ವಾಷಿಂಗ್ಟನ್(ಜು.24)‌: ವಿದೇಶಿಗರಿಗೆ ಅಮೆರಿಕದ ಶಾಶ್ವತ ಪೌರತ್ವಕ್ಕೆ ಬೇಕಾಗುವ ಗ್ರೀನ್‌ ಕಾರ್ಡ್‌ ಪಡೆಯಲು ಇರುವ ಈಗಿನ ನಿಯಮಾವಳಿಗಳ ಪ್ರಕಾರ, ಈಗಾಗಲೇ ಅರ್ಜಿ ಸಲ್ಲಿಸಿರುವ ಭಾರತೀಯರಿಗೆ ಇನ್ನೂ 195 ವರ್ಷಗಳು ಬೇಕಾಗುತ್ತದೆ ಎಂದು ಅಮೆರಿಕ ರಿಪಬ್ಲಿಕನ್‌ ಸಂಸದರೊಬ್ಬರು ಹೇಳಿದ್ದಾರೆ. ಅಲ್ಲದೇ ಈಗಿರುವ ನಿಯಮಾವಳಿಗಳನ್ನು ಬದಲಾವಣೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ರಹಸ್ಯ ಕಾದಿಡಲು ಇನ್ನಷ್ಟು ಚೀನಾ ರಾಯಭಾರ ಕಚೇರಿ ಬಂದ್‌: ಟ್ರಂಪ್‌

ವಲಸೆ ನೌಕರರ ಬಗ್ಗೆ ಸದನದಲ್ಲಿ ನಡೆದ ಚರ್ಚೆ ಈ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿರುವ ಸೆನೇಟರ್‌ ಮೈಕ್‌ ಲೀ, ಈಗಿರುವ ಗ್ರೀನ್‌ ಕಾರ್ಡ್‌ ನಿಯಮಾವಳಿಗಳಿಂದ ಅರ್ಜಿ ಸಲ್ಲಿಸಿರುವವರ ಮಕ್ಕಳಿಗೂ ಗ್ರೀನ್‌ ಕಾರ್ಡ್‌ ಸಿಗುವುದಿಲ್ಲ. ಅವರಿಗೆ ಅಮೆರಿಕದ ಪೌರತ್ವ ಸಿಗುವುದು ಕನಸಿನ ಮಾತು. ವಲಸೆ ನೀತಿಯಿಂದಾಗಿ ತಾತ್ಕಾಲಿಕ ಕೆಲಸದಲ್ಲಿರುವವರಿಗೆ ತೊಂದರೆಯಾಗುತ್ತಿದೆ.ಇದರಿಂದ ಹಲವು ಕುಟುಂಬಗಳು ವಲಸೆ ಕಾರ್ಡ್‌ ಕಳೆದುಕೊಳ್ಳುವ ಭೀತಿ ಇದೆ. ಹೀಗಾಗಿ ವಲಸೆ ಹಾಗೂ ಗ್ರೀನ್‌ ಕಾರ್ಡ್‌ ನಿಯಮಾವಳಿಗಳನ್ನು ಪರಿಷ್ಕರಿಸುವ ಜರೂರತ್ತು ಇದೆ ಎಂದು ಹೇಳಿದ್ದಾರೆ.

ವಲಸಿಗರು ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಯೂರಲು ಗ್ರೀನ್ ಕಾರ್ಡ್ ನೀಡಲಾಗುತ್ತದೆ. ಈಗಿರುವ ನಿಯಮದಂತೆ ಈಗ ಅರ್ಜಿ ಸಲ್ಲಿಸಿದರೂ ಅಮೆರಿಕ ಪೌರತ್ವ ಪಡೆಯಲು 195 ವರ್ಷ ಕಾಯಬೇಕಾಗುತ್ತದೆ. 2019ನೇ ಆರ್ಥಿಕ ವರ್ಷದಲ್ಲಿ ಭಾರತೀಯರು ಉದ್ಯೋಗದ ಕಾರಣದಿಂದ 16 ಸಾವಿರಕ್ಕೂ ಅಧಿಕ ಅಮೆರಿಕ ವೀಸಾ ಪಡೆದಿದ್ದಾರೆ.