ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಮೆಟ್ರೋ ಸ್ಫೋಟಿಸುವ ಬೆದರಿಕೆ; ಮಹಿಳೆಗೆ ಪ್ಯಾರಿಸ್ ಪೊಲೀಸರ ಗುಂಡೇಟು!
ಅಲ್ಲಾಹು ಅಕ್ಬರ್ ಘೋಷಣೆ ಕೂಗಿ ಮೆಟ್ರೋ ನಿಲ್ದಾಣ ಸ್ಫೋಟಿಸುವ ಬೆದರಿಕೆ ಹಾಕಿದ ಮಹಿಳೆಗೆ ಪ್ಯಾರಿಸ್ ಪೊಲೀಸರು ಗುಂಡಿನ ಉತ್ತರ ನೀಡಿದ್ದಾರೆ. ಮಹಿಳೆ ವಶಕ್ಕೆ ಪಡೆದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ಯಾರಿಸ್(ಅ.31)ಹಮಾಸ್ ಉಗ್ರರ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ಪ್ರತಿದಾಳಿಯನ್ನು ಹಲವೆಡೆ ಖಂಡಿಸಲಾಗುತ್ತಿದೆ. ಇಷ್ಟೇ ಅಲ್ಲ ಯಹೂದಿಗಳನ್ನು ಮೇಲೆ ಹಲವು ದೇಶಗಳಲ್ಲಿ ಹಲ್ಲೆಗಳು, ಹತ್ಯೆಗಳು ನಡೆಯುತ್ತಿದೆ. ಪ್ಯಾರಿಸ್‌ನಲ್ಲೂ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ಯಾಲೆಸ್ತಿನ್ ಹಾಗೂ ಹಮಾಸ್ ಉಗ್ರರ ಪರ ಹೋರಾಟಗಳು ನಡೆಯುತ್ತಿದೆ. ಇದೀಗ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ಪ್ಯಾರಿಸ್ ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ ಹಿಜಾಬ್ ಧಾರಿಣಿ ಮಹಿಳೆ, ನಿಲ್ದಾಣ ಸ್ಫೋಟಿಸುವ ಬೆದರಿಕೆ ಹಾಕಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಮಹಿಳೆಗೆ ಶರಣವಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ ನಿಲ್ದಾಣ ಸ್ಫೋಟಿಸಿಯೇ ತೀರುತ್ತೇನೆ ಎಂದು ಹೊರಟ ಮಹಿಳೆಗೆ ಮೇಲೆ ಪೊಲೀಸರು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.
ಫ್ರಾನ್ಸ್‌ನ ಬಿಬ್ಲಿಕ್ಯೂ ನ್ಯಾಷನಾಲೆ ಡೆ ಫ್ರಾನ್ಸ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.ಹಿಜಾಬ್ ಧರಿಸಿದ್ದ ಮಹಿಳೆ ಏಕಾಏಕಿ ಮೆಟ್ರೋ ನಿಲ್ದಾಣಕ್ಕೆ ನುಗಿದ್ದಾರೆ. ಅಲ್ಲಾಹು ಅಕ್ಬರ್ ಘೋಷಣ ಕೂಗುತ್ತಾ ನಿಲ್ದಾಣದೊಳಕ್ಕೆ ಪ್ರವೇಶಿಸಿದ ಮಹಿಳೆ ಬೆದರಿಕೆ ಹಾಕಿದ್ದಾರೆ. ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುತ್ತೇನೆ. ನೀವೆಲ್ಲಾ ಸಾಯಬೇಕು ಎಂದು ಮಹಿಳೆ ಏರು ಧ್ವನಿಯಲ್ಲೂ ಕೂಗಿದ್ದಾರೆ.
ಇಸ್ರೇಲ್ ಮಹಿಳೆಯ ವಿವಸ್ತ್ರಗೊಳಿಸಿ ಹಮಾಸ್ ಉಗ್ರರ ದಾಳಿ, ಅಲ್ಲಾಹು ಅಕ್ಬರ್ ಘೋಷಣೆ!
ಮೆಟ್ರೋದ ಭದ್ರತಾ ಪಡೆ ತಕ್ಷಣ ಕಾರ್ಯಪ್ರವೃತ್ತವಾಗಿದೆ. ಕೈ ಮೇಲೆತ್ತಿ ಪೊಲೀಸರಿಗೆ ಶರಣವಾಗುವಂತೆ ಎಚ್ಚರಿಕೆ ನೀಡಲಾಗಿದೆ. ಮೈಕ್ ಮೂಲಕ ಎಚ್ಚರಿಸಿದ ಪೊಲೀಸರಿಗೆ ಮಹಿಳೆ ಬೆದರಿಸಿದ್ದಾಳೆ. ಹತ್ತಿರ ಬಂದರೆ ಸ್ಫೋಟಿಸಿ ಜನರನ್ನು ಸಾಯುಸುವುದಾಗಿ ಬೆದರಿಸಿದ್ದಾರೆ. ಈ ವೇಳೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಮಹಿಳೆ ಕುಸಿದು ಬಿದ್ದಿದ್ದಾಳೆ.
ತಕ್ಷಣವೇ ವಶಕ್ಕೆ ಪಡೆದ ಪೊಲೀಸರು ಮಹಿಳೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಸ್ಫೋಟಕಗಳು ಪತ್ತೆಯಾಗಿಲ್ಲ. ಆದರೆ ಕೆಲ ಸಂಶಾಯಾಸ್ಪದ ವಸ್ತುಗಳು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಮಹಿಳೆಯ ನಡೆ ಇಸ್ಲಾಮಿಕ್ ಭಯೋತ್ಪಾದಕ ದಾಳಿ ರೀತಿಯಲ್ಲೇ ಇತ್ತು. ನೆರೆದಿದ್ದ ಜನ ದಿಕ್ಕುಪಾಲಾಗಿ ಓಡತೊಡಗಿದ್ದರು. ಮಹಿಳೆಯರು ಮಕ್ಕಳು ಬಿದ್ದು ಗಾಯಗೊಂಡಿದ್ದಾರೆ. ಜನರ ಸುರಕ್ಷತೆಗಾಗಿ ಮಹಿಳೆಯನ್ನು ವಶಕ್ಕೆ ಪಡೆಯುವುದು ಅನಿವಾರ್ಯವಾಗಿತ್ತು. ಮಹಿಳೆಗೆ ಶರಣವಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ ಮಹಿಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗುತ್ತಾ ನಿರ್ಲಕ್ಷ್ಯಸಿದ್ದಾರೆ. ಹೀಗಾಗಿ ಗುಂಡಿನ ದಾಳಿ ನಡೆಸಲಾಗಿದೆ ಎಂದು ಪ್ಯಾರಿಸ್ ಪೊಲೀಸರು ಹೇಳಿದ್ದಾರೆ.
ಮದನಿ ಮೊಂಡುವಾದಕ್ಕೆ ಬೆಂಬಲ, ಮನುಸ್ಮೃತಿ ಅಲ್ಲಾ ಮೇಲೆ ನಂಬಿಕೆ ಇಟ್ಟಿದ್ದ, ಸಾಜಿದ್ ರಶೀದಿ ಹೊಸ ವಿವಾದ!