ಲಂಡನ್‌[ಜ.14]: ಯುವರಾಜ ಪ್ರಿನ್ಸ್‌ ಹ್ಯಾರಿ ಮತ್ತು ಮೇಘನ್‌ ಮಾರ್ಕೆಲ್‌ ದಂಪತಿ ರಾಜ ಪ್ರಭುತ್ವ ತ್ಯಜಿಸುವುದಕ್ಕೆ ರಾಣಿ ಎಲಿಜಬೆತ್‌-2 ಒಪ್ಪಿಗೆ ಸೂಚಿಸಿದ್ದಾರೆ.

ರಾಣಿಯ ಜೊತೆ ಪ್ರಿನ್ಸ್‌ ಹ್ಯಾರಿ ಮತ್ತು ರಾಜ ಕುಟುಂಬದ ಸದಸ್ಯರು ಮುಖಾಮುಖಿ ಚೆರ್ಚೆ ನಡೆಸಿದ್ದು, ಬದಲಾವಣೆಯ ಸಮಯದಲ್ಲಿ ಹ್ಯಾರಿ ಮತ್ತು ಮೇಘನ್‌ ಕೆನಡಾ ಮತ್ತು ಬ್ರಿಟನ್‌ನಲ್ಲಿ ವಾಸಿಸುವುದಕ್ಕೆ ರಾಣಿ ಒಪ್ಪಿಗೆ ಸೂಚಿಸಿದ್ದಾರೆ. ಹ್ಯಾರಿಯ ಭವಿಷ್ಯದ ಪಾತ್ರದ ಕುರಿತು ಕಾಲ ಕ್ರಮೇಣ ನಿರ್ಧರಿಸಲಾಗುತ್ತದೆ.

ದಂಪತಿಯ ನಿರ್ಧಾರಕ್ಕೆ ತಮ್ಮ ಒಪ್ಪಿಗೆ ಇದೆ ಮತ್ತು ತಮ್ಮ ಕುಟುಂಬವೂ ಬೆಂಬಲ ಸೂಚಿಸಿದೆ ಎಂದು ರಾಣಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಹಾರಾಣಿಯ ಬೆನ್ನು ಮುಟ್ಟಿ ಪ್ರೊಟೋಕಾಲ್ ಮುರಿದ ಟ್ರಂಪ್!

ರಾಜ ಪ್ರಭುತ್ವ ತ್ಯಜಿಸಿದ್ದೇಕೆ?

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ದಂಪತಿ "ನಾವು ರಾಜಮನೆತನದ 'ಹಿರಿಯ' ಸದಸ್ಯ ಸ್ಥಾನದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇವೆ. ಆರ್ಥಿಕವಾಗಿ ಸ್ವತಂತ್ರರಾಗಲು ತೀರ್ಮಾನಿಸಿದ್ದೇವೆ. ಹಾಗಾಗಿ ಮುಂದೆ ಕೆಲಸ ಮಾಡಲು ಉದ್ದೇಸಿದ್ದೇವೆ ಎಂದು ಹೇಳಿದ್ದಾರೆ. ಇದು ಮೇಘನ್​​ ಮತ್ತೆ ನಟಿಯಾಗಿ ಸಿನಿಮಾ ರಂಗಕ್ಕೆ ಮರಳಬಹುದು ಎಂಬುದು ತೋರುತ್ತದೆ. ಆದರೂ, ಅವರ ಆರ್ಥಿಕತೆ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಈ ಮಧ್ಯೆ ನಾವು ಯಾರ ಮೇಲೆಯೂ ಆರ್ಥಿಕವಾಗಿ ಅವಲಂಬನೆ ಆಗುವುದಿಲ್ಲ' ಎಂದಿದ್ದರು