ನ್ಯೂಯಾರ್ಕ್/ನವದೆಹಲಿ[ಅ.20]: 4 ವರ್ಷಗಳ ಹಿಂದೆ ಅಮೆರಿಕದಲ್ಲಿ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬ ಅಮೆರಿಕದ ಕೇಂದ್ರೀಯ ತನಿಖಾ ಸಂಸ್ಥೆ ಎಫ್‌ಬಿಐನ ಟಾಪ್‌ 10 ಮೋಸ್ಟ್‌ ವಾಂಟೆಡ್‌ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ.

ಅಮೆರಿಕದಲ್ಲಿ 4 ಮಂದಿಯನ್ನು ಕೊಂದು ಶರಣಾದ ಕನ್ನಡಿಗ!

ಗುಜರಾತ್‌ನ ಅಹಮದಾಬಾದ್‌ನ ವಿಕ್ರಂ ನಗರದ ನಿವಾಸಿಯಾಗಿದ್ದ ಭದ್ರೇಶ್‌ ಕುಮಾರ್‌ ಪಟೇಲ್‌ ಎಂಬಾತ 2015ರಲ್ಲಿ ಪತ್ನಿಯನ್ನು ಬರ್ಬರವಾಗಿ ಕೊಂದು ನಾಪತ್ತೆಯಾಗಿದ್ದಾನೆ. ಸತತ ಶೋಧನೆ ಬಳಿಕವೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪಟೇಲ್‌ ತಲೆಗೆ 70 ಲಕ್ಷ ರು. ಬಹುಮಾನವನ್ನು ಅಮೆರಿಕ ಘೋಷಿಸಿದೆ.

ಆತ ಎಲ್ಲಿ ಅಡಗಿದ್ದಾನೆ ಎನ್ನುವ ಮಾಹಿತಿ ಈವರೆಗೂ ಲಭ್ಯವಾಗಿಲ್ಲ. ಸದ್ಯ ಎಫ್‌ಬಿಐ, ಸಿಬಿಐ ಸಹಯೋಗದೊಂದಿಗೆ ಪಟೇಲ್‌ ಪತ್ತೆಗೆ ಭಾರತದಾದ್ಯಂತ ಬಲೆ ಬೀಸಿದೆ.