* ಅಫ್ಘಾನಿಸ್ತಾನ ತಾಲಿಬಾನ್ ವಶವಾದ ನಂತರ ಕಾಬೂಲ್‌ನಿಂದ ಹೊರಟ ಮೊದಲ ಫ್ರಾನ್ಸ್ ವಿಮಾನ* ಕಾಬೂಲ್‌ನಿಂದ 21 ಭಾರತೀಯರನ್ನು ಕರೆತಂದ ಫ್ರೆಂಚ್ ವಿಮಾನ
ನವದೆಹಲಿ(ಆ.19): ಅಷ್ಘಾನಿಸ್ತಾನ ತಾಲಿಬಾನ್ ವಶವಾದ ನಂತರ ಕಾಬೂಲ್‌ನಿಂದ ಹೊರಟ ಮೊದಲ ಫ್ರಾನ್ಸ್ ವಿಮಾನದಲ್ಲಿ 21 ಜನ ಭಾರತೀಯರನ್ನು ಸುರಕ್ಷಿತವಾಗಿ ಕರೆದೊಯ್ಯಲಾಗಿದೆ.
ಈ ಕುರಿತು ಭಾರತ ಸರ್ಕಾರಕ್ಕೆ ಭಾರತದಲ್ಲಿರುವ ಫ್ರೆಂಚ್ ರಾಯಭಾರಿ ಇಮ್ಯಾನುಯಲ್ ಲೆನಿನ್ ಮಾಹಿತಿ ನೀಡಿದ್ದಾರೆ. ಅಷ್ಘಾನಿಸ್ತಾನದಿಂದ ಹೊರಟ ಮೊದಲ ಫ್ರೆಂಚ್ ವಿಮಾನದಲ್ಲಿ 21 ಭಾರತೀಯರನ್ನುಕರೆದೊಯ್ಯಲಾಗಿದೆ ಎಂದು ಫ್ರೆಂಚ್ ರಾಯಭಾರಿ ಟ್ವೀಟ್ ಮಾಡಿದ್ದಾರೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಯುರೋಪಿನ ವಿದೇಶಾಂಗ ಸಚಿವರೊಡನೆ ಸಂಪರ್ಕದಲ್ಲಿದ್ದರು. ಹಾಗಾಗಿ ಕಾಬೂಲ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಸಾಧ್ಯವಾಯಿತು.
