ಆಕ್ರಾ[ಮಾ.23]: ದಕ್ಷಿಣ ಘಾನಾದಲ್ಲಿ ಎರಡು ಬಸ್‌ಗಳ ಮಧ್ಯ ಮುಖಾಮುಖಿ ಡಿಕ್ಕಿ ಸಂಭವಿಸಿ 60 ಜನರು ಸಾವಿಗೀಡಾದ ದುರ್ಘಟನೆ ಶುಕ್ರವಾರ ನಡೆದಿದೆ.

28 ಜನರು ಗಾಯಗೊಂಡಿದ್ದು, ಈ ಪೈಕಿ 7 ಜನರ ಸ್ಥಿತಿ ಚಿಂತಾಜನಕವಾಗಿದೆ. ಡಿಕ್ಕಿಯ ತೀವ್ರತೆಯಿಂದ ಎರಡೂ ಬಸ್‌ಗಳನ್ನು ಬೇರ್ಪಡಿಸುವುದೇ ಕಷ್ಟಕರವಾಗಿದ್ದು, ಡಿಕ್ಕಿ ಸಂಭವಿಸುತ್ತಿದ್ದಂತೆಯೇ ಒಂದು ಬಸ್‌ಗೆ ಬೆಂಕಿ ಹೊತ್ತಿಕೊಂಡು ಮತ್ತಷ್ಟುಜನರ ಸಾವಿಗೆ ಕಾರಣವಾಗಿದೆ.

ಡಿಕ್ಕಿ ಮಾಹಿತಿ ಲಭಿಸುತ್ತಿದ್ದಂತೆಯೇ ಗಾಯಾಳುಗಳನ್ನು ಕಿಂಟಾಂಪೊಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.