Asianet Suvarna News Asianet Suvarna News

ಇನಿಯನ ಸ್ವಾಗತಕ್ಕೆ ಓಡಿ ಬಂದಾಕೆಗೆ ಇದೇನಾಯ್ತು ನೋಡಿ: ಪ್ರೀತಿಯಲ್ಲಿ ಬೀಳೋದು ಅಂದ್ರೆ ಇದೇನಾ?

ಯುವ ಪ್ರೇಮಿಗಳು ಬಹಳ ದಿನದ ನಂತರ ಪರಸ್ಪರ ಭೇಟಿಯಾಗಿದ್ದು, ಹೀಗೆ ಗೆಳೆಯನ  ಭೇಟಿಗೆ ಬಂದ ಯುವತಿ ಹಾಗೂ ಪ್ರೇಮಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

girl suddenly fell down who came to airport welcoming her boyfriend akb
Author
Bangalore, First Published Aug 9, 2022, 9:46 AM IST

ಯುವ ಪ್ರೇಮಿಗಳು ಬಹಳ ದಿನದ ನಂತರ ಪರಸ್ಪರ ಭೇಟಿಯಾಗಿದ್ದು, ಹೀಗೆ ಗೆಳೆಯನ  ಭೇಟಿಗೆ ಬಂದ ಯುವತಿ ಹಾಗೂ ಪ್ರೇಮಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬರೀ ಪ್ರೇಮಿಗಳು ಮಾತ್ರವಲ್ಲ, ಸ್ನೇಹಿತರು ಬಂಧುಗಳು ಅಕ್ಕ ತಂಗಿ ಅಣ್ಣ ತಮ್ಮ ಅಮ್ಮ ಮಗ, ಅಪ್ಪ ಮಗ ಹೀಗೆ ಅನೇಕರು ಒಬ್ಬರನ್ನೊಬ್ಬರು ಧೀರ್ಘಕಾಲ ಭೇಟಿಯಾಗದೇ ಬಹಳ ಸಮಯದ ನಂತರ ಭೇಟಿಯಾದಾಗ ಅಲ್ಲಿ ಮಾತಿಗಿಂತ ಭಾವನೆಗಳಿಗೆ ಜಾಗ ಹೆಚ್ಚು. ಅನೇಕರು ಈ ಸಂದರ್ಭದಲ್ಲಿ ಖುಷಿಯಲ್ಲಿ ಕಣ್ಣೀರಿಡುತ್ತಾರೆ. ಮತ್ತೆ ಅನೇಕರು ತಮ್ಮವರನ್ನು ಎತ್ತಿ ಮುದ್ದಾಡುತ್ತಾರೆ. ಕೆಲವರು ವಿಭಿನ್ನವಾಗಿ ಸರ್‌ಫ್ರೈಸ್ ನೀಡುತ್ತಾರೆ. ಇನ್ನು ಯುವ ಪ್ರೇಮಿಗಳನಂತೂ ಕೇಳುವುದೇ ಬೇಡ. ಪ್ರೀತಿಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದರಲ್ಲಿ ಕೆಲ ಪ್ರೇಮಿಗಳು ಒಂದು ಕೈ ಮೇಲೆ ಇರುತ್ತಾರೆ. ಅದರಲ್ಲೂ ವಿದೇಶಗಳಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಮನೆ ಸಾರ್ವಜನಿಕ ಸ್ಥಳ ಎಂಬುದಿಲ್ಲ. ಎಲ್ಲೆಂದರಲ್ಲಿ ಪ್ರೇಮಿಗಳು ಕೈ ಕೈ ಹಿಡಿದು ಹಾಯಾಗಿ ಓಡಾಡುತ್ತಾರೆ ಪ್ರೀತಿ ಮಾಡುತ್ತಾರೆ.

