Asianet Suvarna News Asianet Suvarna News

ಅಮೆರಿಕಾ ಗ್ರೀನ್‌ಕಾರ್ಡ್‌ಗೆ ಕಾಯ್ತಿದ್ದಾರೆ ಶ್ರೀಲಂಕಾ ಮಾಜಿ ಅಧ್ಯಕ್ಷ Gotabaya Rajapaksa; ವರದಿ

Gotabaya Rajapaksa Updates: ಶ್ರೀಲಂಕಾ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸ ಅಮೆರಿಕಾದ ಗ್ರೀನ್‌ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದು ಸಿಕ್ಕ ತಕ್ಷಣ ಹೆಂಡತಿ ಮತ್ತು ಮಗನೊಂದಿದೆ ತೆರಳಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಸದ್ಯ ರಾಜಪಕ್ಸ ಥಾಯ್‌ಲ್ಯಾಂಡ್‌ನ ಹೋಟೆಲ್‌ ಒಂದರಲ್ಲಿ ವಾಸ್ತವ್ಯ ಪಡೆದಿದ್ದಾರೆ.

gotabaya rajapaksa awaiting for american green card to sift their permanently
Author
Bengaluru, First Published Aug 18, 2022, 1:44 PM IST

ನವದೆಹಲಿ: ಕಳೆದ ತಿಂಗಳು ಶ್ರೀಲಂಕಾ ತೊರೆದು ಪರಾರಿಯಾಗಿದ್ದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸ ಸದ್ಯ ಥಾಯ್‌ಲ್ಯಾಂಡ್‌ನಲ್ಲಿ ನೆಲೆಸಿದ್ದಾರೆ. ಕೆಲ ದಿನಗಳಲ್ಲಿ ವಾಪಸ್‌ ಶ್ರೀಲಂಕಾಗೆ ಬರುತ್ತಾರೆ ಎನ್ನಲಾಗಿತ್ತಾದರೂ ಇದೀಗ ಅಮೆರಿಕಾ ಗ್ರೀನ್‌ ಕಾರ್ಡ್‌ಗಾಗಿ ಕಾಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಹೆಂಡತಿ ಮತ್ತು ಮಗನ ಜೊತೆ ಅಮೆರಿಕಾದಲ್ಲಿ ನೆಲೆಸಲು ಗ್ರೀನ್‌ ಕಾರ್ಡ್‌ಗೆ ಗೋಟಬಯ ರಾಜಪಕ್ಸ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಗಳು ನಿಜವಾದಲ್ಲಿ ಅವರು ಶ್ರೀಲಂಕಾಗೆ ಸದ್ಯ ವಾಪಸಾಗುವ ಸಾಧ್ಯತೆ ಕ್ಷೀಣಿಸಿಲಿದೆ. ಡೈಲಿ ಮಿರರ್‌ ಪತ್ರಿಕೆ ಈ ಬಗ್ಗೆ ವರದಿ ಮಾಡಿದ್ದು, ಉನ್ನತ ಮೂಲಗಳ ಪ್ರಕಾರ ಗೋಟಬಯ ರಾಜಪಕ್ಸ ಪರ ವಕೀಲರು ಕಳೆದ ತಿಂಗಳೇ ಅಮೆರಿಕಾದಲ್ಲಿ ಗ್ರೀನ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಗೋಟಬಯ ಪತ್ನಿ ಅಯೋನಾ ರಾಜಪಕ್ಸ ಅಮೆರಿಕಾ ನಾಗರಿಕರಾಗಿರುವ ಹಿನ್ನೆಲೆ ರಾಜಪಕ್ಸ ಕುಟುಂಬ ಗ್ರೀನ್‌ ಕಾರ್ಡ್‌ ಪಡೆಯಲು ಕಾನೂನಾತ್ಮಕವಾಗಿ ಅರ್ಹರಾಗಿದ್ದಾರೆ. ಇದೇ ಆಧಾರದ ಮೇಲೆ ಗ್ರೀನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲಾಗಿದೆ. 

ವರದಿಯ ಪ್ರಕಾರ, ಕೊಲಂಬೋದಲ್ಲಿರುವ ರಾಜಪಕ್ಸ ಪರ ವಕೀಲರು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬೇಕಿದೆ. ಅದಾದ ನಂತ ತ್ವರಿತಗತಿಯಲ್ಲಿ ಅವರ ಗ್ರೀನ್‌ ಕಾರ್ಡ್‌ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ. 

