ವಾಷಿಂಗ್ಟನ್ (ನ. 11): ಎಚ್-1 ಬಿ ವೀಸಾದಡಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ವಿದೇಶಿಯರ ಸಂಗಾತಿಗಳಿಗೆ ನೀಡಲಾ ಗುವ ಉದ್ಯೋಗ ಪರ್ಮಿಟ್ ಅನ್ನು ರದ್ದುಗೊಳಿಸಲು ಅಮೆರಿಕದ ನ್ಯಾಯಾಲಯವೊಂದು ನಿರಾಕರಿಸಿದೆ.

ಅಯೋಧ್ಯೆ ತೀರ್ಪು ಪಾಕ್ ಸುಪ್ರೀಂಗೆ ಹೋಲಿಕೆ: ನ್ಯಾಷನಲ್ ಹೆರಾಲ್ಡ್‌ನಿಂದ ವಿವಾದ

ಹೀಗಾಗಿ ಭಾರತೀಯರೂ ಸೇರಿ ಲಕ್ಷಾಂತರ ವಿದೇ ಶಿಯರು ಅಮೆರಿಕದಲ್ಲಿ ಉದ್ಯೋಗ ಕಳೆದುಕೊಳ್ಳುವ ಭೀತಿ ಯಿಂದ ಪಾರಾಗಿದ್ದಾರೆ. ಹಿಂದೆ ಒಬಾಮಾ ಆಡಳಿತ ಜಾರಿಗೆ ತಂದಿದ್ದ ಈ ಉದ್ಯೋಗ ಪರ್ಮಿಟ್ನಿಂದಾಗಿ ತಮಗೆ ಉದ್ಯೋಗ ಕಡಿತವಾಗಿದೆ ಎಂದು ಅಮೆರಿಕನ್ ಯುವ ಸಮುದಾಯ ಕೋರ್ಟ್ ಮೆಟ್ಟಿಲೇರಿತ್ತು.

ಭಾರತದ 15 ಸ್ವಿಸ್ ಖಾತೆ ನಿಷ್ಟ್ರಿಯ; ವಾರಸ್ಥಾರರೇ ಇಲ್ಲ!

ಈ ಅರ್ಜಿ ವಿಚಾರಣೆ ನಡೆಸಿದ್ದ ಅಧೀನ ಕೋರ್ಟ್‌ವೊಂದು ಉದ್ಯೋಗ ಪರ್ಮಿಟ್ ರದ್ದಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೊಲಂಬಿಯಾ ಮೇಲ್ಮನವಿ ಕೋರ್ಟ್, ಅಧೀನ ಕೋರ್ಟ್ ಆದೇಶವನ್ನು ವಜಾ ಮಾಡಿದೆ.