ನವದೆಹಲಿ [ಜ.17]: ಹಿರಿಯ ವಕೀಲ ಹರೀಶ್‌ ಸಾಳ್ವೆ ಬ್ರಿಟನ್‌ ರಾಣಿ ಎಲಿಜಬೆತ್‌-2 ಅವರ ಹಿರಿಯ ವಕೀಲರಾಗಿ ನೇಮಕಗೊಂಡಿದ್ದಾರೆ. 

ಇಂಗ್ಲೆಂಡ್‌ ಮತ್ತು ವೇಲ್ಸ್‌ ಕೋರ್ಟ್‌ಗಳಲ್ಲಿ ರಾಣಿಯ ವಕೀಲರಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್‌ ಜಾಧವ್‌ ಪ್ರಕರಣದಲ್ಲಿ ವಾದಿಸುವ ಮೂಲಕ ಸಾಳ್ವೆ ಖ್ಯಾತಿಗಳಿಸಿದ್ದರು. 

ಸಾಳ್ವೆ ಅವರ ಜೊತೆಗೆ ಆ್ಯಂಡ್ರೂ ಗ್ರ್ಯಾಂಥಮ್‌, ಶಂತನು ಮಜುಂದಾರ್‌, ಕೇಟ್‌ ಸೆಲ್ವೆ ಮತ್ತು ಕ್ರಿಸ್ಟೋಫರ್‌ ಬೋರ್ಡ್‌ಮ್ಯಾನವೆರೆ ಅವರು ಕೂಡ ರಾಣಿಯ ವಕೀಲರ ತಂಡದಲ್ಲಿ ಇದ್ದಾರೆ. 

ಸಾಳ್ವೆಗೆ 1 ರೂ. ಸಂಭಾವನೆ ಹಸ್ತಾಂತರ: ಸುಷ್ಮಾ ಕೊನೆ ಆಸೆ ಪೂರೈಸಿದ ಪುತ್ರಿ!

2020 ಮಾ.16ರಂದು ವಕೀಲರ ನೇಮಕ ಆಗಲಿದೆ. ಈ ಹಿಂದೆಯೂ ಬ್ರಿಟನ್‌ ರಾಣಿಯ ವಕೀಲರಾಗಿ ಭಾರತೀಯರು ನೇಮಕಗೊಂಡಿದ್ದಾರೆ. ಕಳೆದ ವರ್ಷ ದಿಪೆನ್‌ ಸಬರ್ವಾಲ್‌ ರಾಣಿಯ ವಕೀಲರಾಗಿ ನೇಮಕಗೊಂಡಿದ್ದರು.