ಆದರೆ ಮೂಲಗಳ ಪ್ರಕಾರ ಥಾಯ್‌ಲ್ಯಾಂಡ್‌ನಿಂದ ಅವರು ಆಗಸ್ಟ್‌ 25ನೇ ತಾರೀಕು ಶ್ರೀಲಂಕಾಗೆ ವಾಪಸಾಗಲಿದ್ದಾರೆ. ನವೆಂಬರ್‌ವರೆಗೂ ಅವರು ಶ್ರೀಲಂಕಾದಲ್ಲೇ ಇರಲಿದ್ದಾರೆ ಎಂದೂ ವರದಿ ಹೇಳಿದೆ. ಡೈಲಿ ಮಿರರ್‌ ವರದಿಯ ಪ್ರಕಾರ, ಥಾಯ್‌ಲ್ಯಾಂಡ್‌ನಲ್ಲಿ ರಾಜಪಕ್ಸಾಗೆ ಪ್ರಯಾಣ ನಿರ್ಬಂಧ ಹೇರಲಾಗಿದೆ. ಅವರ ಸುರಕ್ಷತೆಯ ದೃಷ್ಟಿಯಿಂದ ಹೋಟೆಲ್‌ ಬಿಟ್ಟು ಆಚೆ ಬರದಂತೆ ತಾಕೀತು ಮಾಡಲಾಗಿದೆ. ಇದೇ ಕಾರಣಕ್ಕೆ ಅವರು ಶ್ರೀಲಂಕಾಗೆ ವಾಪಸಾಗಲಿದ್ದಾರೆ ಎನ್ನಲಾಗುತ್ತಿದೆ. 

ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷನ ದೇಶ ಬಿಡುವ ಸ್ಥಿತಿಗೆ ತಂದಿಟ್ಟ ಬೌದ್ಧ ಭಿಕ್ಷು, ಓಮಲ್ಪೆ ಸೋಬಿತಾ ಥೇರ ಯಾರು?

ರಾಜಪಕ್ಸ ತಂಗಿರುವ ಬ್ಯಾಂಕಾಕ್‌ನ ಹೋಟೆಲ್‌ ಒಳಗೆ ಮತ್ತು ಹೊರಗೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಮಫ್ತಿಯಲ್ಲಿ ಭದ್ರತಾ ಸಿಬ್ಬಂದಿ ನೇಮಿಸಲಾಗಿದ್ದು, ಅವರು ಯಾವ ಹೋಟೆಲ್‌ನಲ್ಲಿ ತಂಗಿದ್ದಾರೆ ಎಂಬ ಮಾಹಿತಿಯನ್ನು ಗುಪ್ತವಾಗಿಡಲಾಗಿದೆ. 
ಶ್ರೀಲಂಕಾಗೆ ಮಾಸಾಂತ್ಯದಲ್ಲಿ ರಾಜಪಕ್ಸ ವಾಪಸಾದಾಗ ಸರ್ಕಾರಿ ನಿವಾಸ ಮತ್ತು ಭದ್ರತೆ ನೀಡುವ ಬಗ್ಗೆ ಸಂಪುಟ ನಿರ್ಧರಿಸಿದೆ. ಸಾಮಾನ್ಯವಾಗಿ ಮಾಜಿ ಅಧ್ಯಕ್ಷರಿಗೆ ನೀಡುವ ಸವಲತ್ತುಗಳನ್ನು ರಾಜಪಕ್ಸ ಅವರಿಗೂ ಸರ್ಕಾರ ನೀಡಲಿದೆ. 

ರಾಜಪಕ್ಸ ಕಳೆದ ತಿಂಗಳು ರಾತ್ರೋರಾತ್ರಿ ಸೇನಾ ವಿಮಾನದಲ್ಲಿ ಮಾಲ್ಡೀವ್ಸ್‌ಗೆ ಪರಾರಿಯಾಗಿದ್ದರು. ಅಲ್ಲಿಂದ ಸಿಂಗಾಪುರಕ್ಕೆ ತೆರಳಿದ್ದರು. ಸಿಂಗಾಪುರಕ್ಕೆ ಮೆಡಿಕಲ್‌ ವೀಸಾದಲ್ಲಿ ಹೋಗಿದ್ದರು. ಆದರೆ ವೀಸಾ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅಲ್ಲಿಂದ ಥಾಯ್‌ಲ್ಯಾಂಡ್‌ಗೆ ತೆರಳಿದ್ದರು. ಬೇರೆ ದೇಶಕ್ಕೆ ಹೋಗುವವರೆಗೆ ವಾಸ್ತವ್ಯ ನೀಡುವುದಾಗಿ ಥಾಯ್‌ಲ್ಯಾಂಡ್‌ ಭರವಸೆ ನೀಡಿರುವ ಕಾರಣಕ್ಕೆ ರಾಜಪಕ್ಸ ಪತ್ನಿ ಸಮೇತ ಬ್ಯಾಂಕಾಕ್‌ನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರಾನಿಲ್‌ ವಿಕ್ರಮಸಿಂಘೆಗೆ ಒಲಿದ ಶ್ರೀಲಂಕಾ ಅಧ್ಯಕ್ಷ ಸ್ಥಾನ, ಭಾರತಕ್ಕೆ ನಿರಾಳ, ಚೀನಾಗೆ ಶಾಕ್!

