ಫ್ರಾನ್ಸ್ ವಿರುದ್ಧ ಕತ್ತಿ ಮಸೆದ ಪಾಕಿಸ್ತಾನಕ್ಕೆ ಆಘಾತ, ಮಿರಾಜ್, ಸಬ್‌ಮರೀನ್‌ಗೆ ತಾಂತ್ರಿಕ ನೆರವು ಕಟ್!

ಫ್ರಾನ್ಸ್ ವಿರುದ್ಧ ಮುಸ್ಲಿಂ ರಾಷ್ಟ್ರಗಳನ್ನು ಒಗ್ಗೂಡಿಸಿ ಹೋರಾಟಕ್ಕೆ ಮುಂದಾಗಿದ್ದ ಪಾಕಿಸ್ತಾನಕ್ಕೆ ಇದೀಗ ತಕ್ಕ ಶಾಸ್ತಿಯಾಗಿದೆ. ಫ್ರಾನ್ಸ್ ನಿರ್ಧಾರದಿಂದ ಇದೀಗ ಪಾಕಿಸ್ತಾನದ ಯುದ್ದ ವಿಮಾನಗಳೆಲ್ಲಾ ಏರ್ ಬೇಸ್‌ನಲ್ಲೇ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.

France decided against helping Pakistan upgrade Mirage fighter jets submarines ckm

ಪ್ಯಾರಿಸ್(ನ.20): ಮೊಹಮ್ಮದ್ ಪೈಗಂಬರ ಕಾರ್ಟೂನ್ ತೋರಿಸಿದ ಶಿಕ್ಷನ ತಲೆ ಕಡಿದ ಘಟನೆ ಫ್ರಾನ್ಸ್ ಮಾತ್ರವಲ್ಲ ವಿಶ್ವದೆಲ್ಲೆಡೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಪಾಕಿಸ್ತಾನ ಸೇರಿದಂತೆ ಕೆಲ ಮುಸ್ಲಿಂ ರಾಷ್ಟ್ರಗಳು ಫ್ರಾನ್ಸ್ ವಿರುದ್ಧ ಕೆಂಡ ಕಾರಿತ್ತು. ಫ್ರಾನ್ಸ್ ಅಧ್ಯಕ್ಷ ಇಸ್ಲಾಮಿಕ್ ಟೆರರ ಅಟ್ಯಾಕ್ ಎಂದು ಕರೆದ ಕಾರಣ ಭಾರಿ ಪ್ರತಿಭಟನೆಗಳು ನಡೆದಿತ್ತು. ಪಾಕಿಸ್ತಾನ ಒಂದು ಹೆಜ್ಜೆ ಮುಂದೆ ಹೋಗಿ ಫ್ರಾನ್ಸ್ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಒಗ್ಗಟ್ಟಾಗಿ ಹೋರಾಡಬೇಕು ಎಂಬ ವಾದ ಮಂಡಿಸಿತ್ತು. ಮುಸ್ಲಿಂ ರಾಷ್ಟ್ರಗಳ ಮುಂದಾಳತ್ವ ವಹಿಸಲು ಹೋದ ಪಾಕಿಸ್ತಾನಕ್ಕೆ ಇದೀಗ ಫ್ರಾನ್ಸ್ ಸರಿಯಾಗಿ ತಿರುಗೇಟು ನೀಡಿದೆ.

ಪ್ರವಾದಿ ಮುಹಮ್ಮದ್  ಕಾರ್ಟೂನ್ ತೋರಿಸಿದ ಶಿಕ್ಷಕನ ತಲೆ ಕಡಿದವ ಶೂಟೌಟ್!.

ಫ್ರಾನ್ಸ್‌ನಿಂದ ಪಾಕಿಸ್ತಾನ ಖರೀದಿಸಿರುವ ಮಿರಾಜ್ ಯುದ್ದ ವಿಮಾನ, ಏರ್ ಡಿಫೆನ್ಸ್ ಸಿಸ್ಟಮ್, ಆಗೊಸ್ಟಾ 90B ಕ್ಲಾಸ್ ಸಬ್ ಮರೀನ್‌ ಅಪ್‌ಗ್ರೇಡ್ ಮಾಡದಿರಲು ಫ್ರಾನ್ಸ್ ನಿರ್ಧರಿಸಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಫ್ರಾನ್ಸ್ ಪ್ರಧಾನಿ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದಲ್ಲದ್ದೇ, ಮುಸ್ಲೀಂ ರಾಷ್ಟ್ರಗಳನ್ನು ಫ್ರಾನ್ಸ್ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡಿದ ಫಲವಾಗಿ ಇದೀಗ ಫ್ರಾನ್ಸ್ ಈ ನಿರ್ಧಾರ ತೆಗೆದುಕೊಂಡಿದೆ.

