* ಅಪ್ಘಾನಿಸ್ತಾನದಲ್ಲಿ ತಾಲೀಬಾನಿಗಳ ಅಟ್ಟಹಾಸ* ತಾಯಿ ನಾಡನ್ನು ತೊರೆದ ನಿರ್ಮಾಪಕಿಯ ಪತ್ರ* ಭಾವನಾತ್ಮಕ ಪತ್ರದಲ್ಲಿ ದೊಡ್ಡ ಸಂದೇಶ* ತಾಲೀಬಾನಿಗಳ ಅಟ್ಟಹಾಸದ ನಡುವೆ ಕೆಲಸ ಮಾಡಲು ಸಾಧ್ಯವಿಲ್ಲ

ಕಾಬೂಲ್ (ಆ. 27) ಅಫ್ಘಾನಿಸ್ತಾನವನ್ನು ತಾಲೀಬಾನಿಗಳು ವಶಕ್ಕೆ ಪಡೆದುಕೊಂಡು ಪ್ರತಿ ದಿನ ಉಗ್ರತೆ ಮೆರೆಯುತ್ತಲೇ ಇದ್ದಾರೆ. ಮಕ್ಕಳು ಮತ್ತು ಮಹಿಳೆಯರ ದುಸ್ಥಿತಿಯನ್ನು ಹೇಳಲು ಸಾಧ್ಯವಿಲ್ಲ. ತಾಲೀಬಾನಿನ ಇನ್ನೊಂದು ಕರಾಳ ಮುಖವನ್ನು ಅಲ್ಲಿಯ ಸಿನಿಮಾ ನಿರ್ಮಾಪಕರಾಗಿದ್ದವರೊಬ್ಬರು ಬಿಚ್ಚಿಟ್ಟಿದ್ದಾರೆ.

ಅಫ್ಘಾನ್ ಸಿನಿಮಾ ನಿರ್ಮಾಪಕಿ ಮತ್ತು ಪೋಟೋಗ್ರಾಫರ್ ಆಗಿದ್ದ ರೋಯಾ ಹೈದಾರಿ ತಾಯ್ನಾಡನ್ನು ತೊರೆದು ಫ್ರಾನ್ಸ್ ಕಡೆ ಹೆಜ್ಜೆ ಇಟ್ಟಿದ್ದಾರೆ. ಅವರು ಪತ್ರದಲ್ಲಿ ಏನು ಹೇಳಿದ್ದಾರೆ?

ನಾನು ನನ್ನ ಜೀವನವನ್ನೇ ಬಿಟ್ಟು ಹೊರಟಂತೆ ಭಾಸವಾಗುತ್ತಿದೆ. ನನ್ನ ಮನೆಯನ್ನು ಬಿಟ್ಟಿದ್ದೇನೆ. ಮಹಿಳೆ ಮತ್ತು ಮಕ್ಕಳ ಇಲ್ಲಿನ ಪರಿಸ್ಥಿತಿ ಬಗ್ಗೆ ಏನನ್ನೂ ಹೇಳಲಾರೆ ಎಂದಿದ್ದಾರೆ.

1996 ಮತ್ತು 2001 ರ ನಡುವೆ ಅಧಿಕಾರದಲ್ಲಿದ್ದಾಗ, ತಾಲಿಬಾನ್ ಮಹಿಳೆಯರನ್ನು ಕೆಲಸದ ಸ್ಥಳದಿಂದ ನಿಷೇಧಿಸಿತು, ಒಬ್ಬ ಪುರುಷ ಸಂಬಂಧಿ ಜತೆಯಿಲ್ಲದೇ ಹೊರಗೆನ ಓಡಾಡಬಾರದು ಎಂದು ಕಾನೂನು ಮಾಡಿತ್ತು. ಬುರ್ಖಾ ಧರಿಸದೆ ಹೊರಗೆ ಬಂದರೆ ಕಠಿಣ ಶಿಕ್ಷೆ ಎಂದು ಜಾರಿ ಮಾಡಿತ್ತು.

ಆದರೆ ಈ ಸಾರಿ ನಾವು ಬದಲಾಗಿದ್ದೇವೆ ಎಂದು ಹೇಳಿಕೊಳ್ಳುತ್ತ ಅದನ್ನು ಜಗತ್ತಿಗೆ ತೋರಿಸಲು ಹರಸಾಹಸ ಮಾಡುತ್ತಿದ್ದಾರೆ. ಅಸಲಿಗೆ ಅವರ ಯಾವ ತನವೂ ಬದಲಾಗಿಲ್ಲ. ಮಹಿಳೆಯರಲ್ಲಿನ ಆತಂಕಕ್ಕೆ ಕೊನೆ ಇಲ್ಲ. ಈಗಾಗಲೇ ಮನೆಗೆ ಹೊಕ್ಕಿ ಮಹಿಳೆಯರನ್ನು ಹೊತ್ತುಕೊಂಡು ಬಂದ ಪ್ರಕರಣಗಳು ವರದಿಯಾಗಿವೆ.

ನಾನು ಅಧ್ಯಕ್ಷನಾಗಿದ್ದರೆ ಹೀಗಾಗುತ್ತಿರಲಿಲ್ಲ ಎಂದ ಟ್ರಂಪ್

ಕಾಬೂಲ್ ವಿಮಾನ ನಿಲ್ಆಣದ ಪೋಟೋ ಹಂಚಿಕೊಂಡಿರುವ ರೋಯಾ... ನನ್ನ ತಾಯಿನಾಡಿನಿಂದ ಹೊರಹೋಗಲು ಇರುವುದು ಇದೊಂದೆ ದಾರಿ.. ಮತ್ತೊಮ್ಮೆ ನಾನು ತಾಯ್ನಾಡು ತೊರೆಯುತ್ತಿದ್ದೇನೆ.. ಶುನ್ಯದಿಂದ ಎಲ್ಲವನ್ನು ಆರಂಭ ಮಾಡಬೇಕಿದೆ ಎಂದು ಬರೆದುಕೊಂಡಿದ್ದಾರೆ.

ನನ್ನ ಕ್ಯಾಮರಾಗಳು ಮತ್ತು ಸತ್ತ ಆತ್ಮವನ್ನು ಜತೆಗೆ ಕೊಂಡೊಯ್ಯುತ್ತಿದ್ದೇನೆ. ಭಾರವಾದ ಮನಸ್ಸಿನೊಂದಿಗೆ ತಾಯ್ನಾಡಿಗೆ ಗುಡ್ ಬೈ ಹೇಳುತ್ತಿದ್ದೇನೆ..ಹೇಳುವುದು ಅನಿವಾರ್ಯವಾಗಿದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಸಿನಿಮಾ ನಿರ್ಮಾಪಕಿ ಕಾಬೂಲ್ ನಿಂದ ಹೊರಟು ಫ್ರಾನ್ಸ್ ತಲುಪಿದ್ದಾರೆ. ಸಾವು ಒಂದೇ ಕ್ಷಣದಲ್ಲಿ ಬರಬಹುದು..ಸಾವಿಗೆ ಹೆದರುವ ಸ್ಥಿತಿಯಲ್ಲಿ ನಾನಿಲ್ಲ ಎಂದು ಹೇಳಿದ್ದಾರೆ.

Scroll to load tweet…