ಶ್ರೀಲಂಕಾ ಆರ್ಥಿಕ ಪತನಕ್ಕೆ ರಾಜಪಕ್ಸ ನೀಡಿದ ಕಾರಣಗಳೇನು?:

ಶ್ರೀಲಂಕಾದಲ್ಲಿ ಕಳೆದ ತಿಂಗಳು ಹಣದುಬ್ಬರವು ಶೇ 54.6ಕ್ಕೆ ತಲುಪಿದೆ. ಮುಂಬರುವ ತಿಂಗಳಲ್ಲಿ ಇದು 70% ಕ್ಕೆ ಏರಬಹುದು ಎಂದು ಕೇಂದ್ರ ಬ್ಯಾಂಕ್ ಎಚ್ಚರಿಸಿದೆ. ಏತನ್ಮಧ್ಯೆ, ಗೊಟಬಯ ರಾಜಪಕ್ಸೆ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಜುಲೈ 13 (14 ರಂದು ಇಮೇಲ್) ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ದೇಶದ ಆರ್ಥಿಕ ಬಿಕ್ಕಟ್ಟಿಗೆ ಮೂರು ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಮೊದಲನೆಯದು - ಈಸ್ಟರ್‌ ಸರಣಿ ಸ್ಫೋಟ, ಎರಡನೇ ಕೊರೋನಾ ಮತ್ತು ಮೂರನೇ ಸಾವಯವ ಕೃಷಿ ಕ್ರಮ.

1. ಈಸ್ಟರ್ ಬಗ್ಗೆ ಪ್ರಸ್ತಾಪಿಸಿದ ರಾಜಪಕ್ಸೆ - ಶ್ರೀಲಂಕಾದ ಪ್ರವಾಸೋದ್ಯಮವು ಈಸ್ಟರ್ ದಾಳಿಯಿಂದ ಧ್ವಂಸ

ಈಸ್ಟರ್‌ನಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ - 21 ಏಪ್ರಿಲ್ 2019 ರಂದು, ಈಸ್ಟರ್ ಸಂದರ್ಭದಲ್ಲಿ ಶ್ರೀಲಂಕಾದಲ್ಲಿ ಸರಣಿ ಸ್ಫೋಟಗಳು ನಡೆದವು. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಉಗ್ರಗಾಮಿಗಳು ಹೊತ್ತುಕೊಂಡಿದ್ದರು. ದಕ್ಷಿಣ ಏಷ್ಯಾದಲ್ಲಿ, ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ಸ್ಥಳೀಯ ಮುಸ್ಲಿಂ ಗುಂಪಿಗೆ ಸೇರಿದ ಏಳು ಆತ್ಮಹತ್ಯಾ ಬಾಂಬರ್‌ಗಳು ಮೂರು ಚರ್ಚ್‌ಗಳು ಮತ್ತು ಐಷಾರಾಮಿ ಹೋಟೆಲ್‌ಗಳ ಮೇಲೆ ದಾಳಿ ಮಾಡಿ 258 ಜನರನ್ನು ಕೊಂದರು ಮತ್ತು ಸುಮಾರು 500 ಮಂದಿ ಗಾಯಗೊಂಡರು. ಇದರ ನಂತರ, ಶ್ರೀಲಂಕಾದಲ್ಲಿ ವಾಸಿಸುವ 10 ಪ್ರತಿಶತದಷ್ಟು ಮುಸ್ಲಿಂ ಜನಸಂಖ್ಯೆಯ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಲಾಯಿತು. ಆದರೆ ಶ್ರೀಲಂಕಾದ ಕಳಪೆ ಆರ್ಥಿಕ ಸ್ಥಿತಿಯು ಸೃಷ್ಟಿಸಿದ ಬಿಕ್ಕಟ್ಟು ಮುಸ್ಲಿಮರನ್ನು ಒಗ್ಗೂಡಿಸಿತು. ಸರ್ಕಾರದ ವಿರುದ್ಧದ ಚಳವಳಿಗಳಲ್ಲೂ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಗೊಟಬಯ ಬಳಿಕ ಶ್ರೀಲಂಕಾ ನೂತನ ಅಧ್ಯಕ್ಷ ಯಾರು? ರೇಸ್‌ನಲ್ಲಿ ಮೂವರ ಹೆಸರು!