ಅದೇ ರೀತಿ ಇಲ್ಲೊಬ್ಬಳು ಯುವತಿ ತನ್ನ ಇನಿಯನ ಸ್ವಾಗತಕ್ಕೆ ಏರ್‌ಪೋರ್ಟ್‌ಗೆ ಬಂದಿದ್ದಾಳೆ. ಬಂದವಳೆ ತನ್ನ ಗೆಳೆಯನ ಕಂಡು ವೇಗವಾಗಿ ಓಡಿದ್ದು, ಇದಕ್ಕೆ ಸರಿಯಾಗಿ ಆಕೆಯ ಗೆಳೆಯನ ಕಾಲು ಜಾರಿದ್ದು, ಇಬ್ಬರು ಕೆಳಗೆ ಬಿದ್ದಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದವರು ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರ. ಬಿದ್ದ ರಭಸಕ್ಕೆ ಯುವತಿಯ ಮುಖಕ್ಕೆ ಹಾನಿಯಾಗಿರಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು ಯುವತಿ ಯುವಕನಿಗೆ ನಾಜೂಕಾದ ನೆಲದಲ್ಲಿ ಜಾರದಂತಹ ಒಂದು ಜೊತೆ ಚಪ್ಪಲ್‌ ಅನ್ನು ತೆಗೆಸಿಕೊಡಬೇಕು. ಆತ ಧರಿಸಿರುವ ಚಪ್ಪಲ್ ಜಾರುತ್ತಿದೆ ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.

ಆತ್ಮಹತ್ಯೆಗೆ ಮುಂದಾದ ಪ್ರೇಮಿಗಳು: ಕೊನೆ ಕ್ಷಣದಲ್ಲಿ ಕಹಾನಿ ಮೇ ಟ್ವಿಸ್ಟ್: ದೂರು ದಾಖಲು

 

ಅಕ್ಷರಶಃ ಪ್ರೀತಿಯಲ್ಲಿ ಬೀಳುವುದು ಎಂದರೆ ಇದೇ ಅಂತೆ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಯುವಕನ ಮೇಲಿನ ಯುವತಿಯ ಪ್ರೀತಿಗೆ ಖುಷಿ ಪಟ್ಟಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ನೋಡುಗರ ಮುಖದಲ್ಲಿ ನಗು ಮೂಡಿಸುತ್ತಿದೆ. ಈ ವಿಡಿಯೋವನ್ನು ಏರ್‌ಪೋರ್ಟ್‌ನ ಲ್ಲಿ ಸೆರೆ ಹಿಡಿಯಲಾಗಿದೆ. ಹರ್‌ಪ್ರೀತ್ ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಮಂದಾರ್ತಿ ಗುಡ್ಡಕ್ಕೆ ಬಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ವಿಷ ಸೇವಿಸಿ ಸಾವಿಗೆ ಶರಣಾದ ಪ್ರೇಮಿಗಳು: 

ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದಿತ್ತು. ಉತ್ತರಕನ್ನಡ ಜಿಲ್ಲೆ ಹಳಿಯಾಳ ಮೂಲದ ಜ್ಯೋತಿ ಸುರೇಶ ಅಂತ್ರೋಳಕರ(19) ಮತ್ತು ರಿಕೇಶ್​ ಸುರೇಶ ಮಿರಾಶಿ(20) ಮೃತ ದುರ್ದೈವಿಗಳು. ಇವರಿಬ್ಬರೂ ಹಳಿಯಾಳದ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ,  ತಿಂಗಳ ಹಿಂದೆ ಯುವತಿಯ ಪಾಲಕರು ಈಕೆಗೆ ಬೇರೊಬ್ಬ ಯುವಕನ ಜತೆ ಮದುವೆ ಮಾಡಿದ್ದರು. ಪ್ರಿಯಕರನನ್ನು ಬಿಟ್ಟು ಬದುಕಲಾಗದೆ ಜ್ಯೋತಿ, ಜುಲೈ 15ರಂದು ಮುಂಡಗೋಡು ರಸ್ತೆಯಲ್ಲಿ ಪ್ರಿಯಕರ ರಿಕೇಶ್​ ಜತೆ ವಿಷ ಸೇವಿಸಿದ್ದಳು. ಬಳಿಕ ತೀವ್ರ ಅಸ್ವಸ್ಥಗೊಂಡ ಪ್ರೇಮಿಗಳನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನ ಸಾವು-ಬದುಕಿನ ನಡುವೆ ಹೋರಾಡಿದ ಪ್ರೇಮಿಗಳು ಚಿಕಿತ್ಸೆ ಫಲಿಸದೇ ದುರಂತ ಅಂತ್ಯ ಕಂಡಿದ್ದಾರೆ. ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios