ನವದೆಹಲಿ[ಮಾ.14]: 4 ತಿಂಗಳ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡು, ಇದೀಗ ವಿಶ್ವದ 130 ದೇಶಗಳಿಗೆ ಹಬ್ಬಿರುವ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಶುಕ್ರವಾರ 5000ದ ಗಡಿದಾಟಿದೆ. ಮೊದಲಿಗೆ ಸೋಂಕು ಕಾಣಿಸಿಕೊಂಡ ಚೀನಾದಲ್ಲಿ ಅಚ್ಚರಿಯ ರೀತಿಯಲ್ಲಿ ಸಮಸ್ಯೆಯನ್ನು ನಿಗ್ರಹಿಸಲಾಗಿದ್ದು, ಗುರುವಾರ ಕೇವಲ 8 ಹೊಸ ಪ್ರಕರಣ ಬೆಳಕಿಗೆ ಬಂದಿದ್ದರೆ, ಕೇವಲ 7 ಜನ ಸಾವನ್ನಪ್ಪಿದ್ದಾರೆ.

ಆದರೆ ಮತ್ತೊಂದೆಡೆ ಇರಾನ್‌, ಇಟಲಿ ಮತ್ತು ಸ್ಪೇನ್‌ನಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಹಬ್ಬತೊಡಗಿದೆ. ಇರಾನ್‌ನಲ್ಲಿ ಶುಕ್ರವಾರ ಒಂದೇ ದಿನ 85 ಜನ ಸಾವನ್ನಪ್ಪಿದ್ದಾರೆ, ಸ್ಪೇನ್‌ನಲ್ಲೂ ಶುಕ್ರವಾರ ಒಂದೇ ದಿನ 36 ಜನ ಸಾವನ್ನಪ್ಪಿದ್ದಾರೆ.

1.40 ಲಕ್ಷ: ವಿಶ್ವದಾದ್ಯಂತ ಸೋಂಕಿಗೆ ತುತ್ತಾದವರು

5122: ವಿಶ್ವದಾದ್ಯಂತ ಸಾವನ್ನಪ್ಪಿದವರ ಸಂಖ್ಯೆ

130: ಕೊರೋನಾ ಸೋಂಕು ಹಬ್ಬಿದ ದೇಶಗಳ ಸಂಖ್ಯೆ

ಟಾಪ್‌ 5 ಅತಿ ಹೆಚ್ಚು ಸಾವಿನ ಪ್ರಮಾಣ

ಚೀನಾ: 3177

ಇಟಲಿ: 1016

ಇರಾನ್‌: 514

ಸ್ಪೇನ್‌: 122

ದ.ಕೊರಿಯಾ: 71