ಹಸಿರು ಬಣ್ಣದ ಶ್ವಾನಗಳ ಜನನ, ಕುತೂಹಲಕಾರಿ ಕತೆ ಅನಾವರಣ!
ಹಸಿರು ತುಪ್ಪಳ ಹೊಂದಿರುವ 9 ಶ್ವಾನದ ಮರಿಗಳಿಗೆ ಜನ್ಮ ನೀಡಿದ ಗೋಲ್ಡನ್ ರಿಟ್ರಿವರ್ ಶ್ವಾನ/ ಬಲು ಅಪರೂದ ಶ್ವಾನದ ಮರಿಗಳು/ ಮೊದಲು ಆತಂಕಕ್ಕೆ ಸಿಲುಕಿದ್ದ ಮಾಲಕಿ
ಜರ್ಮನಿ(ಜ. 20) ನಾಯಿಯೊಂದು ಒಂಬತ್ತು ಮರಿಗಳಿಗೆ ಜನ್ಮ ನೀಡಿದೆ. ಇಷ್ಟೆ ಆಗಿದ್ದರೆ ಅದೇನು ದೊಡ್ಡ ಸುದ್ದಿ ಆಗುತ್ತಿರಲಿಲ್ಲ ಬಿಡಿ. ಹಸಿರು ಬಣ್ಣದ ತುಪ್ಪಳ ಹೊಂದಿರುವ 9 ಮರಿಗಳು ಜನ್ಮ ತಾಳಿವೆ.
ಉತ್ತರ ಜರ್ಮನಿಯ ವರ್ಮೆಸ್ಕರ್ಜನ್ ನ 43 ವರ್ಷದ ಜೊನ್ನಾ ಜಸ್ಟೀಸ್ ಈ ಹೊಸ ಅವತಾರದ ಶ್ವಾನ ಕಂಡು ಮೊದಲಿಗೆ ಬೆಚ್ಚಿಬಿದ್ದಿದ್ದಾರೆ. ತನ್ನ ಪ್ರೀತಿಯ ಶ್ವಾನ ಮೆಲೋಡಿ ಜನ್ಮ ನೀಡಿದಾಗಲೇ ಮಾಲಕಿಗೆ ಶಾಕ್ ಆಗಿತ್ತು.
ನಾಯಿ ದುರುಗುಟ್ಟಿ ನೋಡಿದ್ರೆ ನಿಮಗೆ ಕಾದಿದೆ ಗ್ರಹಚಾರ!
ಹಸಿರು ತುಪ್ಪಳದೊಂದಿಗೆ ಮೊದಲು ಜನ್ಮ ತಾಳಿದ ಗೋಲ್ಡನ್ ರಿಟ್ರೀವರ್ ತಳಿಯ ಈ ಶ್ವಾನಕ್ಕೆ ಮಾಲಕಿ ಮೋಜಿಟೋ ಎಂದು ಹೆಸರು ನೀಡಿದ್ದಾಳೆ. ಮೊಟ್ಟ ಮೊದಲ ಮರಿ ಹಸಿರು ತುಪ್ಪಳ ಇಟ್ಟುಕೊಂಡು ಜನ್ಮ ತಾಳಿದಾಗ ನಿಜಕ್ಕೂ ಚಿಂತೆಯಾಗಿತ್ತು. ಆದರೆ ನಂತರ ಒಂಭತ್ತು ಮರಿಗಳು ಹಾಗೆ ಜನಿಸಿದಾಗ ಎಲ್ಲವೂ ನಿರಾತಂಕವಾಯಿತು ಎಂದಿದ್ದಾರೆ.
ಈ ರೀತಿಯ ಹಸಿರು ತುಪ್ಪಳದ ಶ್ವಾನ ಜನನ ತುಂಬಾ ಅಪರೂಪ. ಶ್ವಾನ ಬೆಳೆದಂತೆ ಈ ಹಸಿರು ತುಪ್ಪಳ ಉದುರಿ ಮಾಲೂಲಿ ಬಣ್ಣಕ್ಕೆ ತಿರುಗಲಿದೆ.