Asianet Suvarna News Asianet Suvarna News

ಹಸಿರು ಬಣ್ಣದ ಶ್ವಾನಗಳ ಜನನ, ಕುತೂಹಲಕಾರಿ ಕತೆ ಅನಾವರಣ!

ಹಸಿರು ತುಪ್ಪಳ ಹೊಂದಿರುವ 9 ಶ್ವಾನದ ಮರಿಗಳಿಗೆ ಜನ್ಮ ನೀಡಿದ ಗೋಲ್ಡನ್ ರಿಟ್ರಿವರ್ ಶ್ವಾನ/ ಬಲು ಅಪರೂದ ಶ್ವಾನದ ಮರಿಗಳು/ ಮೊದಲು ಆತಂಕಕ್ಕೆ ಸಿಲುಕಿದ್ದ ಮಾಲಕಿ

Golden Retriever gives birth to green puppy due to rare condition
Author
Bengaluru, First Published Jan 20, 2020, 5:44 PM IST

ಜರ್ಮನಿ(ಜ. 20) ನಾಯಿಯೊಂದು ಒಂಬತ್ತು ಮರಿಗಳಿಗೆ ಜನ್ಮ ನೀಡಿದೆ. ಇಷ್ಟೆ ಆಗಿದ್ದರೆ ಅದೇನು ದೊಡ್ಡ ಸುದ್ದಿ ಆಗುತ್ತಿರಲಿಲ್ಲ ಬಿಡಿ.  ಹಸಿರು ಬಣ್ಣದ ತುಪ್ಪಳ ಹೊಂದಿರುವ 9  ಮರಿಗಳು ಜನ್ಮ ತಾಳಿವೆ.

ಉತ್ತರ ಜರ್ಮನಿಯ ವರ್ಮೆಸ್ಕರ್ಜನ್ ನ 43 ವರ್ಷದ ಜೊನ್ನಾ ಜಸ್ಟೀಸ್  ಈ ಹೊಸ ಅವತಾರದ ಶ್ವಾನ ಕಂಡು ಮೊದಲಿಗೆ ಬೆಚ್ಚಿಬಿದ್ದಿದ್ದಾರೆ.  ತನ್ನ ಪ್ರೀತಿಯ ಶ್ವಾನ ಮೆಲೋಡಿ ಜನ್ಮ ನೀಡಿದಾಗಲೇ ಮಾಲಕಿಗೆ ಶಾಕ್ ಆಗಿತ್ತು.

ನಾಯಿ ದುರುಗುಟ್ಟಿ ನೋಡಿದ್ರೆ ನಿಮಗೆ ಕಾದಿದೆ ಗ್ರಹಚಾರ!

ಹಸಿರು ತುಪ್ಪಳದೊಂದಿಗೆ ಮೊದಲು ಜನ್ಮ ತಾಳಿದ ಗೋಲ್ಡನ್ ರಿಟ್ರೀವರ್ ತಳಿಯ ಈ ಶ್ವಾನಕ್ಕೆ ಮಾಲಕಿ ಮೋಜಿಟೋ ಎಂದು ಹೆಸರು ನೀಡಿದ್ದಾಳೆ. ಮೊಟ್ಟ ಮೊದಲ ಮರಿ ಹಸಿರು ತುಪ್ಪಳ ಇಟ್ಟುಕೊಂಡು ಜನ್ಮ ತಾಳಿದಾಗ ನಿಜಕ್ಕೂ ಚಿಂತೆಯಾಗಿತ್ತು. ಆದರೆ ನಂತರ ಒಂಭತ್ತು ಮರಿಗಳು ಹಾಗೆ ಜನಿಸಿದಾಗ ಎಲ್ಲವೂ ನಿರಾತಂಕವಾಯಿತು ಎಂದಿದ್ದಾರೆ.

 ಈ ರೀತಿಯ ಹಸಿರು ತುಪ್ಪಳದ ಶ್ವಾನ ಜನನ ತುಂಬಾ  ಅಪರೂಪ. ಶ್ವಾನ ಬೆಳೆದಂತೆ ಈ ಹಸಿರು ತುಪ್ಪಳ ಉದುರಿ ಮಾಲೂಲಿ ಬಣ್ಣಕ್ಕೆ ತಿರುಗಲಿದೆ. 

 

Follow Us:
Download App:
  • android
  • ios