ಬೆಂಗಳೂರು(ಆ. 20)  ಕೊರೋನಾ ಅನ್ ಲಾಕ್ ಮಾಡಿ ಹಲವು ದಿನಗಳು ಕಳೆದಿವೆ. ಆದರೆ ಇದು ಅದೆಲ್ಲದಕ್ಕಿಂತ ಮೀರಿದ ಸುದ್ದಿ. 

ಅಮೆರಿಕನ್ ಏರ್ ಲೈನ್ಸ್  ನೇರವಾಗಿ ಬೆಂಗಳೂರಿಗೆ ಪ್ಯಾಸೆಂಜರ್ ವಿಮಾನ ಸೇವೆ ಆರಂಬಿಸಲು ಸಿದ್ಧತೆ ಮಾಡಿಕೊಂಡಿದೆ. 2021ರ ಚಳಿಗಾಲದ  ವೇಳೆಗೆ ಸೇವೆ ಆರಂಭವಾಗುವ ಸಾಧ್ಯತೆ ಇದೆ.  ಇದಕ್ಕೆ ಪೂರ್ವಭಾವಿ ಎನ್ನುವಂತೆ ಭಾರತತ ಮಾರುಕಟ್ಟೆಗೆ ಸಂಬಂಧಿಸಿ ಏರ್ ಲಾಜಿಸ್ಟಿಕ್ ಗ್ರೂಪ್ ಸಿದ್ಧಮಾಡಿಕೊಂಡಿದೆ.

ಅಮೆರಿಕ ನೀಡಿದ ಸುಳಿವಿನಿಂದ ಸಿಕ್ಕಿಬಿದ್ದ ಬೆಂಗಳುರು ಟೆರರ್ ಡಾಕ್ಟರ್

ಎರಡು ಪ್ರಪಂಚದ ಬಹುಮುಖ್ಯ ವಾಣಿಜ್ಯ ನಗರಗಳು ನೇರ ಸಂಪರ್ಕಕ್ಕೆ ಬರಲಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. ಭಾರತದೊಂದಿಗೆ ನಾವು ಎರಡು ದಶಕದ ಸಂಬಂಧ ಹೊಂದಿದ್ದೇವೆ. ಫಾರ್ಮಾ ಇಂಡಸ್ಟ್ರಿಗೆ ಸಂಬಂಧಿಸಿದ ವಹಿವಾಟು ವೃದ್ಧಿಗೆ ಈ ವಿಮಾನ ಸೇವೆ ಪೂರಕವಾಗಲಿದೆ ಎಂದಿದೆ.

ಕಾರ್ಗೋ ಸೇವೆಯನ್ನು ವಿಸ್ತರಿಸುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ಆಗಿದೆ.  ಒಟ್ಟಿನಲ್ಲಿ ಈ ವಿಮಾನ ಸೇವೆ ಆರಂಭವಾದರೆ  ಸಿಯಾಟಲ್ ಮತ್ತು ಬೆಂಗಳುರು ಎರಡು ಪ್ರಮುಖ ಮಾಹಿತಿ ಮತ್ತು ತಂತ್ರಜ್ಞಾನ ಮಹಾನಗರಿಗಳ ಸಂಪರ್ಕ ಸಾಧ್ಯವಾಗುತ್ತದೆ ಎಂದು ಸಂಸ್ಥೆ ಹೇಳಿದೆ.