ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜಾರಿಗೊಳಿಸಿರುವ ವಲಸೆ ಸುಧಾರಣೆ ನೀತಿ|  ವಲಸೆ ಸುಧಾರಣೆ ನೀತಿಯನ್ನು ಗೂಗಲ್‌, ಆ್ಯಪಲ್‌ ಸೇರಿದಂತೆ ಅಮೆರಿಕದ ಪ್ರಮುಖ ಐಟಿ ಹಾಗೂ ಉದ್ಯಮ ಸಂಸ್ಥೆಗಳು ಪ್ರಶಂಸಿಸಿವೆ

ವಾಷಿಂಗ್ಟನ್(ಜ.24): ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜಾರಿಗೊಳಿಸಿರುವ ವಲಸೆ ಸುಧಾರಣೆ ನೀತಿಯನ್ನು ಗೂಗಲ್‌, ಆ್ಯಪಲ್‌ ಸೇರಿದಂತೆ ಅಮೆರಿಕದ ಪ್ರಮುಖ ಐಟಿ ಹಾಗೂ ಉದ್ಯಮ ಸಂಸ್ಥೆಗಳು ಪ್ರಶಂಸಿಸಿವೆ. ಈ ಕ್ರಮದಿಂದ ಅಮೆರಿಕದ ಆರ್ಥಿಕತೆಗೆ ಉತ್ತೇಜನ ದೊರೆಯಲಿದ್ದು, ಉದ್ಯೋಗ ಸೃಷ್ಟಿಹಾಗೂ ಪ್ರತಿಭಾವಂತರನ್ನು ಅಮೆರಿಕದಲ್ಲಿಯೇ ಉಳಿಸಿಕೊಳ್ಳಲು ಸಹಾಯವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿವೆ.

ಬೈಡೆನ್‌ ಅವರ ವಲಸೆ ನೀತಿ ಸುಧಾರಣೆಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್‌ ಮಾಡಿರುವ ಗೂಗಲ್‌ ಸಿಇಒ ಸುಂದರ್‌ ಪಿಚೈ, ಮಹತ್ವದ ವಿಷಯಗಳ ಬಗ್ಗೆ ಬೈಡೆನ್‌ ಬೈಡೆನ್‌ ಕೈಗೊಂಡಿರುವ ಕ್ರಮಗಳನ್ನು ಗೂಗಲ್‌ ಸ್ವಾಗತಿಸುತ್ತದೆ. ನೂತನ ಸರ್ಕಾರದ ಜೊತೆ ಕಾರ್ಯನಿರ್ವಹಿಸುವದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ವಲಸೆ ನೀತಿ ಸುಧಾರಣೆ ಕ್ರಮಗಳು ಅಮೆರಿಕದ ಮೌಲ್ಯಗಳು ಹಾಗೂ ಸೊಗಸು ಹಾಗೂ ಗೌರವದ ಸಂಕೇತವಾಗಿದೆ ಎಂದು ಆ್ಯಪಲ್‌ ಸಿಇಒ ಟಿಕ್‌ ಕುಕ್‌ ಹೇಳಿದ್ದಾರೆ. ಮೈಕ್ರೋಸಾಫ್ಟ್‌ ಕೂಡಾ ಬೆಳವಣಿಗೆಯನ್ನು ಸ್ವಾಗತಿಸಿದೆ.