್ತು ದಿನಗಳ ಹಿಂದೆಯಷ್ಟೆ ಹ್ಯಾರಿ ಮತ್ತು ಮೇಘನ್​ ದಂಪತಿ ರಾಜ ಮನೆತನದ ವೈಭೋಗಗಳನ್ನು ತೊರೆಯುವುದಾಗಿ ಘೋಷಿಸಿದ್ದರು.