ಇಸ್ಲಾಂ ಉಗ್ರವಾದ ವಿರುದ್ಧ ನಮ್ಮ ಹೋರಾಟ, ಇಸ್ಲಾಂ ವಿರುದ್ಧ ಅಲ್ಲ: ಫ್ರಾನ್ಸ್ ಅಧ್ಯಕ್ಷ!.

ಫ್ರಾನ್ಸ್ ನಿರ್ಧಾರ ಇದೀಗ ಪಾಕಿಸ್ತಾನವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಫ್ರಾನ್ಸ್‌ನಿಂದ ಖರೀದಿಸಿ 150 ಮಿರಾಜ್ ಫೈಟರ್ ಜೆಟ್ ಪಾಕಿಸ್ತಾನದಲ್ಲಿದೆ. ಇದೀಗ ತಾಂತ್ರಿಕ ನೆರವು ಸ್ಥಗಿತಗೊಳಿಸಿರುವುದು ಪಾಕಿಸ್ತಾನ ವಾಯು ಸೇನೆ ತೀವ್ರ ಪರಿಣಾಮ ಎದುರಿಸಲಿದೆ. ಇತ್ತ ಪಾಕ್ ನೌಕಪಾಡೆಯ ಜಲಾಂತರ್ಗಾಮಿಗೂ ಇದೇ ಕಂಟಕ ಎದುರಾಗಿದೆ.

ಇತ್ತೀಚೆಗೆ ಭಾರತ ರಾಫೆಲ್ ಯುದ್ದವಿಮಾನ ಖರೀದಿಸಿದೆ. ಖರೀದಿ ಒಪ್ಪಂದ ವೇಳೆ ಯಾವುದೇ ಪಾಕಿಸ್ತಾನಿ ಅಥವಾ ಪಾಕ್ ಮೂಲದ ಟೆಕ್ನಿಷೀಯನ್ ರಾಫೆಲ್ ಯುದ್ದ ವಿಮಾನ ಉತ್ಪಾದನೆಯಲ್ಲಿ ಇರಬಾರದು ಎಂದು ಭಾರತ ಸೂಚಿಸಿತ್ತು. ಕಾರಣ ತಂತ್ರಜ್ಞಾನ ಸೋರಿಯಾಗುವ ಸಂಭವ ಹೆಚ್ಚಿದೆ. ಇಷ್ಟೇ ಅಲ್ಲ ಪಾಕಿಸ್ತಾನ ಚೀನಾ ಜೊತೆ ಹಲವು ಸೇನಾ ಒಪ್ಪಂದವಿರುವ ಕಾರಣ ಭಾರತ ಈ ರೀತಿ ಸೂಚಿಸಿತ್ತು ಎಂದು ಫ್ರಾನ್ಸ್ ಹೇಳಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಚಾರ್ಲಿ ಹೆಬ್ಡೋ ನಿಯತಕಾಲಿಕೆ ಪತ್ರಿಕೆ ಕಚೇರಿ ಹೊರಭಾಗದಲ್ಲಿ ಪಾಕಿಸ್ತಾನ ಮೂಲದ ಯುವಕ ದಾಳಿ ಮಾಡಿ ಹಲವರನ್ನು ಕೊಂದಿದ್ದ. ಈ ಘಟನೆ ಕುರಿತು ಪಾಕಿಸ್ತಾನದಲ್ಲಿರುವ ಯುವಕನ ತಂದೆ ಹೆಮ್ಮೆ ವ್ಯಕ್ತಪಡಿಸಿದ್ದರು. ಪಾಕಿಸ್ತಾನ ಹಾಗೂ ಪಾಕಿಸ್ತಾನದ ಹಲವರು ಫ್ರಾನ್ಸ್ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ. ಫ್ರಾನ್ಸ್ ದೇಶ ಯಾವತ್ತೂ ಭಯೋತ್ಪಾದನೆ ಸಹಿಸುವುದಿಲ್ಲ ಎಂದಿದೆ.

Latest Videos
Follow Us:
Download App:
  • android
  • ios