2. ಕೊರೋನಾವನ್ನು ಪ್ರಸ್ತಾಪಿಸಿದ ರಾಜಪಕ್ಸೆ - ಈಸ್ಟರ್‌ ಬಳಿಕ ಕೊರೋನಾ ಸಾಂಕ್ರಾಮಿಕದ ಆಗಮನದಿಂದ ಶ್ರೀಲಂಕಾದ ಪ್ರವಾಸೋದ್ಯಮವು ಸಂಪೂರ್ಣವಾಗಿ ಸ್ಥಗಿತಗೊಂಡಿತು ಮತ್ತು ಈ ಕಾರಣದಿಂದಾಗಿ ವಿದೇಶಿ ಕಾರ್ಮಿಕರ ಸಂಖ್ಯೆಯು ತುಂಬಾ ಸೀಮಿತವಾಗಿತ್ತು. ಶ್ರೀಲಂಕಾದಲ್ಲಿ ಪ್ರಸ್ತುತ ಬಿಕ್ಕಟ್ಟಿಗೆ ಇದು ಪ್ರಮುಖ ಕಾರಣವಾಗಿದೆ.

ಶ್ರೀಲಂಕಾದಲ್ಲಿ ಕೊರೋನಾದಿಂದಾಗಿ ಕೈಗಾರಿಕೆಗಳ ಭವಿಷ್ಯದ ಬಗ್ಗೆ 12 ನೇ ಶತಮಾನ BC ಯಲ್ಲಿ, ಇಟಾಲಿಯನ್ ಪರಿಶೋಧಕ ಮಾರ್ಕೊ ಪೊಲೊ ಶ್ರೀಲಂಕಾವು ವಿಶ್ವದಲ್ಲೇ ಅದರ ಗಾತ್ರದ ಅತ್ಯುತ್ತಮ ದ್ವೀಪವಾಗಿದೆ ಎಂದು ಹೇಳಿದ್ದರು. ಶ್ರೀಲಂಕಾದ ಪ್ರವಾಸೋದ್ಯಮ ಕ್ಷೇತ್ರವು ದೇಶದ ಒಟ್ಟು ದೇಶೀಯ ಉತ್ಪನ್ನದ ಸುಮಾರು 12% ಆಗಿದೆ. ಇದು ವಿದೇಶಿ ವಿನಿಮಯ ಮೀಸಲುಗಳ ಮೂರನೇ ಅತಿದೊಡ್ಡ ಮೂಲವೆಂದು ಪರಿಗಣಿಸಲ್ಪಟ್ಟಿದೆ. ಆದರೆ 2019 ರಲ್ಲಿ ಈಸ್ಟರ್ ಬಾಂಬ್ ಸ್ಫೋಟದ ನಂತರ, ಪ್ರವಾಸೋದ್ಯಮವು ಸ್ಥಗಿತಗೊಂಡಿತು. ನಂತರ 2020 ರಲ್ಲಿ ಕೋವಿಡ್ -19 ಬಂದಾಗ, ಶ್ರೀಲಂಕಾದಲ್ಲಿ ಮೊದಲ ಪ್ರಕರಣ ಕಂಡುಬಂದ ತಕ್ಷಣ ಲಾಕ್‌ಡೌನ್ ಅನ್ನು ವಿಧಿಸಲಾಯಿತು. ಕೆಲವು ನಾಯಕರು ಇದರ ಸಂಪೂರ್ಣ ಲಾಭ ಪಡೆದರು. ಹೀಗಾಗಿ ಕೊರೋನಾದಿಂದಾಗಿ ಆರ್ಥಿಕತೆ ಹದಗೆಟ್ಟಿದೆ.

3. ಶ್ರೀಲಂಕಾದಲ್ಲಿ ಸಾವಯವ ಕೃಷಿಯ ವೈಫಲ್ಯವನ್ನು ಉಲ್ಲೇಖಿಸಿದ ರಾಜಪಕ್ಸೆ - ಸಾವಯವ ಕೃಷಿಯಂತಹ ನಿಮ್ಮ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರಗಳ ಅನಿರೀಕ್ಷಿತ ವೈಫಲ್ಯದಿಂದ ನಿಮಗೆ ಉಂಟಾದ ಅನಾನುಕೂಲತೆಗಾಗಿ ನಾನು ಕ್ಷಮೆಯಾಚಿಸುತ್ತೇನೆ.

Follow Us:
Download App:
  • android
  • ios